ಮನೆ ರಾಷ್ಟ್ರೀಯ ಒಎನ್‌ಜಿಸಿ ಹೆಲಿಕಾಪ್ಟರ್  ಅರಬ್ಬಿ ಸಮುದ್ರದಲ್ಲಿ ಪತನ:  ಆರು ಮಂದಿಯ ರಕ್ಷಣೆ

ಒಎನ್‌ಜಿಸಿ ಹೆಲಿಕಾಪ್ಟರ್  ಅರಬ್ಬಿ ಸಮುದ್ರದಲ್ಲಿ ಪತನ:  ಆರು ಮಂದಿಯ ರಕ್ಷಣೆ

0

ಮುಂಬೈ(Mumbai): ‘ಒಎನ್‌ಜಿಸಿ’ಹೆಲಿಕಾಪ್ಟರ್ ಮುಂಬೈ ಕರಾವಳಿ ಸಮೀಪ ಅರಬ್ಬಿ ಸಮುದ್ರದಲ್ಲಿ ಇಂದು ಪತನಗೊಂಡಿದೆ.

ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಸೇರಿದಂತೆ 9 ಮಂದಿ ಪ್ರಯಾಣಿಸುತ್ತಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ. ಉಳಿದಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಒಎನ್‌ಜಿಸಿಯ ಆರು ಮಂದಿ ಸಿಬ್ಬಂದಿ, ಒಬ್ಬರು ಗುತ್ತಿಗೆದಾರರು ಹಾಗೂ ಇಬ್ಬರು ಪೈಲಟ್‌ಗಳು ಹೆಲಿಕಾಪ್ಟರ್‌ನಲ್ಲಿದ್ದರು. ಮುಂಬೈ ಕರಾವಳಿಯಿಂದ 50 ನಾಟಿಕಲ್ ಮೈಲಿ ದೂರದಲ್ಲಿರುವ ರಿಗ್‌ನಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಒಎನ್‌ಜಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪತನಕ್ಕೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ಲೇಖನವಿವಾಹಿತೆ ಜೊತೆ ಪ್ರೀತಿ: ಮದುವೆಗೆ ಒತ್ತಾಯಿಸಿದ್ದಕ್ಕೆ ಕಾನ್ಸ್ ಟೇಬಲ್ ಪರಾರಿ
ಮುಂದಿನ ಲೇಖನಗಾಯದ ಮೇಲೆ ಬರೆ: ಜುಲೈ 1 ರಿಂದ ವಿದ್ಯುತ್ ದರ ಏರಿಕೆ