‘ಏಕಪದ’ ಎಂದರೆ ಒಂದು ಅಡಿ ಅಥವಾ ಹೆಜ್ಜೆ, ಈ ಆಸನವು ಈ ಹಿಂದಿನ ಆಸನದ ವ್ಯತ್ಯಸ್ತಂಭಂಗಿ. ಆದರೆ ಇದರಲ್ಲಿ ಒಂದು ಕಾಲನ್ನು ಮೇಲೆತ್ತಿಡಬೇಕು.
ಅಭ್ಯಾಸ ಕ್ರಮ
1. ಮತ್ತು ‘ಸೇತುಬಂಧನ ಸರ್ವಂಗಾಸನ’ದ ಭಂಗಿಯಲ್ಲಿ ನಿಂತ ಮೇಲೆ, ಉಸಿರನ್ನು ಹೊರಕ್ಕೆ ಬಿಟ್ಟು ಬಲಗಾಲನ್ನು ಮೇಲೆತ್ತಿ, ಲಂಬವಾಗಿ ನಿಲ್ಲಿಸಬೇಕು. ಈಗ ಎರಡು ಕಾಲುಗಳನ್ನೂ ಪೂರಾ ಹಿಗ್ಗಿಸಿ ಆ ಭಂಗಿಯಲ್ಲಿ ಸುಮಾರು 10 ಸೆಕೆಂಡುಗಳ ಕಾಲ ಇರಬೇಕು.
2. ಉಸಿರನ್ನು ಒಳಕ್ಕೆಳೆದು ಬಲಗಾಲನ್ನು ನೆಲಕ್ಕಿಳಿಸಿ, ಉಸಿರನ್ನು ಹೊರದೂಡಿ, ಎಡಗಾಲನ್ನು ಮೇಲೆತ್ತಿ ಲಂಬ ಸ್ಥಿತಿಗೆ ತಂದು ಬಳಿಕ ಎರಡೂ ಕಾಲುಗಳನ್ನು ಪೂರಾ ಹಿಗ್ಗಿಸಿ ನೇರವಾಗಿ ಚಾಚಿರಬೇಕು. ಈ ಭಂಗಿಯಲ್ಲಿಯೂ ಅಷ್ಟೇ ಕಾಲ ನೆಲೆಸಬೇಕು. ಆ ಬಳಿಕ, ಉಸಿರನ್ನು ಒಳಕ್ಕೆಳೆದು ಕಾಲನ್ನು ಎಲಕ್ಕಿಳಿಸಬೇಕು.
3. ಆಮೇಲೆ, ಉಸಿರನ್ನು ಮತ್ತೆ ಹೊರಕ್ಕೆಬಿಟ್ಟು ಕಾಲುಗಳನ್ನು ಹಿಂದಕ್ಕೆ ತೂಗಿಟ್ಟು “ಸರ್ವಾಂಗಾಸನಕ್ಕೆ ಬರಬೇಕು. ಆನಂತರ ಕೈಗಳನ್ನು ಬೆನ್ನಿನ ಮೇಲಿಂದ ತೆಗೆದು, ಕಾಲುಗಳನ್ನು ನೆಲಕ್ಕೆ ಜಾರಿಸಿಟ್ಟು ಮಿಶ್ರಮಿಸಿಕೊಳ್ಳಬೇಕು.
‘ಸೇತುಬಂಧನ ಸರ್ವಾಂಗಾಸನ’ ಮತ್ತು ‘ಏಕಪಾದ ಸೇತುಬಂಧನ ಸರ್ವಾಂಗಾಸನ’ಗಳ ಪರಿಣಾಮಗಳು
ಈ ಆಸನಗಳೆರಡೂ ಬೆನ್ನಿಗೆ ಹಿಂಭಾಗದ ಚಲನೆಗಳನ್ನು ಕಲ್ಪಿಸಿ ಸರ್ವಾಂಗಾಸನದ ಇನ್ನಿತರ ವಿವಿಧ ಚಲನೆಗಳಿಂದ ಕತ್ತಿನ ಭಾಗಕ್ಕೆ ಒದಗಿಸಿ ಶ್ರಮ ಮತ್ತು ನೋವುಗಳನ್ನು ಹೋಗಲಾಡಿಸುತ್ತದೆ.
ಸುಲಭವಾಗಿ ಬಾಗಿಸಲಾಗುವ ಬೆನ್ನುಮೂಳೆಯು ನರಮಂಡಲದ ಆರೋಗ್ಯಸ್ಥಿತಿಯನ್ನು ಸೂಚಿಸುತ್ತದೆ. ನರಮಂಡಲಗಳು ಆರೋಗ್ಯಸ್ಥಿತಿಯಲ್ಲಿರುವುದೆಂದರೆ ಮಾನವನ ತನುಮನಗಳೆರಡೂ ಉತ್ತಮವಾದ ಆರೋಗ್ಯ ಸ್ಥಿತಿಯಲ್ಲಿರುತ್ತವೆಂಬುದು ನಿಶ್ಚಯ.