ಮುಂಬೈ: ಹಿರಿಯ ಚಿತ್ರ ನಟ ಪಂಕಜ್ ತ್ರಿಪಾಠಿ ನಟಿಸಿರುವ “ಮೇ ಅಟಲ್ ಹೂಂ’ ಸಿನಿಮಾ ಜ.19ರಂದು ತೆರೆ ಕಾಣಲಿದೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾ ಇದಾಗಿದೆ.
“ಹೊಸ ಭಾರತದ ಹಿಂದಿನ ಶಕ್ತಿ, ಚಿನ್ನದಂಥ ಹೃದಯ ಇರುವ, ಉಕ್ಕಿನಂಥ ವ್ಯಕ್ತಿತ್ವ, ಕವಿ ಹೃದಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಜೀವನ ಆಧಾರಿತ ಮೈ ಅಟಲ್ ಹೂಂ 2024ರ ಜ.19ರಂದು ತೆರೆ ಕಾಣಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ರವಿ ಜಾಧವ್ ಅವರ ನಿರ್ದೇಶನ ಸಿನಿಮಾಕ್ಕೆ ಇದೆ. ವಿನೋದ್ ಭಾನುಶಾಲಿ ನಿರ್ಮಾಪಕರಾಗಿದ್ದಾರೆ.