ಮನೆ ತಂತ್ರಜ್ಞಾನ ಒನ್’​ಪ್ಲಸ್​ ಕಂಪೆನಿಯ ಹೊಸ ಇಯರ್​ಬಡ್ಸ್​ ಲಾಂಚ್​!

ಒನ್’​ಪ್ಲಸ್​ ಕಂಪೆನಿಯ ಹೊಸ ಇಯರ್​ಬಡ್ಸ್​ ಲಾಂಚ್​!

0

ಜಾಗತಿಕ ಮಾರುಕಟ್ಟೆಯಲ್ಲಿ ಒನ್’ಪ್ಲಸ್ ಕಂಪೆನಿ ಬಿಡುಗಡೆ ಮಾಡುವಂತಹ ಡಿವೈಸ್’ಗಳಿಗೆ ಬೇಡಿಕೆ ಹೆಚ್ಚೇ ಇರುತ್ತದೆ. ಈ ಮಧ್ಯೆ ಅಂತೂ ಒನ್’ಪ್ಲಸ್ ಕಂಪೆನಿ ತನ್ನ ಗ್ರಾಹಕರಿಗೆ ಹೊಸ ಹೊಸ ಮಾದರಿಯ ಡಿವೈಸ್’ಗಳನ್ನು ಬಿಡುಗಡೆ ಮಾಡುತ್ತಿದೆ.

ಒನ್’ಪ್ಲಸ್ ಕಂಪೆನಿ ತನ್ನ ಬ್ರಾಂಡ್’ನ ಅಡಿಯಲ್ಲಿ ಪ್ರೀಮಿಯಂ ಸ್ಮಾರ್ಟ್’ಫೋನ್’ಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದಿದೆ. ಇದೀಗ ಮಾರುಕಟ್ಟೆಯಲ್ಲಿ ಸ್ಮಾರ್ಟ್’ಡಿವೈಸ್’ಗಳನ್ನು ಸಹ ಪರಿಚಯಿಸುತ್ತಿದೆ. ಇದರಲ್ಲಿ ಒನ್’ಪ್ಲಸ್ 11 ಹಾಗೂ ಒನ್ಪ್ಲಸ್ 11R ಸ್ಮಾರ್ಟ್’ಫೋನ್ ಹಾಗೂ ಪ್ಯಾಡ್ ಜೊತೆಗೆ ಹೊಸ ಇಯರ್’ಬಡ್ಸ್ ಅನ್ನು ಅನಾವರಣ ಮಾಡಲಾಗಿದ್ದು, ಒನ್’ಪ್ಲಸ್ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಒನ್’ಪ್ಲಸ್ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಡಿವೈಸ್’ಗಳ ಸಾಲಿನಲ್ಲಿ ಬಡ್ಸ್ ಪ್ರೋ 2ಆರ್ ಕೂಡ ಒಂದಾಗಿದೆ. ಈ ಇಯರ್ಬಡ್ಸ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ ಅನ್ನು ಒಳಗೊಂಡಿದ್ದು, ಇನ್ನೂ ಹಲವಾರು ಫೀಚರ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.

ಒನ್’ಪ್ಲಸ್ ಬಡ್ಸ್ ಪ್ರೋ 2ಆರ್ ವಿನ್ಯಾಸ

ಒನ್’ಪ್ಲಸ್ ಬಿಡುಗಡೆ ಮಾಡಿರುವಂತಹ ಈ ಇಯರ್’ಬಡ್ಸ್  ಈ ಹಿಂದೆ ಬಿಡುಗಡೆಯಾಗಿರುವಂತಹ ಸ್ಟ್ಯಾಂಡರ್ಡ್ ಬಡ್ಸ್ ಪ್ರೋ 2 ಗೆ ಹೋಲುವ ಫೀಚರ್ಸ್ಗಳನ್ನು  ಒಳಗೊಂಡಿದೆ. ಆದರೆ ವೈರ್ಲೆಸ್ ಚಾರ್ಜಿಂಗ್ ಮತ್ತು ಹೆಡ್ ಟ್ರ್ಯಾಕಿಂಗ್ ಫೀಚರ್ ಮಾತ್ರ ಇದರಲ್ಲಿರುವ ಸ್ಪೆಷಲ್ ಫೀಚರ್ ಆಗಿದೆ. ಇದರೊಂದಿಗೆ ಈ ಇಯರ್ಬಡ್’ಗಳು ಗ್ಲೋಸಿ ಸ್ಟೆಮ್ ಮತ್ತು ಮೇಲ್ಭಾಗದಲ್ಲಿ ಮ್ಯಾಟ್ ಫಿನಿಶ್ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ.

ಪ್ರಮುಖ ಫೀಚರ್ಸ್

ಒನ್ಪ್ಲಸ್ ಕಂಪೆನಿಯ ಈ ಹೊಸ ಇಯರ್’ಬಡ್ಸ್ ಗುಣಮಟ್ಟದ ಆಡಿಯೋ, ಡೈನಾಡಿಯೋ ಟ್ಯೂನಿಂಗ್, ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಸೇರಿದಂತೆ ಹಲವಾರು ವಿಶೇಷ ಫೀಚರ್ಸ್’ಗಳನ್ನು ಒಳಗೊಂಡಿದೆ.

ಇದರೊಂದಿಗೆ ಈ ಬಡ್ಸ್ ಪ್ರೋ 2 ಆರ್ ನಲ್ಲಿ 11ಎಮ್ಎಮ್ ಮತ್ತು 6ಎಮ್’ಎಮ್ ಗಾತ್ರದ ಡ್ಯುಯಲ್ ಡ್ರೈವರ್ ಆಯ್ಕೆಯನ್ನು ನೀಡಲಾಗಿದೆ. ಇವು 48ಡಿಬಿವರೆಗೆ ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಫೀಚರ್ಸ್ ಅನ್ನು ಅಳವಡಿಸಲಿದ್ದು, ಈ ಮೂಲಕ ಕಾಲ್’ನಲ್ಲಿ ಮಾತನಾಡಬೇಕಾದರೆ ಸುತ್ತಮುತ್ತಲಿನ ಸೌಂಡ್’ನ ಯಾವುದೇ ತೊಂದರೆಗಳಾಗುವುದಿಲ್ಲ.

ಇನ್ನು ಸುತ್ತಮುತ್ತಲಿನ ಶಬ್ದಗಳನ್ನು ಆಲಿಸಲು ಟ್ರಾನ್ಸ್ಪರೆನ್ಸಿ ಮೋಡ್ ಆಯ್ಕೆಯನ್ನು ಸಹ ನೀಡಲಾಗಿದೆ. ಹಾಗೆಯೇ ಬಡ್ಸ್’ಗಳು ಎಲ್’ಹೆಚ್’ಡಿಸಿ 5.0 ಆಡಿಯೋ ಕೋಡೆಕ್ ಮತ್ತು ಗೇಮಿಂಗ್’ಗಾಗಿ 54ms ಕಡಿಮೆ ಲೇಟೆನ್ಸಿಯನ್ನು ಬೆಂಬಲಿಸಲಿದ್ದು, ಈ ಮೂಲಕ ಅತ್ಯುತ್ತಮವಾದ ಗೇಮಿಂಗ್ ಅನುಭವವನ್ನು ಸಹ ಬಳಕೆದಾರರು ಪಡೆಯಬಹುದಾಗಿದೆ.

ಒನ್’ಪ್ಲಸ್ ಬಡ್ಸ್ ಪ್ರೋ 2ಆರ್ ಬ್ಯಾಟರಿ ಸಾಮರ್ಥ್ಯ

ಒನ್’ಪ್ಲಸ್ ಬಡ್ಸ್ ಪ್ರೋ 2ಆರ್ ಇಯರ್ಬಡ್ಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 39 ಗಂಟೆಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಇನ್ನು ಈ ಡಿವೈಸ್ನಲ್ಲಿ ನಾಯ್ಸ್ ಕ್ಯಾ ನ್ಸಲಿಂಗ್ ಫೀಚರ್ ಅನ್ನು ಆಫ್ ಮಾಡಿ ಬಳಕೆ ಮಾಡಿದ್ರೆ 9 ಗಂಟೆಗಳ ಕಾಲ ಹೆಚ್ಚುವರಿಯಾಗಿ ಬಳಕೆ ಮಾಡಬಹುದು. ಇನ್ನು ಎಎನ್’ಸಿ ಫೀಚರ್ ಅನ್ನು ಆನ್ ಮಾಡಿದ್ರೆ ಈ ಬಡ್ಸ್’ಗಳು 6 ಗಂಟೆಗಳವರೆಗೆ ಪ್ಲೇ ಬ್ಯಾಕ್ ಟೈಮ್ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ

ಒನ್’ಪ್ಲಸ್ ಬಡ್ಸ್ ಪ್ರೋ 2ಆರ್ ಇಯರ್’ಬಡ್ಸ್ ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿದ್ದು, ಈ ಮೂಲಕ ಇದರ ಬೆಲೆ 9,999 ರೂಪಾಯಿಗಳಷ್ಟು ನಿಗದಿ ಮಾಡಲಾಗಿದೆ.  ಹಾಗೆಯೇ ಆದರೆ ಭಾರತದಲ್ಲಿ ಯಾವಾಗ ಬಿಡುಗಡೆಯಾಗಬಹುದೆಂದು ಕಂಪೆನಿ ಯಾವುದೇ ರೀತಿಯಲ್ಲೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದರಂತೆ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ಬಡ್ಸ್’ಗಳು ಕಂಡುಬರಲಿವೆ.