ಮೈಸೂರು(Mysuru): ಕನಿಷ್ಠ ಬೆಂಬಲ ಬೆಲೆ ಯೋಜನೆ(Minimum Support Pricing Plan) ಅಡಿಯಲ್ಲಿ ರಾಗಿ(Millet) ಖರೀದಿ(Purchase) ನೋಂದಣಿ(Registration) ವೇಳೆ ತಾಂತ್ರಿಕ ದೋಷ(Technical error) ಕಂಡುಬಂದ ಪರಿಣಾಮ ನೋಂದಣಿ ಕಾರ್ಯ ಸ್ಥಗಿತಗೊಂಡ(Breakdown) ಪರಿಣಾಮ ರೈತರು(Farmers) ರಾತ್ರಿಯಿಡೀ ಜಾಗರಣೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.
2ನೇ ಬಾರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ನೋಂದಣಿ ಮಾಡಲಾಗುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ನೋಂದಣಿ ಕಾರ್ಯ ಸ್ಥಗಿತಗೊಂಡಿದ್ದು, ರಾಗಿ ಖರೀದಿ ಕೇಂದ್ರದ ಬಳಿ ಜನರ ಪರದಾಡುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರದ ಈ ದಿವ್ಯ ನಿರ್ಲಕ್ಷ್ಯಕ್ಕೆ ಕಂಗಾಲಾದ ರೈತರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂಜಾನೆಯಿಂದ ಮಧ್ಯರಾತ್ರಿವರೆಗೂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ರೈತರು ಪರದಾಡಿದ್ದು, ರಾತ್ರಿ 1 ಗಂಟೆಯವರೆಗೂ ಕಾದು ಹೆಸರು ನೋಂದಾಯಿಸಿದ್ದಾರೆ.