ಮನೆ ರಾಜ್ಯ ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್ ಪರೀಕ್ಷಾ ವರದಿಯಲ್ಲಿ ಲೋಪ: ಕ್ರಮಕ್ಕೆ ಆಗ್ರಹ

ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್ ಪರೀಕ್ಷಾ ವರದಿಯಲ್ಲಿ ಲೋಪ: ಕ್ರಮಕ್ಕೆ ಆಗ್ರಹ

0

ಮಂಡ್ಯ: ಮಗುವಿನ ಬಿಳಿರಕ್ತ ಕಣಗಳ ಸಂಖ್ಯೆಯ ಪರೀಕ್ಷೆಯ ವರದಿಯನ್ನು ತಪ್ಪಾಗಿ ನೀಡಿ ಲೋಪವೆಸಗಿರುವ ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್ ವಿರುದ್ದ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರುಗಿಬೇಕೆಂದು ಮಗುವಿನ ತಂದೆ ಆದರ್ಶ್ ಹಾಗೂ ಸಂಬಂಧಿ ಅನಿತಾ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನ.15ರಂದು ಒಂದೂವರೆ ವರ್ಷದ ನನ್ನ ಮಗನಾದ ಮಾನ್ ವೀರ್ ಗೆ ಜ್ವರ ಕಾಣಿಸಿಕೊಂಡಿದ್ದರಿಂದ ಮಕ್ಕಳ ತಜ್ಞ ಡಾ.ಜಗದೀಶ್ ಅವರ ಸೂಚನೆಯ ಮೇರೆಗೆ ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್ ನಲ್ಲಿ ಬಿಳಿರಕ್ತ ಕಣಗಳ ಸಂಖ್ಯೆಯ ಪರೀಕ್ಷೆಯನ್ನು ಮಾಡಿಸಿದ್ದೇವು,ಆ ವರದಿಯಲ್ಲಿ ಬಿಳಿರಕ್ತ ಕಣ ಸಂಖ್ಯೆ 32,000 ಸಾವಿರ ಇರುತ್ತದೆಂದು ನಮೂದಿಸಿದ್ದರು.ಇದರಿಂದ ನಾವು ಗಾಬರಿಗೊಂಡು ತರಾತುರಿಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದೆವು,ಅಲ್ಲಿನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಮಗುವಿನ ಬಿಳಿರಕ್ತ ಕಣಗಳ ಸಂಖ್ಯೆ 2,23,000 ಇರುವುದಾಗಿ ವರದಿ ಬಂದಿದೆ. ಇದರಿಂದಾಗಿ ಮಂಡ್ಯ ಡಯೋಗ್ನೋಸ್ಟಿಕ್  ಸೆಂಟರ್, ಇನ್ನೊಬ್ಬರ ಜೀವದ ಜೊತೆ ಚೆಲ್ಲಾಟವಾಡುವ ಅತ್ಯಂತದ ಗಂಭೀರ ಲೋಪವನ್ನೆಸಗಿದೆ ಎಂದು ದೂರಿದರು.

ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್ ನ ಲೋಪದ ವರದಿಯಿಂದಾಗಿ ನಾನು ಸೇರಿದಂತೆ ನನ್ನ ಇಡೀ ಕುಟುಂಬ, ಮಗುವನ್ನು ಬೆಂಗಳೂರಿಗೆ ಕರೆದೊಯ್ಯಲು ಹರಸಾಹನ ಪಟ್ಟಿದ್ದೇವೆ, ಅಲ್ಲದೇ ಅಲ್ಲಿಗೆ ತೆರಳಲು ಸಂಪನ್ಮೂಲಗಳನ್ನು ಹೊಂದಿಸಲು ಪರದಾಡಿದ್ದೇವೆ, ಈ ಎಲ್ಲ ಸಮಸ್ಯೆಗಳಿಗೆ ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್ ಕಾರಣವಾಗಿದ್ದು, ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಮಂಡ್ಯ ಡಯೋಗ್ನೋಸ್ಟಿಕ್   ಸೆಂಟರ್ ಪ್ರಯೋಗಾಲಯದವರು ರೋಗಿಗಳ ಜೀವ ಹಾಗೂ ಬದುಕಿನ ಜೊತೆ ಆಟವಾಡುತ್ತಿರುವುದು, ಇಂತಹ ಲೋಪದಿಂದ ಬೆಳಕಿಗೆ ಬಂದಿದೆ. ಅವರ ವಿವೇಚನ ರಹಿತ ಹಾಗೂ ಅವೈಜ್ಞಾನಿಕ ವರದಿ ನನ್ನನ್ನು ಒಳಗೊಂಡಂತೆ ಇನ್ನಷ್ಟು ಸಾರ್ವಜನಿಕರನ್ನು ತೊಂದರೆಗೆ ಸಿಲುಕಿಸಿದೆ. ಕೇವಲ ಹಣದ ಆಸೆಗಾಗಿ ಈ ರೀತಿ ತಪ್ಪು ವರದಿ ನೀಡುವ ಎಂ.ಡಿ.ಸಿ. ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಭವಿಷ್ಯದಲ್ಲಿ ಸಾರ್ವಜನಿಕರಿಗೆ ಉಂಟಾಗಬಹುದಾದ ತೊಂದರೆ ಮತ್ತು ಯಾತನೆಯನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕುಟುಂಬದವರಾದ ಯಶೋಧ ಹಾಗೂ ರಾಣಿ ಉಪಸ್ಥಿತರಿದ್ದರು.