ಮನೆ ರಾಜ್ಯ ಏಪ್ರಿಲ್ 27 ರಂದು ಪ್ರವೀಣ್‌ ನೆಟ್ಟಾರು ಕುಟುಂಬದವರಿಗೆ ಬಿಜೆಪಿಯಿಂದ ನಿರ್ಮಿಸಿದ ಮನೆ ಗೃಹ ಪ್ರವೇಶ

ಏಪ್ರಿಲ್ 27 ರಂದು ಪ್ರವೀಣ್‌ ನೆಟ್ಟಾರು ಕುಟುಂಬದವರಿಗೆ ಬಿಜೆಪಿಯಿಂದ ನಿರ್ಮಿಸಿದ ಮನೆ ಗೃಹ ಪ್ರವೇಶ

0

ಸುಳ್ಯ (ದಕ್ಷಿಣ ಕನ್ನಡ): ಹತ್ಯೆಯಾಗಿರುವ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್‌ ನೆಟ್ಟಾರು ಅವರ ಕುಟುಂಬದವರಿಗೆ ಬಿಜೆಪಿಯಿಂದ ನಿರ್ಮಿಸುತ್ತಿರುವ ಮನೆಯ ಗೃಹ ಪ್ರವೇಶ ಇದೇ 27ರಂದು ನಡೆಯಲಿದೆ.

Join Our Whatsapp Group

ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ ಮನೆ ನಿರ್ಮಿಸಲಾಗಿದೆ. ಈ ಮನೆಗೆ ‘ಪ್ರವೀಣ್‌’ ಎಂದು ನಾಮಕರಣ ಮಾಡಲಾಗಿದೆ.

27ರಂದು ಬೆಳಿಗ್ಗೆ 8.40ಕ್ಕೆ ಶ್ರೀಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನಡೆಯಲಿದೆ.

ಅದೇ ದಿನ ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನರ್ತನ ಸೇವೆ ಸಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದಿವಂಗತ ಪ್ರವೀಣ್ ನೆಟ್ಟಾರು ಅವರ ಕುಟುಂಬದವರು ನೀಡಿದ ನಕ್ಷೆಯ ಪ್ರಕಾರ, ಕುಟುಂಬ ವಾಸವಿದ್ದ ಜಾಗದಲ್ಲೇ ಮನೆ ನಿರ್ಮಿಸಲಾಗಿದೆ. 2,700 ಚದರ ಅಡಿ ವಿಸ್ತೀರ್ಣದ ಮನೆಗೆ, ಅಂದಾಜು 60 ಲಕ್ಷ ವೆಚ್ಚವಾಗಿದೆ. ಸಂಪೂರ್ಣ ವೆಚ್ಚವನ್ನು ಪಕ್ಷದಿಂದಲೇ ಭರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.