ಮನೆ ಕಾನೂನು ಆನ್‌ ಲೈನ್ ಗೇಮಿಂಗ್‌: ತಮಿಳುನಾಡು ನಿಯಮಾವಳಿ ಪ್ರಶ್ನಿಸಿದ ತಮಿಳುನಾಡು ಹೈಕೋರ್ಟ್

ಆನ್‌ ಲೈನ್ ಗೇಮಿಂಗ್‌: ತಮಿಳುನಾಡು ನಿಯಮಾವಳಿ ಪ್ರಶ್ನಿಸಿದ ತಮಿಳುನಾಡು ಹೈಕೋರ್ಟ್

0

ಬೆಂಗಳೂರು: ತಮಿಳುನಾಡಿನ ವೃತ್ತಿಪರ ಗೇಮ್‌ ಗಳ ಸಮೂಹ ಹಾಗೂ ಇಸ್ಪೋರ್ಟ್ಸ್ ಪ್ಲೇಯರ್ಸ್ ವೆಲ್‌ಫೇರ್ ಅಸೋಸಿಯೇಶನ್ (ಇಪಿಡಬ್ಲ್ಯೂಎ) ಇತ್ತೀಚೆಗೆ ಪರಿಚಯಿಸಿದ ರಿಯಲ್ ಮನಿ ಗೇಮಿಂಗ್‌ ಕುರಿತ ತಮಿಳುನಾಡು ನಿಯಮಾವಳಿಯನ್ನು ತಮಿಳುನಾಡು ಹೈಕೋರ್ಟ್‌ ನಲ್ಲಿ ಪ್ರಶ್ನಿಸಿವೆ.

Join Our Whatsapp Group

ಈ ದಾವೆಯ ಪ್ರಕಾರ ಭಾರತೀಯ ಸಂವಿಧಾನದ ನಿಯಮಾವಳಿ 14, 19 ಮತ್ತು 21 ರ ಪ್ರಕಾರ ಆನ್‌ಲೈನ್ ಗೇಮರ್‌ಗಳ ಮೂಲಭೂತ ಹಕ್ಕನ್ನು ಈ ನಿಯಮಾವಳಿಯು ಉಲ್ಲಂಘಿಸುವ ಮೂಲಕ ವೃತ್ತಿಪರ ಗೇಮಿಂಗ್‌ ಸಮುದಾಯದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ.

ಸಂವಿಧಾನದ ಅಡಿಯಲ್ಲಿ ಇಂತಹ ನಿಯಮಾವಳಿಯನ್ನು ಹೊರಡಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ. ಸ್ಕಿಲ್ ಗೇಮ್‌ಗಳನ್ನು ಕೇಂದ್ರ ಸರ್ಕಾರ ಮಾತ್ರ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ನಿಯಮಗಳು) ನಿಯಮಾವಳಿಗಳು 2021 ರ ಅಡಿಯಲ್ಲಿ ನಿಯಂತ್ರಿಸಬಹುದಾಗಿದೆ. ತಪ್ಪಾದ ಮತ್ತು ಅಸ್ತಿತ್ವದಲ್ಲಿಲ್ಲದ ಡೇಟಾ ಆಧರಿಸಿ ನಿಯಮಾವಳಿಯನ್ನು ಹೊರಡಿಸಲಾಗಿದೆ ಮತ್ತು ಮೇಲ್ನೋಟಕ್ಕೇ ಇದು ಪ್ರತಿವಾದ ಮಾಡಬಹುದಂತಿದೆ.

ಲುಮಿಕಾಯ್ ಮತ್ತು ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್‌)ನ ಸಹಭಾಗಿತ್ವದಲ್ಲಿ ನಡೆಸಿದ “ಸ್ಟೇಟ್ ಆಫ್ ಇಂಡಿಯಾ ಗೇಮಿಂಗ್ ರಿಪೋರ್ಟ್ 2022” ಪ್ರಕಾರ ಭಾರತದಲ್ಲಿ ಇಸ್ಪೋರ್ಟ್ಸ್‌ ಪ್ಲೇಯರ್‌ಗಳ ಸಂಖ್ಯೆಯು 2021 ರಲ್ಲಿ 150,000 ಯಿಂದ 2022 ರಲ್ಲಿ 600,000 ಗೆ ಏರಿಕೆಯಾಗಿದೆ. 2027ರ ವೇಳೆಗೆ ಈ ಸಂಖ್ಯೆ 1.5 ಮಿಲಿಯನ್‌ಗೆ ತಲುಪಲಿದ್ದು, ಭಾರತೀಯ ಗೇಮಿಂಗ್ ಉದ್ಯಮದ ತ್ವರಿತ ಬೆಳವಣಿಗೆಯನ್ನೂ ಇದು ಸೂಚಿಸುತ್ತದೆ.