ಮನೆ ಮನೆ ಮದ್ದು ಉಳ್ಳಾಗಡ್ಡೆ

ಉಳ್ಳಾಗಡ್ಡೆ

0


ಉಳ್ಳಾಗಡ್ಡೆಯು ದುಂಡು ಆಕಾರದ ಗಡ್ಡೆಯಂತಹ ತರಕಾರಿಯಾಗಿದೆ. ಗಡ್ಡೆಯನ್ನು ಹೆಚ್ಚುತ್ತಾ ಹೋದಂತೆ ಇದು ಪದರು ಪದರ ಆಗುತ್ತದೆ. ಇದು ಕೆಂಪು ಮತ್ತು ಬಿಳಿಯ ಬಣ್ಣದಲ್ಲಿ ದೊರೆಯುತ್ತದೆ. ಇದನ್ನು ಸಂಪೂರ್ಣವಾಗಿ ತರಕಾರಿಯಾಗಿ ಬಳಸದಿದ್ದರೂ ಅಡುಗೆಯಲ್ಲಿ ಇತರ ಪದಾರ್ಥಗಳ ಸಂಗಡ ಉಪಯೋಗಿಸುತ್ತಾರೆ. ಉಳ್ಳಾಗಡ್ಡೆಯು ಅಡುಗೆಗೆ ಬೇಕಾದ ಒಂದು ಅವಶ್ಯಕ ಪದಾರ್ಥವಾಗಿಬಿಟ್ಟಿದೆ. ಪ್ರತಿಯೊಂದು ಖಾದ್ಯ ಪದಾರ್ಥದಲ್ಲಿ ಇದನ್ನ ಬಳಸಲಾಗುತ್ತದೆ.


ಇದಿಲ್ಲದೆ ಅಡುಗೆ ಸಂಪೂರ್ಣವಾಗುವುದಿಲ್ಲ, ಅಡುಗೆ ರುಚಿಸುವುದಿಲ್ಲ ಅಡುಗೆಯಲ್ಲಿ ಕೊರತೆ ಎದ್ದು ಕಾಣುತ್ತದೆ, ಕಾರಣ ಉಳ್ಳಾಗಡ್ಡೆಯು ಮನುಷ್ಯನಿಗೆ ಒಂದು ಅವಶ್ಯಕತೆಯಾಗಿದೆ, ದೇಶಾದ್ಯಂತ ಕೃಷಿ ಗೊಳ್ಳುವ ಈರುಳ್ಳಿಯ ವ್ಯಾಪಾರ ಮತ್ತು ಬಳಕೆ ಎಲ್ಲೆಡೆ ಸಾಮಾನ್ಯವಾಗಿ ಪುರಾತನ ಕಾಲದಿಂದಲೂ ಉಳ್ಳಾಗಡ್ಡೆಯು ನಾನ ಹೆಸರುಗಳಿಂದ ಪ್ರಚಲಿತವಿದೆ. ಅಂದಿನಿಂದ ಆಹಾರ ರೂಪದಲ್ಲಿ ಈರುಳ್ಳಿ ಒಳಗೆಯಾಗುತ್ತದೆ.
ಉಳ್ಳಾಗಡ್ಡೆಯಲ್ಲಿ ಪ್ರೊಟೀನ್, ಖನಿಜ ,ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣಾಂಶ, ಸತ್ವ ಮತ್ತು ಉಷ್ಣ ಪರಿಣಾಮಗಳು ಸೇರಿರುತ್ತದೆ. ಇದರಲ್ಲಿ ಗಂಧ,ಕ ಆಲ್ಬಮಿನ್, ಸುಣ್ಣ ಮತ್ತು ಹುಳಿ ಅಂಶವಿರುತ್ತದೆ. ಇದನ್ನು ತಿನ್ನುವುದರಿಂದ ಶರೀರದಲ್ಲಿ ಕಾಂತಿ ಉಂಟಾಗುತ್ತದೆ. ಪಚನಕ್ರಿಯೆ ಉತ್ತಮವಾಗುತ್ತದೆ. ಪುರುಷತ್ವ ಹೆಚ್ಚುತ್ತದೆ. ಚರ್ಮದೋಷ ದೂರವಾಗುತ್ತದೆ. ಮಹಿಳೆಯರ ಸೌಂದರ್ಯ ಹೆಚ್ಚುತ್ತಿದೆ.
ಔಷಧೀಯ ಗುಣಗಳು :-

  • ಕಾಮಾಲೆ ರೋಗಕ್ಕೆ – ಕಾಮಾಲೆ ಮೂತ್ರ ಕಟ್ಟು ತೊಂದರೆಯಿಂದ ಬಳಲುವವರು ದಿನಾಲು ಈರುಳ್ಳಿಯ ಕಷಾಯ ಕುಡಿದರಿಂದ ರೋಗದಿಂದ ಮುಕ್ತಿ ಹೊಂದವರು.
  • ಕಫಕ್ಕೆ – ಎಲ್ಲಾ ವಯಸ್ಸಿನವರ ಕಫ ಸಂಚಯ ಪರಿಹರಿಸಲು ಈರುಳ್ಳಿ ಸಹಕಾರಿಯಾಗಿದೆ. ಬಿಸಿ ಹಸಿರಸ ರೂಪದಲ್ಲಿ ಇದನ್ನು ಸೇವಿಸಬಹುದು.
  • ಮೂಲವ್ಯಾಧಿಗೆ – ಮೂಲವ್ಯಾಧಿಯ ತೊಂದರೆಯಿಂದ ಬಳಲುವವರು ಹಸಿ ಈರುಳ್ಳಿ ಬೆಂದುದ್ದನ್ನು ಹಿಂಡಿ ರಸ ತೆಗೆದು ಇದನ್ನ ಕಲ್ಲುಸಕ್ಕರೆ ಸಹಿತ ಕುಡಿಯುವುದರಿಂದ ಮಲಬದ್ಧತೆಯು ಪರಿಹಾರವಾಗುತ್ತದೆ ಮತ್ತು ಮಲದಿಂದಲೂ ಹೊರಬರುವ ರಕ್ತಸ್ರಾವನಿಲ್ಲುತ್ತದೆ..
  • ಲೈಂಗಿಕ ಶಕ್ತಿಗೆ – ಲೈಂಗಿಕಶಕ್ತಿ ಮತ್ತು ಶುಕ್ರಧಾತು ವೃದ್ಧಿಯಾಗಲು ಈರುಳ್ಳಿ ರಸ ಸಂಗಡ ಜೇನು ಮತ್ತು ತುಪ್ಪವನ್ನು ಕೊಡಿಸಿ ಕುಡಿಯುವುದರಿಂದ ಮನುಷ್ಯ ಲೈಂಗಿಕಶಕ್ತಿ ವೃದ್ಧಿಯಾಗುತ್ತದೆ. ಅವನ ಶುಕ್ರ ದಾತು ವೃದ್ಧಿಯಾಗುತ್ತದೆ.
  • ತಲೆ ಕೂದಲಿಗೆ – ತಲೆ ಕೂದಲಿಗೆ ಉಳ್ಳ ಗಡ್ಡೆಯ ರಸ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಇದರ ರಸ ಜೇನಿನಲ್ಲಿ ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿ ಕೂದಲು ಬರುತ್ತದೆ.
  • ಕಿವಿ ನೋವು – ಉಳ್ಳಾಗಡ್ಡೆಯ ರಸವನ್ನು ಸ್ವಲ್ಪ ಬಿಸಿ ಮಾಡಿ ಎರಡು-ಮೂರು ಹನಿಗಳಷ್ಟು ಕಿವಿಯಲ್ಲಿ ಹಾಕಿದರೆ ಕಿವಿ ನೋವಿನಲ್ಲಿ ನಿವಾರಣೆ ಆಗುತ್ತದೆ….
  • ಅಜೀರ್ಣತೆ – ಯಾವುದೇ ರೀತಿಯ ಅಜೀರ್ಣತೆ ಅಥವಾ ಉದರದ ನೋವು ಇದ್ದಲ್ಲಿ ಉಳ್ಳಾಗಡ್ಡೆರಸ ಒಂದು ಚಮಚ ಹಸಿ ಶುಂಠಿಯ ರಸ, ಒಂದು ಚಮಚ ಮತ್ತು ಜೇನು ಎರಡು ಚಮಚ ಬೆಳ್ಳುಳ್ಳಿ ರಸ ಅರ್ಧ ಚಮಚ ಬೆರೆಸಿ ಊಟಕ್ಕಿಂತ ಮುಂಚೆ ಸೇವಿಸುವುದರಿಂದ ಜೀರ್ಣತೆಯು ಗುಣವಾಗುತ್ತದೆ.
  • ಸ್ಥನ ವೃದ್ಧಿ – ಊಟದೊಂದಿಗೆ ತಾಜಾ ಹಸಿ ಉಳ್ಳಗಟ್ಟೆಯನ್ನು ತಿನ್ನುವುದರಿಂದ ತಾಯಂದಿರು ಎದೆಹಾಲು ವೃದ್ಧಿಸುತ್ತದೆ. ಮತ್ತು ಸ್ಥಾನಗಳು ತುಂಬಿ ಬರುತ್ತದೆ. ಇದರ ನಿಯಮಿತ ಸೇವನೆಯಿಂದ ವೃದ್ಧಾ ವ್ಯವಸ್ಥೆಯಲ್ಲಿಯೂ ಸ್ತನಗಳ ಜೋತು ಬೀಳದೆ ತುಂಬಿಕೊಂಡಿರುತ್ತದೆ.
  • ನಾಸಿಕ ರಕ್ತಸ್ರಾವ – ಗಾಯ ಅಥವಾ ಪಿತ್ತದೋಷದಿಂದ ರಕ್ತಸ್ರಾವ ಕಡಿಮೆಯಾಗದಿದ್ದರೆ ಬಿಳಿ ಉಳ್ಳಾಗಡ್ಡೆಯನ್ನು ಮಜ್ಜಿಗೆಯಲ್ಲಿ ತಪ್ಪಲು ಪಲ್ಲೆಯಂತೆ ತಯಾರಿಸಿ ಸೇವಿಸುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
  • ನಾಸಿಕ ರಕ್ತಸ್ರಾವ – ಮುಗಿಯಿಯಿಂದ ರಕ್ತಸ್ರಾವವಾಗುತ್ತಿದ್ದರೆ ಉಳ್ಳಾಗಡ್ಡೆ ರಸ ಮೂಸ ಬೇಕು ಮತ್ತು ಹಸಿವು ಉಳ್ಳಾಗಡ್ಡೆ ಸೇವಿಸಬೇಕು.
  • ಸ್ಮರಣಶಕ್ತಿಯ ವೃದ್ಧಿ – ಬಿಳಿ ಉಳ್ಳಾಗಡ್ಡೆ ರಸ, ಜೇನು, ಹಸಿ ಶುಂಠಿಯ ರಸ ೫-೫ ಗ್ರಾಂ ತೆಗೆದುಕೊಂಡು ಒಂದು ಚಮಚ ಆಕಳ ತುಪ್ಪದಲ್ಲಿ ಬೆರೆಸಿ ಸೇವಿಸಿದರೆ ನೆನಪಿನ ಶಕ್ತಿಯಲ್ಲಿ ವೃದ್ಧಿಯಾಗುತ್ತದೆ.
    ಹಾನಿಕಾರಕ ಅಂಶಗಳು :-
    ಹಸಿಉಳ್ಳಗಡ್ಡೆಯು ಹೆಚ್ಚು ಉತ್ತೇಜಕವಾಗಿರುತ್ತದೆ. ಇದು ಮೆದುಳಿಗೆ ಹನಿಕಾರಕ ರಾತ್ರಿಯ ಭೋಜನದಲ್ಲಿ ಇದರ ಉಪಯೋಗವನ್ನು ಮಾಡಬಾರದು. ಮಾಡಿದರೆ ಸ್ವಲ್ಪ ಮೊಸರು, ಮಜ್ಜಿಗೆ ಸೇವಿಸಬೇಕು ಇದ್ರಲ್ಲಿ ಕಾಮೋತ್ತೇಜಕಶಕ್ತಿ ಇರುವುದರಿಂದ ಇದರ ಅತಿಯಾದ ಬಳಕೆಯಿಂದ ದೇಹಕ್ಕೆ ಹಾನಿಕಾರಕ. ಮೂತ್ರದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಿಗೆ ಇರುವವರು ಇದನ್ನು ಉಪಯೋಗಿಸಬಾರದು.