ಏಕಪಾದ = ಒಂದು ಕಾಲಹೆಜ್ಜೆ ವಿಪರೀತ =ವಿಲೋಮ, ವಿರುದ್ಧ ದಿಕ್ಕು.ದಂಡ ನೇರವಾದ ಕೋಲು, ಶಿಕ್ಷೆಮಾಡುವ ಅಧಿಕಾರವನ್ನು ಸೂಚಿಸುವ ಚಿಹ್ನೆ ; ಶರೀರಕ್ಕೂ ದಂಡವೆಂಬ ಹೆಸರುಂಟು. ಈ ಆಸನದ ಭಂಗಿಯು ದ್ವಿಪಾದ ವಿಪರೀತದಂಡಾಸನ’ದಲ್ಲಿರುವುದರಕ್ಕಿಂತಲೂ ಹೆಚ್ಚಿನ ಚಲನವಲನಗಳನ್ನು ಹೊಂದಿರುತ್ತದೆ.
ಅಭ್ಯಾಸ ಕ್ರಮ :
1. ಮೊದಲು ‘ದ್ವೀಪಾದ ವಿಪರೀತದಂಡಾಸನದ ಭಂಗಿಯ ಅಭ್ಯಾಸ ಮಾಡಬೇಕು.
2. ಬಳಿಕ,ಉಸಿರನ್ನು ಹೊರ ಬಿಟ್ಟು ಬಲಗಾಲನ್ನು ನೆಲದ ಮೇಲೆ ‘ವಿಪರೀತ ದಾಂಡಾಸನ’ದಲ್ಲಿರುವಂತೆ ಊರಿಟ್ಟು ಎಡಗಾಲನ್ನು ನೇರವಾಗಿ ನೆಲಕ್ಕೆ ಲಂಬವಾಗಿರುವಂತೆ ಮೇಲೆತ್ತಬೇಕು.
3. ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟದಿಂದ ಸುಮಾರು 10 ಸೆಕೆಂಡುಗಳ ಕಾಲ ನೆಲೆಸಬೇಕು.
4. ಆಮೇಲೆ, ಎಡಗಾಲನ್ನು ಕೆಳಕ್ಕಿಳಿಸಿ ‘ವಿಪರೀತದಂಡಾಸನ’ದ ಭಂಗಿಗೆ ಬರಬೇಕು. ಆ ಬಳಿಕ,ಉಸಿರನ್ನು ಹೊರಕ್ಕೆ ಬಿಡುತ್ತ, ಎಡಗಾಲನ್ನು ನೆಲದ ಮೇಲಿಟ್ಟು ಬಲಗಾಲನ್ನು ಲಂಬವಾಗಿ ಮೇಲೆತ್ತಿನಿಲ್ಲಿಸಿ,ಭಂಗಿಯನ್ನು ಪುನರವರ್ತಿಸಬೇಕು.
5. ಮತ್ತೆ ‘ವಿಪರೀತದಂಡಾಸನ’ದ ಭಂಗಿಗೆ ಬಂದು, ವಿಶ್ರಾಂತಿಯನ್ನು ಪಡೆಯಬೇಕು.
6. ಆಸನಾಭ್ಯಾಸದಲ್ಲಿ ಮುಂದುವರೆದಿರುವರು ಉಸಿರನ್ನು ಹೊರಕ್ಕೆ ಬಿಡುತ್ತ, ‘ಸಾಲಂಬಶೀರ್ಷಾಸನಒಂದಾ’ದ ಬಂಗಿಗೆ ಬರಲು 2 ಕಾಲುಗಳನ್ನು ಜೊತೆಯಲ್ಲಿಯೇ ಮೇಲೆತ್ತಿ ನಿಲ್ಲಿಸಿ,ಬಳಿಕ ಅವನ್ನು ನೆಲದ ಮೇಲೆ ಮೆಲ್ಲಮೆಲ್ಲಗೆ ಇಳಿಸಬೇಕು.ಇಲ್ಲವೆ ‘ಊರ್ಧ್ಧಧನುರಾಸನ’ದ ಭಂಗಿಗೆ ಬಂದು ‘ತಾಂಡಾಸನ’ದಲ್ಲಿ ನಿಲ್ಲಬೇಕು. ಅಥವಾ ‘ವಿಪರೀತಚಕ್ರಾಸನ’ಕ್ಕೆ ಬರಬೇಕು.
ಪರಿಣಾಮಗಳು :
ಈ ಭಂಗಿಯು ಬೆನ್ನೆಲುಬಿಗೆ ಹುರುಪುಕೊಡುವುದಲ್ಲದೆ ಎದೆಯನ್ನು ಪೂರಾ ಹಿಗ್ಗಿಸಲು ಸಹಾಯವಾಗಿದೆ.ಇದರ ಜೊತೆಗೆ ’ಶೀರ್ಷಾಸನ’ದಿಂದಾಗುವ ಉತ್ತಮ ಪರಿಣಾಮಗಳು ಇದರಿಂದಗುತ್ತವೆ. ಈ ಉಲ್ಲಾಸಕರವಾದ ಭಂಗಿಯು ಮನಸ್ಸಿಗೆ ಶಾಂತಿಯನ್ನು ತರುತ್ತದೆ.