ಹೊಸಬರ “ಕಣ್ಣಾ ಮುಚ್ಚೆ ಕಾಡೇ ಗೂಡೇ’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜ.17ರಂದು ತೆರೆಕಾಣುತ್ತಿದೆ.
ಇತ್ತೀಚೆಗೆ ಈ ಚಿತ್ರದ “ನಿನ್ನ ನೋಡಿದಾಗಲೇ ಪ್ರೀತಿಯಲಿ ಬಿದ್ದಾಗಿದೆ’ ಹಾಡು ಬಿಡುಗಡೆಯಾಗಿದೆ. ವೀರೇಶ್ ಕುಮಾರ್ ಈ ಚಿತ್ರದಲ್ಲಿ ಖಳನಾಗಿ ನಟಿಸಿದ್ದು, ಅವರ ಪತ್ನಿ ಅನಿತಾ ವೀರೇಶ್ ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ನಟರಾಜ್ ಕೃಷ್ಣೇಗೌಡ ಈ ಚಿತ್ರದ ನಿರ್ದೇಶಕರು. ಈ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುತ್ತದೆ. ಅದನ್ನು ಕಂಡು ಹಿಡಿಯಲು ಖಾಸಗಿ, ಸರ್ಕಾರಿ ಪಡೆ ಮುಂದೆ ಬರುತ್ತದೆ. ಇದರ ಮಧ್ಯೆ ಹುಡುಗಿಯೊಬ್ಬಳು ಸಮಸ್ಯೆಯಲ್ಲಿ ಸಿಲುಕುತ್ತಾಳೆ. ಅಂತಿಮವಾಗಿ ಅಪರಾಧಿ ಸಿಗುತ್ತಾನಾ? ಆಕೆಯು ಕಷ್ಟದಿಂದ ಹೊರ ಬರುತ್ತಾಳಾ? ಎಂಬುದು ಚಿತ್ರದ ಕಥೆ.
ತುಳು ಭಾಷೆಯಲ್ಲಿ 8, ಕನ್ನಡದಲ್ಲಿ 2 ಚಿತ್ರಗಳಲ್ಲಿ ನಟಿಸಿರುವ ಅಥರ್ವ ಪ್ರಕಾಶ್ ನಾಯಕ. ತುಳು ರಂಗಭೂಮಿ ನಟಿ ಪ್ರಾರ್ಥನಾ ನಾಯಕಿ. ಮತ್ತೂಂದು ಪ್ರಮುಖ ಪಾತ್ರದಲ್ಲಿ ನಿವೃತ್ತ ವೈದ್ಯರಾಗಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ.
Saval TV on YouTube