ಕನ್ನಡದ ನಾಯಕ ನಟ ಸತೀಶ್ ನೀನಾಸಂ ಒಂದು ವಿಶೇಷ ಟೈಟಲ್’ನ ಸಿನಿಮಾ ಮಾಡ್ತಿದ್ದಾರೆ. ಈ ಒಂದೇ ಒಂದು ಚಿತ್ರದಲ್ಲಿ ಮೂರು ಕಾಲಘಟ್ಟದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಮೂರೂ ಕಾಲಘಟ್ಟದಲ್ಲಿ ಸತೀಶ್ ವಿಭಿನ್ನವಾಗಿಯೇ ಕಾಣಿಸಿಕೊಳ್ಳಬೇಕು, ಅಂತಹ ಚಾಲೆಂಜಿಂಗ್ ರೋಲ್ ಅನ್ನೇ ಸತೀಶ್ ಇಲ್ಲಿ ನಿಭಾಯಿಸಿದ್ದಾರೆ. ವಿಶೇಷವೆಂದ್ರೆ ಈ ಚಿತ್ರದ ಟೈಟಲ್ ಕೇಳಿದ್ರೇನೇ ಸಾಕು. ನಿಮಗೆ ಒಂದ್ ಅರೆಕ್ಷಣ ಮೊಗದಲ್ಲಿ ಮಂದಹಾಸ ಮೂಡಬಹುದು. ಜೊತೆಗೆ ನೀವು ಒಂದೊಮ್ಮೆ ನಿಮ್ಮ ಆ ಹಳೆ ದಿನಗಳಿಗೂ ಜಾರಬಹುದು. ಆ ರೀತಿನೇ ಇದೆ ಈ ಸಿನಿಮಾ ಟೈಟಲ್ ಮತ್ತು ಡಿಟೈಲ್ಸ್.
ಅಶೋಕ ಬ್ಲೇಡ್
ಅಶೋಕ ಬ್ಲೇಡ್ ಅನ್ನೋ ಸಿನಿಮಾದಲ್ಲಿ ನಾಯಕ ನಟ ಸತೀಶ್ ನೀನಾಸಂ ಅಭಿನಯಿಸುತ್ತಿದ್ದಾರೆ. ಈ ಚಿತ್ರ ತುಂಬಾ ವಿಶೇಷವಾದ ಚಿತ್ರವೇ ಆಗಿದೆ. ಈ ಚಿತ್ರಕ್ಕಾಗಿಯೇ ಸತೀಶ್ ನೀನಾಸಂ ಸರಿಯಾದ ತಯಾರಿಯನ್ನೇ ಮಾಡಿಕೊಂಡಿದ್ದು ಮೂರು ಕಾಲಘಟ್ಟದಲ್ಲಿಯೇ ಈ ಒಂದು ಸಿನಿಮಾ ಸಾಗುತ್ತದೆ.
300 ವರ್ಷದ ಹಿಂದಿನ ಪ್ಲಾಷ್ ಬ್ಯಾಕ್
ಅಶೋಕ ಬ್ಲೇಡ್ ಸಿನಿಮಾದಲ್ಲಿ ಪ್ರೆಸೆಂಟ್ ಡೇ ಕಥೆ ಇರುತ್ತದೆ. ಅದೇ ಕಥೆ ಮುಂದೆ 70ರ ದಶಕಕ್ಕೂ ಹೊರಳುತ್ತದೆ. ಅಲ್ಲಿಂದ ಅದು ಅಲ್ಲಿಯೇ ನಿಲ್ಲೋದಿಲ್ಲ. 300 ವರ್ಷ ಹಿಂದಕ್ಕೆ ಹೋಗುತ್ತದೆ. ಹೀಗೆ ಮೂರು ಹಂತದಲ್ಲಿ ಮೂಡಿ ಬರೋ ಈ ಸಿನಿಮಾದಲ್ಲಿ ಚಿತ್ರೀಕರಣ ನಡೀತಾ ಇದೆ. ಆಯಾ ಸೆಡ್ಯೂಲ್ ಪ್ರಕಾರ ಸಿನಿಮಾ ಟೀಮ್ ಒಂದೊಂದೇ ಕಾಲಘಟ್ಟದ ಕಥೆಯ ಚಿತ್ರೀಕರಣ ಮಾಡುತ್ತಿದ್ದಾರೆ.
ನವ ನಿರ್ದೇಶಕ ವಿನೋದ್ ಕಲ್ಪನೆ
ಈ ಒಂದು ವಿಶೇಷ ಪರಿಕಲ್ಪನೆಯ ಚಿತ್ರವನ್ನ ನವ ನಿರ್ದೇಶಕ ವಿನೋದ್ ಡೈರೆಕ್ಷನ್ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ಏನಾದರೂ ಹೊಸದನ್ನ ಕೊಡಬೇಕು ಅಂತಲೇ ಒಂದೇ ಚಿತ್ರದಲ್ಲಿ ಮೂರು ಕಾಲಘಟ್ಟದ ಕಥೆ ಹೇಳೋಕೆ ಬಂದಿದ್ದಾರೆ. ಸುಮಾರು 20 ವರ್ಷ ಸೀರಿಯಲ್ನಲ್ಲಿ ಕೆಲಸ ಮಾಡಿರೋ ಅನುಭವ ಕೂಡ ವಿನೋದ್ಗೆ ಇದ್ದು, ಅದರ ಆಧಾರದ ಮೇಲೆ ಇಲ್ಲಿ ಹೊಸದನ್ನೇ ಹೇಳೋಕೆ ಮುಂದಾಗಿದ್ದಾರೆ.
ಒಟ್ನಲ್ಲಿ ಸತೀಶ್ ನೀನಾಸಂ ಬೇರೆ ಬೇರೆ ಪ್ರೋಜೆಕ್ಟ್ ಗಳಲ್ಲಿ ಸದ್ಯಕ್ಕೆ ಬ್ಯುಸಿ ಇದ್ದು ಅಶೋಕ್ ಬ್ಲೇಡ್ ಚಿತ್ರಕ್ಕಾಗಿಯೇ ಚಾಮರಾಜನಗರದ ಹಳ್ಳಿಯೊಂದರಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.