ಮನೆ ರಾಜಕೀಯ ಸ್ವಯಂ ಕೃಷಿಯಿಂದ ಮಾತ್ರ ನಾಯಕರಾಗಲು ಸಾಧ್ಯ: ತೇಜಸ್ವಿ ಸೂರ್ಯ

ಸ್ವಯಂ ಕೃಷಿಯಿಂದ ಮಾತ್ರ ನಾಯಕರಾಗಲು ಸಾಧ್ಯ: ತೇಜಸ್ವಿ ಸೂರ್ಯ

0

ಗಂಗಾವತಿ: ಜನರ ಆಶೀರ್ವಾದ, ಜನ ಕೊಡುವ ನಡತೆ ಪ್ರಮಾಣಪತ್ರ ಮತ್ತು ಸ್ವಯಂ ಕೃಷಿಯಿಂದ ಮಾತ್ರ ನಾಯಕರಾಗಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಯುವ ಸಂಕಲ್ಪ ಸಮಾವೇಶದಲ್ಲಿ ಮಾತಿನುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಜನನ ಪ್ರಮಾಣಪತ್ರ, ತಂದೆ–ತಾಯಿ ಹಾಗೂ ತಾತನ ಹೆಸರು ಹೇಳಿಕೊಂಡು ಓಡಾಡಿದರೆ ಇಲ್ಲಿ ನಾಯಕರಾಗುವುದಿಲ್ಲ ಎಂದು ಹರಿಹಾಯ್ದರು.

ಗಂಗಾವತಿ ರಾಜ್ಯಕ್ಕೆ ಅನ್ನ ನೀಡುವ ಕೇಂದ್ರ. ಹಿಂದುತ್ವದ ಭದ್ರಕೋಟೆ, ಹನುಮನ ಜನ್ಮಸ್ಥಳ. ರಾಮಾಯಣದ ಕೇಂದ್ರ ಬಿಂದು. ಅಯೋಧ್ಯ ರಾಮ ಮಂದಿರದಂತೆ, ಭತ್ತದನಾಡಿನ ಅಂಜನಾದ್ರಿ ಅಭಿವೃದ್ಧಿ ಬಿಜೆಪಿಯಿಂದಲೇ ನಡೆಯುತ್ತಿದ್ದು, ಈಗಾಗಲೇ 120 ಕೋಟಿ ಬಿಡುಗಡೆ ಮಾಡಿ, ಕಾಮಗಾರಿಗೆ ಪೂಜೆ ನಡೆಸಲಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಉಚಿತ ವೈದ್ಯಕೀಯ ಚಿಕಿತ್ಸೆಗೆ ಆಯುಷ್ಮಾನ್ ಭಾರತ ಯೋಜನೆ ನೀಡಿದ್ದು, ಗಂಗಾವತಿ ಕ್ಷೇತ್ರದಲ್ಲಿ 24,533 ಫಲಾನುಭವಿಗಳಿದ್ದಾರೆ. ಇಲ್ಲಿ ಜೆಜೆಎಂ ಯೋಜನೆಯಡಿ 33,500 ಮನೆಗಳಿಗೆ ನೀರು ಪೂರೈಸಲಾಗಿದೆ ಎಂದರು.