ಮನೆ ರಾಷ್ಟ್ರೀಯ ಮೋದಿ ಅದಾನಿ ಏಕ್ ಹೈ… ಅದಾನಿ ಸೇಫ್ ಹೈ… : ವಿಶೇಷ ಜಾಕೆಟ್ ಧರಿಸಿ ಸಂಸತ್...

ಮೋದಿ ಅದಾನಿ ಏಕ್ ಹೈ… ಅದಾನಿ ಸೇಫ್ ಹೈ… : ವಿಶೇಷ ಜಾಕೆಟ್ ಧರಿಸಿ ಸಂಸತ್ ಹೊರಗೆ ವಿಪಕ್ಷ ಪ್ರತಿಭಟನೆ

0

ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ಸಂಸತ್ ಕಲಾಪ ವಿಸರ್ಜಿಸಿ ಪ್ರತಿಭಟನೆ ನಡೆಸುತ್ತಿರುವ ವಿಪಕ್ಷ ಇಂದು ವಿಶಿಷ್ಟ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದೆ.

Join Our Whatsapp Group

ಮೋದಿ ಅದಾನಿ ಏಕ್ ಹೈ… ಅದಾನಿ ಸೇಫ್ ಹೈ… ಎಂಬ ಘೋಷ ವಾಕ್ಯದ ಟಿ ಶರ್ಟ್ ಧರಿಸಿ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅದಾನಿ ವಿಚಾರದಲ್ಲಿ ಮೋದಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಯಾಕೆಂದರೆ ಇಬ್ಬರೂ ಒಂದೇ, ಅದಾನಿ ವಿರುದ್ಧ ತನಿಖೆಗೆ ಆದೇಶಿಸಿದರೆ ಎಲ್ಲಿ ತಾನೂ ತನಿಖೆ ಎದುರಿಸಬೇಕು ಎನ್ನುವ ಭಯ ಅವರಿಗಿದೆ ಹಾಗಾಗಿ ತನಿಖೆಗೆ ಆದೇಶ ನೀಡುವುದಿಲ್ಲ ಅವರಿಬ್ಬರೂ ಒಂದೇ ಎಂದು ಗುಡುಗಿದರು.

ಸಂಸತ್ ಭವನದ ಎದುರು ಮೋದಿ ಅದಾನಿ ವಿರುದ್ದ ಘೋಷಣೆ ಕೂಗಿ, ಅದಾನಿ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಸೇರಿ ಹಲವು ವಿಪಕ್ಷ ಸದಸ್ಯರು ಜೊತೆಗಿದ್ದರು.