ಮನೆ ರಾಷ್ಟ್ರೀಯ ಇಂದಿನಿಂದ ಬಾಲರಾಮನ ದರ್ಶನಕ್ಕೆ ಅವಕಾಶ: ಸಹಸ್ರ ಸಂಖ್ಯೆಯಲ್ಲಿ ಭಕ್ತಸಾಗರ

ಇಂದಿನಿಂದ ಬಾಲರಾಮನ ದರ್ಶನಕ್ಕೆ ಅವಕಾಶ: ಸಹಸ್ರ ಸಂಖ್ಯೆಯಲ್ಲಿ ಭಕ್ತಸಾಗರ

0

ಅಯೋಧ್ಯೆ: ರಾಮ ಮಂದಿರದ ಉದ್ಘಾಟನೆಯ ಒಂದು ದಿನದ ಬಳಿಕ ಸಾರ್ವಜನಿಕರಿಗೆ ಬಾಲರಾಮನ ದರ್ಶನಕ್ಕಾಗಿ ಅವಕಾಶ ನೀಡಲಾಗಿದ್ದು, ಅದರಂತೆ ಮುಂಜಾನೆ ಮೂರೂ ಗಂಟೆಯಿಂದಲೇ ರಾಮಮಂದಿರದ ಸುತ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬಾಲ ರಾಮನ ದರ್ಶನಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಒಂದೆಡೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರೆ ಇನ್ನೊಂದೆಡೆ ಬಾಲರಾಮನ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.

ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಿಂದ ರಾಮಲಲ್ಲಾನ ದರ್ಶನಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ರಾಮ ಮಂದಿರದ ಹೊರಗೆ ಜಮಾಯಿಸಿದ್ದಾರೆ. ಭಕ್ತರಿಂದ ರಾಮನ ಜಯಘೋಷಗಳು ಮೊಳಗುತ್ತಿವೆ.

ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ದಿನದಲ್ಲಿ ಎರಡು ಹೊತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು ಅದರಂತೆ ಬೆಳಿಗ್ಗೆ 7 ರಿಂದ 11:30 ರವರೆಗೆ ಮತ್ತು ನಂತರ ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಕೊರೆವ ಚಳಿಯ ನಡುವೆಯೂ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದಾರೆ.

ರಾಮ ಮಂದಿರದ ಹೊರಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು. ದೇಗುಲದ ಮುಖ್ಯ ದ್ವಾರದ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಅಯೋಧ್ಯೆಗೆ ಭಕ್ತರು ಆಗಮಿಸುವ ಪ್ರಕ್ರಿಯೆ ಮುಂದುವರಿದಿದೆ. ಹೊರಗಿನಿಂದ ಬರುವ ಭಕ್ತರಲ್ಲದೆ ಅಯೋಧ್ಯೆ ನಿವಾಸಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ.

ಬಂದಿರುವ ಮಾಹಿತಿ ಪ್ರಕಾರ ಭಕ್ತರ ದಂಡೇ ನೆರೆದಿರುವುದರಿಂದ ಅಯೋಧ್ಯೆಯ ಹೋಟೆಲ್, ಲಾಡ್ಜ್ ಗಳು ಹೌಸ್ ಫುಲ್ ಆಗಿವೆ. ಹಲವು ಹೋಟೆಲ್‌ಗಳಲ್ಲಿ ಬಾಡಿಗೆಯನ್ನೂ ಹೆಚ್ಚಿಸಿದೆ ಎಂದು ಹೇಳಲಾಗಿದೆ.

ಹಿಂದಿನ ಲೇಖನಮಂಡ್ಯ: ದೇಣಿಗೆ ಕೊಡುವ ಆಮಿಷವೊಡ್ಡಿ ನಕಲಿ ನೋಟು ಕೊಟ್ಟು 1.10 ಕೋಟಿ ದೋಚಿ ಆರೋಪಿ ಪರಾರಿ
ಮುಂದಿನ ಲೇಖನಇಂದು ಪಿಎಸ್ ಐ ನೇಮಕಾತಿಗಾಗಿ ಮರು ಪರೀಕ್ಷೆ: ಕೊನೆಯ ಬೆಲ್ ವರೆಗೆ ಪರೀಕ್ಷಾ ಹಾಲ್ ನಿಂದ ಹೊರ ಹೋಗುವಂತಿಲ್ಲ