ಮನೆ ಮನರಂಜನೆ ‘ಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್‌ ದೇವರಿಗೆ ಮೀಸಲು

‘ಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್‌ ದೇವರಿಗೆ ಮೀಸಲು

0

ಮುಂಬಯಿ: ಈ ವರ್ಷದ ಬಹು ನಿರೀಕ್ಷಿತ, ಬಿಗ್‌ ಬಜೆಟ್‌ ಸಿನಿಮಾಗಳಲ್ಲಿ ಒಂದಾಗಿರುವ ʼಆದಿಪುರುಷ್‌ʼ ರಿಲೀಸ್‌ ಗೆ ದಿನಗಣನೆ ಬಾಕಿ ಉಳಿದಿದೆ. ಪ್ಯಾನ್‌ ಭಾಷೆಯಲ್ಲಿ ಸಿನಿಮಾ ಅದ್ದೂರಿಯಾಗಿ ಇದೇ ಜೂ.16 ರಂದು ರಿಲೀಸ್‌ ಆಗಲಿದೆ.

Join Our Whatsapp Group

ಈ ಹಿಂದೆ ಸಿನಿಮಾದ ಟೀಸರ್‌ ನಲ್ಲಿ ವಿಎಫ್‌ ಎಕ್ಸ್‌ ಸೇರಿದಂತೆ, ಕೆಲ ಪಾತ್ರಗಳ ಸುತ್ತ ವಿವಾದ ಹುಟ್ಟಿಕೊಂಡಿತ್ತು. ಆ ಬಳಿಕ ಅದನ್ನು ಸರಿ ಮಾಡಿ, ಇತ್ತೀಚೆಗೆ ಟ್ರೇಲರ್‌ ರಿಲೀಸ್‌ ಮಾಡಿತ್ತು. ಸಿನಿಮಾದ ಟ್ರೇಲರ್‌ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಾಲ್ಮೀಕಿ ಬರೆದ ರಾಮಾಯಣದ ಅಂಶಗಳನ್ನು ಆಧರಿಸಿ ತೆರೆಗೆ ತರಲಾಗುತ್ತಿರುವ ಸಿನಿಮಾಕ್ಕೆ ಓಂ ರಾವುತ್‌ ಅವರ ನಿರ್ದೇಶನವಿದೆ.

ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ. ಈ ನಡುವೆ ಅನೌನ್ಸ್‌ ಮೆಂಟ್‌ ವೊಂದನ್ನು ಮಾಡಿದೆ. ಆದಿಪುರುಷ್‌ ಸಿನಿಮಾ ಯಾವೆಲ್ಲ ಕಡೆ ಸ್ಕ್ರೀನಿಂಗ್‌ ಆಗುತ್ತದೋ ಆ ಥಿಯೇಟರ್‌ ನ ಒಂದು ಸೀಟನ್ನು ಹನುಮಾನ್‌ ದೇವರಿಗೆ ಮೀಸಲು ಇಡಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ.

ಎಲ್ಲೆಲ್ಲಿ ರಾಮಾಯಣ ಪಠಿಸುತ್ತಾರೋ ಅಲ್ಲಿ ಭಗವಾನ್ ಹನುಮಾನ್ ಕಾಣಿಸಿಕೊಳ್ಳುತ್ತಾನೆ ಎನ್ನುವುದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸುವ ಸಲುವಾಗಿ ʼರಾಮʼನಾಗಿ ಕಾಣಿಸಿಕೊಳ್ಳುವ ಪ್ರಭಾಸ್‌ ಅವರ ʼಆದಿಪುರುಷ್ʼ ಪ್ರದರ್ಶನವಗುವ ಥಿಯೇಟರ್‌ ನ ಒಂದು ಆಸನವನ್ನು ಹನುಮಾನ್‌ ದೇವರಿಗೆ ಮೀಸಲು ಇಡಲು ನಿರ್ಧರಿಸಿದ್ದೇವೆ. ಭಗವಾನ್ ಹನುಮಂತನ ಸನ್ನಿಧಿಯಲ್ಲಿ ಅತ್ಯಂತ ವೈಭವ ಮತ್ತು ವೈಭವದಿಂದ ನಿರ್ಮಿಸಲಾದ ʼಆದಿಪುರುಷ್‌ʼ ನನ್ನು ನಾವೆಲ್ಲರೂ ನೋಡಬೇಕು ಎಂದು ಚಿತ್ರತಂಡ ಪ್ರಕಟಣೆವೊಂದರಲ್ಲಿ ಹೇಳಿದೆ.

ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಶೇಷನಾಗಿ ಸನ್ನಿ ಸಿಂಗ್ ಮತ್ತು ಭಜರಂಗನಾಗಿ ದೇವದತ್ತ ನಾಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾವಣನಾಗಿ ಸೈಫ್‌ ಆಲಿ ಖಾನ್‌ ಕಾಣಿಸಿಕೊಳ್ಳಲಿದ್ದಾರೆ.