ಮನೆ ರಾಷ್ಟ್ರೀಯ ನಮ್ಮ ಸರ್ಕಾರ ಬಡವರಿಗೆ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿದೆ: ಪ್ರಧಾನಿ ಮೋದಿ

ನಮ್ಮ ಸರ್ಕಾರ ಬಡವರಿಗೆ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿದೆ: ಪ್ರಧಾನಿ ಮೋದಿ

0

ಸಾತ್ನಾ/ಮಧ್ಯಪ್ರದೇಶ: ನಮ್ಮ ಸರ್ಕಾರ ಬಡವರಿಗೆ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿದೆ, ಆದರೆ ನನಗಾಗಿ ಒಂದು ಮನೆಯನ್ನು ಸಹ ಕಟ್ಟಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆ ಇಲ್ಲಿನ ಸಾತ್ನಾದಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದ ಮತದಾರರ ಪ್ರತಿ ಮತವು ತ್ರಿಶಕ್ತಿಯನ್ನು ಹೊಂದಿದೆ. ಬಿಜೆಪಿಗೆ ಮತ್ತೆ ಸರ್ಕಾರ ರಚಿಸಲು, ಕೇಂದ್ರದಲ್ಲಿ ಪ್ರಧಾನಿಯನ್ನು ಬಲಪಡಿಸಲು ಮತ್ತು “ಭ್ರಷ್ಟ” ಕಾಂಗ್ರೆಸ್ ಅನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ನಿಮ್ಮ ಒಂದು ಮತವು ಬಿಜೆಪಿಗೆ ಮತ್ತೊಮ್ಮೆ ಸರ್ಕಾರ ರಚಿಸಲು ಸಹಾಯ ಮಾಡುತ್ತದೆ. ನಿಮ್ಮ ಮತವು ದೆಹಲಿಯಲ್ಲಿ ಮೋದಿಯನ್ನು ಬಲಪಡಿಸುತ್ತದೆ ಮತ್ತು ಇದು ಭ್ರಷ್ಟ ಕಾಂಗ್ರೆಸ್ ಅನ್ನು ಅಧಿಕಾರದಿಂದ ನೂರು ಮೈಲಿ ದೂರದಲ್ಲಿ ಇಡುತ್ತದೆ. ಅಂದರೆ ಒಂದು ಮತ, ಮೂರು ಅದ್ಭುತಗಳು. ಇದು ತ್ರಿಶಕ್ತಿಯಂತೆ ಎಂದರು.

ದೇಶದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ ಸೃಷ್ಟಿಸಿದ 10 ಕೋಟಿ ನಕಲಿ ಫಲಾನುಭವಿಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ನಿಂದಿಸುತ್ತಿದ್ದಾರೆ ಎಂದರು.

ಸಾತ್ನಾದಲ್ಲಿ ಬಡವರು 1.32 ಲಕ್ಷ ಮನೆಗಳನ್ನು ಪಡೆದಿದ್ದಾರೆ. COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಾರಂಭವಾದ ಬಡವರಿಗೆ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ನಂತರ ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಲು ನಿರ್ಧರಿಸಿದ್ದೇನೆ ಎಂದರು.