ಮನೆ ಅಪರಾಧ ಆನ್​ಲೈನ್ ಚಾಟಿಂಗ್: 20ರ ಯುವತಿಯಿಂದ 60ರ ಅರ್ಚಕನಿಗೆ ಲಕ್ಷ,ಲಕ್ಷ ಪಂಗನಾಮ!

ಆನ್​ಲೈನ್ ಚಾಟಿಂಗ್: 20ರ ಯುವತಿಯಿಂದ 60ರ ಅರ್ಚಕನಿಗೆ ಲಕ್ಷ,ಲಕ್ಷ ಪಂಗನಾಮ!

0

ಮಂಡ್ಯ: 60 ವರ್ಷದ ವೃದ್ಧನ ಜೊತೆ 20 ವರ್ಷದ ಯುವತಿ ವಾಟ್ಸಾಆಯಪ್‌ನಲ್ಲಿ ಚಾಟಿಂಗ್ ಮಾಡಿ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ.

Join Our Whatsapp Group


ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್, ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿ ದ್ದಾಳೆ.ಹೀಗಾಗಿ ಆಕೆ ಜತೆ ಪ್ರತಿ ದಿನ ವಿಜಯ್ ಕುಮಾರ್ ಚಾಟಿಂಗ್ ಮಾಡುತ್ತಿದ್ದರು.ವಿಜಯ್ ಕುಮಾರ್ ಬಗ್ಗೆ ತಿಳಿದುಕೊಂಡ ಯುವತಿ, ವಸತಿ, ಆರೋಗ್ಯ ಸಮಸ್ಯೆ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಹೀಗೆ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣವನ್ನು ಲಪಟಾಯಿಸಿದ್ದಾಳೆ.
ಪಾಂಡವಪುರದ ಅರ್ಚಕನಿಗೆ ತೆಲಂಗಾಣದ ಮಹಿಳೆಯ ಫೋಟೋ ಬಳಸಿ ಮೋಸ ಮಾಡಲಾಗಿದೆ.
ತೆಲಂಗಾಣ ಮೂಲದ ಸಿರಿ ಶ್ರೇಷಾ ಸರಿತಾ ಅನ್ನೋ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಅಕೌಂಟ್ ಓಪನ್ ಮಾಡಲಾಗಿದೆ. ಅದರಲ್ಲಿ 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿ ಮೋಸ ಮಾಡಿದೆ ಎಂದು ದೂರು ನೀಡಲಾಗಿದೆ.
ಯುವತಿ ಮಾತು ನಂಬಿದ ಅರ್ಚಕರು ಆನ್‌ಲೈನ್‌ನಲ್ಲಿ ಹಣ ಕಳುಹಿಸಿ ಲಕ್ಷ, ಲಕ್ಷ ಹಣ ಕಳೆದುಕೊಂಡಿದ್ದಾರೆ. ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದ ವಿಜಯಕುಮಾರ್ ಹಣ ಕಳೆದುಕೊಂಡಿರುವವರು. ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್‌ಗೆ ಫೇಸ್ ಬುಕ್‌ನಲ್ಲಿ ಯುವತಿ ಪರಿಚಯ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಳಿಕ ಇಬ್ಬರ ನಡುವೆ ಆತ್ಮೀಯ ಸಂಭಾಷಣೆ ನಡೆದಿದೆ. ಯುವತಿಯು ಹಲವು ಕಾರಣ ಹೇಳಿ ಆಗಾಗ ಹಣ ಕೇಳುತ್ತಿದ್ದರಂತೆ. ಯುವತಿಯ ಮಾತು ನಂಬಿ ಅರ್ಚಕರು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಅರ್ಚಕ ವಿಜಯ್ ಕುಮಾರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿ ಹಲವು ಬಾರಿ ಸಿಗುವುದಾಗಿ ಹೇಳಿ ವಂಚಿಸಿದ್ದಾರೆ. ಯುವತಿಯು ಸಿಗದೇ, ಹಣ ವಾಪಸ್ ಬರದೇ 60 ವರ್ಷದ ವೃದ್ಧ ಈಗ ಕಂಗಾಲಾಗಿದ್ದಾರೆ. ಫೇಕ್ ಐಡಿ ಬಳಸಿ, ನಂಬಿಸಿ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.