ಮನೆ ಸುದ್ದಿ ಜಾಲ ಅಧಿಕಾರಕ್ಕಾಗಿ ಆಪರೇಶನ್ ಕಮಲ ಅನಿವಾರ್ಯ: ಕಟೀಲ್ ಹೇಳಿಕೆಗೆ ತೀವ್ರ ಆಕ್ಷೇಪ

ಅಧಿಕಾರಕ್ಕಾಗಿ ಆಪರೇಶನ್ ಕಮಲ ಅನಿವಾರ್ಯ: ಕಟೀಲ್ ಹೇಳಿಕೆಗೆ ತೀವ್ರ ಆಕ್ಷೇಪ

0

ಮಂಗಳೂರು (Mangalore)-`ಪಕ್ಷ ಅಧಿಕಾರ ಹಿಡಿಯಲು ಆಪರೇಶನ್ ಕಮಲ ಅನಿವಾರ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ (Nalinkumar Katil) ಹೇಳಿದ್ದಾರೆ.

ಕಟೀಲ್ ಅವರ ಈ ಹೇಳಿಕೆಗೆ ಬಿಜೆಪಿ ಶಕ್ತಿ ಕೇಂದ್ರವಾಗಿರುವ ಕರಾವಳಿಯ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಾರ್ಯಕರ್ತರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 
ನಳಿನ್‌ಕುಮಾರ್ ಕಟೀಲ ಅವರೆ ಹಾಗಾದ್ರೆ ನಾವು ಇಷ್ಟು ವರ್ಷಗಳಿಂದ ನಮ್ಮ ಕೆಲಸ ಕಾರ್ಯಗಳನ್ನೆಲ್ಲ ಬದಿಗಿಟ್ಟು ಪಕ್ಷಕ್ಕಾಗಿ, ಸಂಘಟನೆಗಾಗಿ ದುಡಿದ್ದು ವೇಸ್ಟ್ ಆಯ್ತ..!?’ ಎಂದು ಜಯಾನಂದ ಬಂಗೇರ ಪ್ರಶ್ನಿಸಿದರೆ, ‘ಇಷ್ಟರವರೆಗೆ ದುಡಿದ ಕಾರ್ಯಕರ್ತರ ಸ್ಥಿತಿ ಅಯೋಮಯ’ ಎಂದು ರಾಧಾಕೃಷ್ಣ ರಾವ್ ಟೀಕಿಸಿದ್ದಾರೆ.

‘ಮುಂಬರುವ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು, ಅಧಿಕಾರದ ಆಸೆಯಿಂದಲೇ ತಮ್ಮ ಪಕ್ಷ ತೊರೆದು ಬರುವವರನ್ನು ಸೇರಿಸಿಕೊಳ್ಳುತ್ತಿರುವ ಕರ್ನಾಟಕ ಬಿಜೆಪಿ ಪಕ್ಷದ ಬಗ್ಗೆ ಯಾಕೋ ಅಸಹ್ಯ ಹುಟ್ಟುತ್ತಿದೆ’ ಎಂದು ರಾಮಕಿಶೋರ್ ಶಾಸ್ತ್ರಿ ಹೇಳಿಕೊಂಡಿದ್ದಾರೆ.

ಹಿಂದಿನ ಲೇಖನರಾಜ್ಯದಲ್ಲಿ 167 ಮಂದಿಗೆ ಕೊರೊನಾ ಸೋಂಕು
ಮುಂದಿನ ಲೇಖನಹುತಾತ್ಮ ಯೋಧ ಕಾಶಿರಾಯ ಬಮ್ಮನಳ್ಳಿಗೆ ಶೌರ್ಯಚಕ್ರ ಪ್ರಶಸ್ತಿ