ಮನೆ ಅಂತಾರಾಷ್ಟ್ರೀಯ ಪ್ರವಾಸಿಗನ ಎಡವಟ್ಟಿಗೆ ಸುಟ್ಟುಹೋಯ್ತು ಹಳೆಯ ದೇವಾಲಯ

ಪ್ರವಾಸಿಗನ ಎಡವಟ್ಟಿಗೆ ಸುಟ್ಟುಹೋಯ್ತು ಹಳೆಯ ದೇವಾಲಯ

0

ಬೀಜಿಂಗ್‌ : ಪ್ರವಾಸಿಗನೊಬ್ಬನ ಎಡವಟ್ಟಿನಿಂದ ಚೀನಾದಲ್ಲಿ 1500 ವರ್ಷಗಳ ಹಳೆಯ ದೇವಾಲಯ ಸುಟ್ಟು ಹೋಗಿದೆ.

ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್ಕಿಂಗ್ ದೇವಾಲಯದ 3 ಅಂತಸ್ತಿನ ಕಟ್ಟಡ ಸಂಪೂರ್ಣ ನಾಶವಾಗಿದೆ. ಆದರೆ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಈ ದೇವಾಲಯ 1500 ವರ್ಷಗಳ ಹಳೆಯದಾಗಿದ್ದರೂ 1990ರಲ್ಲಿ ಕೆಲವು ಮರು ನಿರ್ಮಾಣವಾಗಿತ್ತು. ಈಗ ಬೆಂಕಿ ಬಿದ್ದ ವೆನ್‌ಚಾಂಗ್ ಪೆವಿಲಿಯನ್ ಕಟ್ಟಡವನ್ನು 2008-2009ರಲ್ಲಿ ಸಂಪೂರ್ಣವಾಗಿ ಕಟ್ಟಿಗೆಯಿಂದ ಕಟ್ಟಲಾಗಿತ್ತು.

ದೇವಾಲಯಕ್ಕೆ ತೆರಳಿದ ಪ್ರವಾಸಿಗನೊಬ್ಬ ಧೂಪ ಮತ್ತು ಮೇಣದ ಬತ್ತಿಗಳನ್ನ ಎಲ್ಲೆಂದರಲ್ಲಿ ಹಚ್ಚಿದ ಪರಿಣಾಮ ಈ ಅನಾಹುತ ಸಂಭವಿಸಿದೆ. ಈ ದೇವಾಲಯ ಚೀನಾದ ಫೆಂಗ್‌ಹುವಾಂಗ್ ಪರ್ವತದ ತಪ್ಪಲಿನಲ್ಲಿ ನೆಲೆನಿಂತಿದೆ.

ಚೀನಾದ ದಕ್ಷಿಣ ರಾಜವಂಶಗಳ 480 ದೇವಾಲಯಗಳ ಗುಂಪಿನಲ್ಲಿ ಈ ದೇವಾಲಯ ಸೇರ್ಪಡೆಯಾಗಿದೆ. ಈ ದೇವಾಲಯ ಚೀನಾದ ಬೌದ್ಧ ಮತ್ತು ಸಾಹಿತ್ಯ ಪರಂಪರೆಗೆ ಕೊಂಡಿಯಾಗಿದೆ.