ಮನೆ ರಾಷ್ಟ್ರೀಯ ವಿಪಕ್ಷಗಳ ಕೋಲಾಹಲ: ಸಂಸತ್‌ ನ ಜಂಟಿ ಸಮಿತಿಗೆ ಏಕ ಚುನಾವಣೆ ಮಸೂದೆ

ವಿಪಕ್ಷಗಳ ಕೋಲಾಹಲ: ಸಂಸತ್‌ ನ ಜಂಟಿ ಸಮಿತಿಗೆ ಏಕ ಚುನಾವಣೆ ಮಸೂದೆ

0

ಹೊಸದಿಲ್ಲಿ: “ಒಂದು ದೇಶ, ಒಂದು ಚುನಾವಣೆ’ಗೆ ಸಂಬಂಧಿಸಿದ 2 ಮಸೂದೆಗಳನ್ನು ಸಂಸತ್‌ನ ಜಂಟಿ ಸಮಿತಿಗೆ ವಹಿಸಲಾಗಿದೆ.

Join Our Whatsapp Group

 ಈ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ. ಶುಕ್ರವಾರ(ಡಿ.20) ವಿಪಕ್ಷಗಳ ಗದ್ದಲದ ನಡುವೆಯೇ ಮಸೂದೆಯನ್ನು ಜೆಪಿಸಿಗೆ ವಹಿಸುವ ನಿರ್ಣಯ ಅಂಗೀಕರಿಸ ಲಾಯಿತು.

ಸಮಿತಿಗೆ ಮೇಲ್ಮನೆಯಿಂದ 12 ಸಂಸದರ ನೇಮಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇ ವಾಲಾ ಇದ್ದಾರೆ.

39 ಸದಸ್ಯರು: ಜೆಪಿಸಿಗೆ ಉದ್ಧವ್‌ ಠಾಕ್ರೆ ಶಿವಸೇನೆ, ಸಿಪಿಎಂ, ಎಲ್‌ ಜೆಪಿ (ಪಾಸ್ವಾನ್‌) ಪಕ್ಷದಿಂದ ಹೊಸತಾಗಿ ಒಬ್ಬೊಬ್ಬರನ್ನು ನೇಮಿಸಲಾಗಿದ್ದು, ಒಟ್ಟು ಸದಸ್ಯರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

 “ಏಕ ಚುನಾವಣೆ’ ಮಸೂದೆ ಪರಿಶೀಲನೆಗೆ ರಚಿಸಲಾದ ಜೆಪಿಸಿಗೆ ಪಿ.ಪಿ.ಚೌಧರಿ ಅಧ್ಯಕ್ಷ ರಾಗಿ ಆಯ್ಕೆ ಆಗಿದ್ದಾರೆ. ರಾಜಸ್ಥಾನದ ಪಾಲಿಯ ಸಂಸದರಾದ ಚೌಧರಿ, ಕಾರ್ಪೊರೆಟ್‌ ವ್ಯವಹಾರ, ಕಾನೂನು -ನ್ಯಾಯ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾಗಿ ಅನುಭವ ಪಡೆದಿದ್ದಾರೆ.