ಗದಗ: ಒಂದು ದೇಶ ಒಂದು ಚುನಾವಣೆಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದು, ನೀವು ಮೊದಲು ಮಾಡಬೇಕಾಗಿತ್ತು, ಇಷ್ಟು ದಿನ ಮಲಗಿಕೊಂಡಿದ್ರಾ..? ನಾಲ್ಕು ವರ್ಷದ ಹಿಂದೆ ಮಾತನಾಡಿದ್ರಿ.. ಯಾಕೆ ಸ್ಟಾಪ್ ಮಾಡಿದ್ರಿ..? ಎಂದು ಪ್ರಶ್ನಿಸಿದರು.
ಗದಗನಲ್ಲಿ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ಹೆಸರಿನಲ್ಲಿ ಅವಧಿ ಮುಂದೂಡುವ ಪ್ರಯತ್ನ ನಡೆದರೆ ಜನ ಸಹಿಸಲ್ಲ. ಸಮಯ, ಹಣ ಉಳಿತಾಯದ ಕಾರಣ ಕೊಟ್ಟು ಅವಧಿ ಮುಂದುವರಿಸುವ ಪ್ರಯತ್ನ ನಡೆಸಲಾಗಿದೆ. ಈಗ ಚುನಾವಣೆ ಹತ್ತಿರ ಬಂದಿವೆ. ಇವಿಎಂ ಮಷೀನ್ ಬಂದಿವೆ. ಲೋಕಸಭಾ ಚುನಾವಣೆ ತಯಾರಿಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಈಗ ಚುನಾವಣೆ ಬಂದಿದೆ. ಹೀಗಾಗಿ ಒಂದು ದೇಶ ಒಂದು ಚುನಾವಣೆ ನೆನಪಾಯ್ತಾ..? ಎಂದು ಕಿಡಿಕಾರಿದರು.
ಅಧ್ಯಾಯನ ಸಮಿತಿ ಮಾಡುವ ಹಿಂದೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ದುರ್ವಾಸನೆ ಕಂಡು ಬರ್ತಾಯಿದೆ..! ರಾಮನಾಥ ಕೋವಿಂದ ಅವರ ಮೇಲೆ ವಿಶೇಷವಾದ ಗೌರವ ಇದೆ ಎಂದರು.