ಮನೆ ಕ್ರೀಡೆ ಒಲಿಂಪಿಕ್: ಭಾರತ ಪ್ರತಿನಿಧಿಸಲಿರುವ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ

ಒಲಿಂಪಿಕ್: ಭಾರತ ಪ್ರತಿನಿಧಿಸಲಿರುವ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ

0

ನವದೆಹಲಿ: ಫ್ರಾನ್ಸ್‌ ನ ಪ್ಯಾರಿಸ್‌ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು 117 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಈ ಸಂಬಂಧ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

Join Our Whatsapp Group

ಭಾರತದಿಂದ ತೆರಳಲಿರುವ ಕ್ರೀಡಾಪಟುಗಳೊಂದಿಗೆ 140 ಸಹಾಯಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಇರಲಿದ್ದಾರೆ. ಈ ಪೈಕಿ 72 ಮಂದಿಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

ಆದರೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೂ ಷಾಟ್‌ಪಟ್ ಸ್ಪರ್ಧಿ ಅಭಾ ಖತುವಾ ಅವರ ಹೆಸರು ಪಟ್ಟಿಯಲ್ಲಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ವಿಶ್ವ ಅಥ್ಲೆಟಿಕ್ಸ್ ಪ್ರಕಟಿಸಿದ ಭಾರತೀಯ ಕ್ರೀಡಾಪಟುಗಳ ಪಟ್ಟಿಯಲ್ಲೂ ಅಭಾ ಹೆಸರಿರಲಿಲ್ಲ.

ಅಭಾ ಹೆಸರು ಕೈಬಿಟ್ಟಿರುವುದಕ್ಕೆ ಐಒಎ ಯಾವುದೇ ಕಾರಣವನ್ನು ನೀಡಿಲ್ಲ.

ಭಾರತವನ್ನು ಅಥ್ಲೆಟಿಕ್ಸ್ ವಿಭಾಗದಲ್ಲಿ ಅತಿ ಹೆಚ್ಚು ಕ್ರೀಡಾಪಡುಗಳು ಪ್ರತಿನಿಧಿಸಲಿದ್ದಾರೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದಂತೆ ಒಟ್ಟು 29 ಮಂದಿ ಕ್ರೀಡಾಪಟುಗಳು ಇದ್ದಾರೆ.

ಶೂಟಿಂಗ್‌ನಲ್ಲಿ 21, ಹಾಕಿಯಲ್ಲಿ 19, ಟೇಬಲ್ ಟೆನಿಸ್‌ನಲ್ಲಿ 8, ಬ್ಯಾಡ್ಮಿಂಟನ್‌ 7, ಕುಸ್ತಿ, ಆರ್ಚರಿ ಹಾಗೂ ಬಾಕ್ಸಿಂಗ್‌ನಲ್ಲಿ ತಲಾ 6, ಗಾಲ್ಫ್ 4, ಟೆನಿಸ್ 3, ಈಜು 2, ಸೇಲಿಂಗ್ 2 ಮತ್ತು ಜೂಡೋ, ರೋವಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ತಲಾ ಒಬ್ಬರು ಇರಲಿದ್ದಾರೆ.

ಕಳೆದ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು 119 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳೊಂದಿಗೆ ಭಾರತ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿತ್ತು.