ಅಭ್ಯಾಸ ಕ್ರಮ :
1. ಮೊದಲು, ಕಾಲುಗಳನ್ನು ಮುಂಗಡೆಗೆ ನೇರವಾಗಿ ಬಾಚಿಟ್ಟು ನೆಲದ ಮೇಲೆ ಕುಳಿತುಕೊಳ್ಳಬೇಕು.
2. ಬಳಿಕ, ಎಡಗಾಲನ್ನು ಮಂಡಿಯಲ್ಲಿ ಭಾಗಿಸಿ ಕಾಲ್ಬೆರಳುಗಳನ್ನು ಹಿಂದಕ್ಕೆ ತುದಿಮಾಡಿರಿಸಿ ಎಡಪೃಷ್ಠವನ್ನು ನೆಲಕ್ಕೆ ಮುಟ್ಟಿಸಬೇಕು. ಅಲ್ಲದೇ ಎಡಗಾಲ ಮೀನಖಂಡವು ಎಡತೊಡೆಯ ಹೊರಬದಿಯನ್ನು ಮುಟ್ಟಿಸಿರಿ, ಎಡಮಂಡಿಯನ್ನು ನೆಲದ ಮೇಲೆ ಊರಿಡಬೇಕು ಈಗ ಎಡಗಾಲು ‘ವಿರಾಸನ’ದ ಭಂಗಿಯಲ್ಲಿರುವುದಿಲ್ಲ.
3. ಆಮೇಲೆ,ಬಲಗಾನನ್ನು ಹಿಂಗಡೆಗೆ ತಂದು ಅದನ್ನು ಉದ್ದಕ್ಕೂ ನೆಲದ ಮೇಲೆ ಚಾಚಬೇಕು.
4. ಅನಂತನ ಅಂಗೈಗಳನ್ನು ನೆಲದಮೇಲೂರಿ, ಉಸಿರನ್ನು ಹೊರಗೋಗಿಸಿ, ಬಲಮಂಡಿಯನ್ನು ಭಾಗಿಸಿ ಬಲಪಾದವನ್ನು ತಲೆಯ ಬಳಿ ಬರುವಂತೆ ತರಬೇಕು.ಅಲ್ಲದೆ ಬಲಕಣಕಾಲಿನ ಮಂಡಿಯಿಂದ ಗಿಣ್ಣಿನವರೆಗಿರುವ ಭಾಗವನ್ನು ನೆಲಕ್ಕೆ ಲಂಬವಾಗಿರಿಸಬೇಕು ಈ ಸ್ಥಿತಿಯನ್ನು ಪಡೆಯಲು ಬಲತೊಡೆಯ ಮಾಂಸಖಂಡಗಳನ್ನು ಬಿಗಿಗೊಳಿಸಬೇಕು. ಆ ಬಳಿಕ ಕೆಲವು ಸಲ ಉಸಿರಾಟ ನಡೆಸಬೇಕು.
5. ತರುವಾಯ, ಉಸಿರನ್ನು ಹೊರಬಿಟ್ಟು ಬೆನ್ನೆಲುಬು ಮತ್ತು ಕತ್ತನ್ನು ಹಿಗ್ಗಿಸಿ ತಲೆಯನ್ನು ಹಿಂದಕ್ಕೆ ಬಿಸಿ ಹಿಗ್ಗಿಸಿ,ಕೈಗಳನ್ನು ಒಂದೊಂದಾಗಿ ತಲೆಯ ಮೇಲ್ಗಡೆಗೆ ತಂದು, ಬಲಪಾದವನ್ನು ಬಿಗಿಯಾಗಿ ಹಿಡಿದು, ತಲೆಯನ್ನು ಅದಕ್ಕೆ ಒದಗಿಸಬೇಕು ಸುಮಾರು 15 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಸಮತೋಲಿಸಿ ಸಾಮಾನ್ಯವಾದ ಉಸಿರಾಟ ನಡೆಸಲು ಯತ್ನಿಸಬೇಕು.6. ಆಮೇಲೆ, ಬಲಗಿಣ್ಣಿನ ಮೇಲಣ ಬಿಗಿತವನ್ನು ಸಡಿಲಿಸಿ ಕಾಲುಗಳನ್ನು ನೆರವಾಗಿಸಬೇಕು.
7. ಇದಾದ ಮೇಲೆ, ಇನ್ನೊಂದು ಕಡೆಯೂ ಇದೆ ಭಂಗಿಯನ್ನು ಮಾಡಿ ಅದರಲ್ಲಿ ಅಷ್ಟೇ ಕಾಲ ನೆಲೆಸಬೇಕು. ಇದರಲ್ಲಿ ಬಲಗಾಲು ವೀರಾಸನದಲ್ಲಿರುತ್ತದೆ ತಲಯು ಎಡಗಾಲಿನ ಮೇಲೆ ಒರಗಿರುತ್ತದೆ. ಈ ಕಾಲು ತಲೆಯ ಮೇಲ್ಭಾಗಕ್ಕೆ ತಂದ ಎರಡೂ ತೋಳುಗಳ ಬಿಗಿತಕ್ಕೆ ಒಳಗಾಗಿರುತ್ತದೆ.