ನಟ ದುನಿಯಾ ವಿಜಯ್ ಕನ್ನಡ ಇಂಡಸ್ಟ್ರಿಗೆ ಬಂದ ಹೊಸತರಲ್ಲಿ ಸಾಕಷ್ಟು ಕಷ್ಟದ ದಿನಗಳನ್ನ ದೂಡಿದ್ದಾರೆ. ಕಷ್ಟದ ಜೊತೆಗೆ ನೋವು, ಅವಮಾನಗಳನ್ನು ಎದುರಿಸಿದ್ದಾರೆ. ಇನ್ನೊಬ್ಬರ ಸಿನಿಮಾದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಬಂದ ದುನಿಯಾ ವಿಜಯ್ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಇಷ್ಟು ದಿನ ಎದೆಯಲ್ಲಿಟ್ಟುಕೊಂಡ ಬೆಂಕಿಯ ಕಿಡಿಯನ್ನ ಆಚೆ ಹಾಕಿದ್ದಾರೆ.
ದುನಿಯಾ ವಿಜಯ್ ಇಂದು ಸಿನಿಮಾರಂಗದಲ್ಲಿ ನಟ, ನಿರ್ದೇಶಕರಾಗಿ ಬೆಳೆದಿದ್ದಾರೆ. ತಾವು ನಟಿಸಿದ ಲ್ಯಾಂಡ್‌ಲಾರ್ಡ್ ಸಿನಿಮಾದ ಟೀಸರ್ ಲಾಂಚ್ ಇವೆಂಟ್‌ನಲ್ಲಿ ಹಳೆಯ ದಿನಗಳನ್ನ ಮೆಲುಕು ಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಬ್ಬನ ಏಳಿಗೆಯನ್ನ ಇನ್ನೊಬ್ಬರು ಸಹಿಸಲ್ಲ. ಯಾವತ್ತೂ ಮನುಷ್ಯನ ಏಳಿಗೆ ಸಹಿಸಿ ಹೊಗಳೋದು ತುಂಬಾ ಕಡಿಮೆ, ಮನುಷ್ಯನ ಸಹಜ ಗುಣ ದ್ವೇಷ, ಅಸೂಯೆ ಇದ್ದೇ ಇದೆ. ಇದು ನಮ್ಮನ್ನ ಬಿಟ್ಟು ಹೋಗಲ್ಲ, ನಾವು ಅವರನ್ನ ಸೋಲಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಅವರನ್ನು ನಾವು ಸೋಲಿಸದೇ ಬಿಡುವುದಿಲ್ಲ ಎನ್ನುವ ನಟ ದುನಿಯಾ ವಿಜಯ್ ಅವರ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಒಂದು ಕಡೆ ಈ ರೀತಿಯ ಸಂದರ್ಭಗಳನ್ನು ಅನುಭವಿಸಿದ್ದಾರೆ. ಇನ್ನು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡಾ ಇಂಡಸ್ಟ್ರಿಗೆ ಬಂದ ಹೊಸತರಲ್ಲಿ ಹೇಗೆಲ್ಲಾ ಅವಮಾನಗಳನ್ನ ಮೆಟ್ಟಿ ನಿಂತು ಇವತ್ತು ಸರ್ವೈವ್ ಆಗಿದ್ದಾರೆ. ನಟ ದುನಿಯಾ ವಿಜಯ್ ಅಲ್ಲದೇ ಇವತ್ತು ಲ್ಯಾಂಡ್‌ಲಾರ್ಡ್ ಅಂತಾ ಸಿನಿಮಾದ ರೂಲರ್ ಆಗಿದ್ದಾರೆ ರಾಜ್ ಬಿ ಶೆಟ್ಟಿ ಎಂದಿದ್ದಾರೆ.













