ಬೆಂಗಳೂರು: ನಮ್ಮ ಗುರಿ ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಎಲ್ಲ 28 ಕ್ಷೇತ್ರಗಳಲ್ಲಿಯೂ ಗೆಲ್ಲುವುದಾಗಿದೆ. ಅದಕ್ಕಾಗಿ ಬಿಜೆಪಿ, ಜೆಡಿಎಸ್ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕರ್ತರಿಗೆ ಸಂದೇಶ ನೀಡುತ್ತೇವೆ. ನಿಜವಾದ ಮೈತ್ರಿ ಧರ್ಮ ಏನು ಅನ್ನೋದನ್ನ ತಿಳಿಸಿಕೊಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಸಭೆಗೂ ಮುನ್ನ ಮಾತನಾಡಿದ ಅವರು, ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದೆ. ಉಭಯ ಪಕ್ಷಗಳ ಸಭೆ ಮಾಡಲು ಆಗಿರಲಿಲ್ಲ. ಆರೋಗ್ಯ ಸಮಸ್ಯೆಯಿಂದ ಸಭೆ ಮುಂದೂಡಲಾಗಿತ್ತು. ಎರಡೂ ಪಕ್ಷದಲ್ಲಿ ವಿಶ್ವಾಸದ ಮುಖಾಂತರ ಕೆಲಸ ಆಗಬೇಕು ಎಂದರು.
ಸಿಎಂ ಹಿಂದುಳಿದ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ನಮ್ಮ ಗುರಿ ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ 28 ಅಭ್ಯರ್ಥಿಗಳನ್ನು ಗೆಲ್ಲುವುದಾಗಿದೆ. ಬಿಜೆಪಿ, ಜೆಡಿಎಸ್ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕರ್ತರಿಗೆ ಸಂದೇಶ ನೀಡುತ್ತೇವೆ. ನಿಜವಾದ ಮೈತ್ರಿ ಧರ್ಮ ಏನು ಅನ್ನೋದನ್ನ ತಿಳಿಸಿಕೊಡುತ್ತೇವೆ. ಮೈಸೂರು, ಮಂಡ್ಯದಲ್ಲಿ ಜಂಟಿ ಸಭೆ ಮಾಡಿದ್ದೇವೆ. ಚಿಕ್ಕಪೇಟೆ ಶಾಸಕರ ಮನೆಯಲ್ಲಿ ಬೆಂಗಳೂರಿನ ನಾಲ್ಕೂ ಕ್ಷೇತ್ರದ ಗೆಲುವಿನ ಬಗ್ಗೆ ಮಾತಾಡಿದ್ದೇವೆ ಎಂದರು.
ಜೆಡಿಎಸ್ ನಾಯಕ ಬಂಡೆಪ್ಪ ಖಾಶಂಪೂರ್ ಮಾತನಾಡಿ, ನಾವು ಎನ್ ಡಿಎ ಮೈತ್ರಿ ಆದ ಮೇಲೆ ಎಲ್ಲ ವರಿಷ್ಠರು ಸೇರಿ ಮೋದಿ ಅವರಿಗೆ ಬಲ ಕೊಡಲು 28ಕ್ಕೆ 28 ಕ್ಷೇತ್ರ ಗೆಲ್ಲುವ ಗುರಿ ಇದೆ. ಕಾರ್ಯಕರ್ತರು ಒಟ್ಟಾಗಲ್ಲ ಅಂತಾರೆ. ನೂರಕ್ಕೆ ನೂರರಷ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ. ಬೀದರ್‌ನಲ್ಲಿಯೂ ನಮಗೆ ಉತ್ತಮ ವಾತಾವರಣ ಇದೆ ಎಂದರು.