ಮನೆ ಅಪರಾಧ ಅಶ್ಲೀಲ ವಿಡಿಯೋ ನೋಡಿ ಅಪ್ರಾಪ್ತ ತಂಗಿಯನ್ನೇ ಅತ್ಯಾಚಾರಗೈದು ಕೊಲೆ ಮಾಡಿದ ಅಣ್ಣ

ಅಶ್ಲೀಲ ವಿಡಿಯೋ ನೋಡಿ ಅಪ್ರಾಪ್ತ ತಂಗಿಯನ್ನೇ ಅತ್ಯಾಚಾರಗೈದು ಕೊಲೆ ಮಾಡಿದ ಅಣ್ಣ

0

ಲಕ್ನೋ: ಅಶ್ಲೀಲ ವಿಡಿಯೋ ನೋಡಿ ಅಪ್ರಾಪ್ತ ತಂಗಿಯನ್ನೇ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಫೆಬ್ರವರಿ 3 ರ ರಾತ್ರಿ ಈ ಘಟನೆ ನಡೆದಿದ್ದು,19 ವರ್ಷದ ಸಹೋದರ ಸಂಜು ತನ್ನ ತಂಗಿಯ ಪಕ್ಕದಲ್ಲಿ ಮಲಗಿದ್ದ. ಈ ವೇಳೆ ತಾಯಿ ಸಂಬಂಧಿಕರ ಮನೆಗೆ ತೆರಳಿದ್ದು, ಅಣ್ಣ – ತಂಗಿ ಮಾತ್ರ ಮನೆಯಲ್ಲಿದ್ದರು. ಸಂಜು ತನ್ನ ಮೊಬೈಲ್‌ ಫೋನಿನಲ್ಲಿ ಆಶ್ಲೀಲ ವಿಡಿಯೋಗಳನ್ನು ನೋಡಿ, ಆ ಬಳಿಕ ತಂಗಿಯ ಮೇಲೆ ಅತ್ಯಾಚಾರಗೈದಿದ್ದಾನೆ. ಆ ಬಳಿಕ ತಾನುವೆಸಗಿದ ಕೃತ್ಯವನ್ನು ತಂಗಿ ಬಹಿರಂಗಪಡಿಸಬಹುದೆನ್ನುವ ಭೀತಿಯಲ್ಲಿ ಸಂಜು ಸಹೋದರಿಯ ಕತ್ತು ಹಿಸುಕಿ ಕೊಲೆಗೈದು, ಅಲ್ಲಿಂದ ಪರಾರಿಯಾಗಿದ್ದಾನೆ.

ಮರುದಿನ ಬಾಲಕಿಯ ಚಿಕ್ಕಪ್ಪ ರಾಧೇಶ್ಯಾಮ್ ಸಂಜು ವಿರುದ್ಧ ದೂರು ದಾಖಲಿಸಿದ್ದಾರೆ. ಫೆಬ್ರವರಿ 5 ರಂದು(ಸೋಮವಾರ) ಪೊಲೀಸರು ಆರೋಪಿಯನ್ನು ಬಂಧಿಸಿದ್ದು,ವಿಚಾರಣೆಯ ಸಮಯದಲ್ಲಿ, ಸಂಜು ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ಆಶ್ಲೀಲ ವಿಡಿಯೋಗಳಿದ್ದ ಮೊಬೈಲ್ ಫೋನ್ ನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಕಾಸ್‌ ಗಂಜ್‌ ನ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.