ಮನೆ ವ್ಯಕ್ತಿತ್ವ ವಿಕಸನ ನಮ್ಮ ಮಾದರಿಗಳು

ನಮ್ಮ ಮಾದರಿಗಳು

0

ವ್ಯಕ್ತಿತ್ವವು ರೂಪುಗೊಳ್ಳುವುದರಲ್ಲಿ ಮಾದರಿಕರಣ ಎನ್ನುವುದು ಬಹಳ ಮಹತ್ವವಾಗಿದೆ. ಮಾದರಿಕರಣದಿಂದ ಅನುಕರಣಾ ಕಲಿಕೆಯು ನಡೆದು ಅದರ ಪರಿಣಾಮವಾಗಿ ವ್ಯಕ್ತಿತ್ವದ ವಿಕಾಸವಾಗುತ್ತದೆ. ಊಟ ಮಾಡುವುದು, ಮುಖ ತೊಳೆಯುವುದು,ನಡೆಯುವುದು ಮುಂತಾದ ಪ್ರಾಥಮಿಕ ಕಲಿಕೆಗಳೆಲ್ಲ ಅನುಕರಣೆಯ ಮೂಲಕವೇ ನಡೆಯುತ್ತದೆ. ಮಾತೃಭಾಷೆಯ ಬಳಕೆಯ ಬಹುಪಾಲು ಕಲಿಕೆಯು ಕೂಡ ಅನುಕರಣೆಯಿಂದಲೇ ಆಗುತ್ತದೆ. ಬಾಲ್ಯದಲ್ಲಿ ಮಕ್ಕಳು ತಮ್ಮ ಕುಟುಂಬದ ಹಿರಿಯರನ್ನು ಅನುಸರಿಸಿ ಕಲಿಕೆಯನ್ನೆಲ್ಲ ರೂಡಿಗೊಳಿಸಿಕೊಳ್ಳುತ್ತಾರೆ.

Join Our Whatsapp Group

      ಪ್ರಾಥಮಿಕ ವ್ಯಕ್ತಿತ್ವದ ಬಹುಭಾಗವು ಅನುಕರಣೆಯಿಂದ ಉಂಟಾಗುತ್ತದೆ.ಆದರೆ ನಂತರದ ವ್ಯಕ್ತಿತ್ವದ ವಿಕಾಸದ ವಿಚಾರಕ್ಕೆ ಬಂದಾಗ ಕಲಿಕೆಯ ವಿಧಾನದ ಅಸ ಮರ್ಪಕತೆಯಿಂದಾಗಿ ಮಾದರಿಯನ್ನು ಅನುಸರಿಸಿ ಕಲಿಯುವ ಪ್ರಕ್ರಿಯೆಯು ಯದ್ವಾ ತದ್ವ ಆಗಿ ಕೇವಲ ಹೇಳುವುದಕ್ಕೆ ಮಾತ್ರ ಇರುವಂಥದಾಗಿ ಬಿಡುತ್ತದೆ. ಉದಾಹರಣೆಗೆ ಒಬ್ಬರು ಬಂದು ನೀವು ಅಬ್ರಹಾಂ ಲಿಂಕನ್ನರಂತೆ ಆಗಬೇಕು ಮಕ್ಕಳೇಎನ್ನುತ್ತಾರೆ.ಇನ್ನೊಬ್ಬರು ಬಂದು ನೀವು ಬಸಣ್ಣನವರಂತೆ ಆಗಬೇಕು. ಎನ್ನುತ್ತಾರೆ ಮತ್ತೊಬ್ಬರು ರಾಣಾ ಪ್ರತಾಪ ಸಿಂಹನಂತೆ ಆಗಬೇಕು ಎನ್ನುತ್ತಾರೆ ಈ ರೀತಿ ಮಾದರಿಗಳನ್ನು ಮುಂದೊಡ್ಡುವುದು ಅನೇಕ ಕಾರಣಗಳಿಂದ ಅರ್ಥ ಹೀನವಾಗುತ್ತದೆ. ರಾಣ ಪ್ರತಾಪ ದೇಶ ಭಕ್ತಿಯು ಹಿಂಸಾತ್ಮಕ ಹೋರಾಟದಿಂದ ಪ್ರಕಟಿತವಾಗಿ ಆ ವ್ಯಕ್ತಿತ್ವವನ್ನು ರೂಪಿಸಿದೆ. ಆ ಕಾಲಕ್ಕೆ ಅದು ಮಹಾನ್ ವ್ಯಕ್ತಿತ್ವವೇ ಆಗಿತ್ತು.ಬಸವಣ್ಣನವ ವ್ಯಕ್ತಿತ್ವವು ಸುಧಾರಣೆಗಳ ದಿಟ್ಟತನದಿಂದ ರೂಪಗೊಂಡಿದ್ದು. ಈ ಎರಡು ವ್ಯಕ್ತಿತ್ವಗಳಲ್ಲೆ  ವೈರುಧ್ಯಗಳಿವೆ.ಅಂದ ಮೇಲೆ ಮಕ್ಕಳು ಯಾವುದನ್ನು ತಾನೇ ಅನುಕರಿಸಲು ಸಾಧ್ಯ ಎರಡನೆಯದಾಗಿ ಈ ವ್ಯಕ್ತಿಗಳೆಲ್ಲ ಇಂದಿನ ಪರಿಸರವೇ ಇಲ್ಲದ ಪರಿಸರದಲ್ಲಿ ಬಾಳಿದವರು. ಆ ಕಾಲಮಾನದ ಪರಿಸರದಲ್ಲಿ ರೂಪುಗೊಂಡ ವ್ಯಕ್ತಿತ್ವವನ್ನು ಈಗ ಅನುಕರಿಸಲು ಆಗುವುದಿಲ್ಲ.ಮೂರಯದಾಗಿ ಈ ಮಹಾವ್ಯಕ್ತಿಗಳ ಬಗ್ಗೆ ವಿಚಾರಗಳು ಗೊತ್ತಿವೆಯೆ ಹೊರತು ಅವರೊಂದಿಗೆ ಯಾವ ಒಡನಾಟವೂ ನಮಗಿಲ್ಲ ಅದರ ವ್ಯಕ್ತಿತ್ವವನ್ನು ಅರ್ಮೂರ್ತ ಕಲ್ಪನೆಯಾಗಿ ಗ್ರಹಿಸಬೇಕು.ಸುಮಾರು 30 ವರ್ಷ ವಯಸ್ಸಿನ ನಂತರ ಬರುವ ಸಾಮರ್ಥ್ಯ ಅದು. ಆದ್ದರಿಂದ ಅವರನ್ನು ಅನುಕರಿಸಲು ಆಗುವುದಿಲ್ಲ. ಮೇಲಾಗಿ ಬೃಹತ್ ವ್ಯಕ್ತಿತ್ವವನ್ನು  ಮಾದರಿಯಾಗಿ ತೆಗೆದುಕೊಂಡಾಗ ಹಾಗೆ ಆಗಲು ನಮಗೆ ಸಾಧ್ಯವೇ ಇಲ್ಲ ಎನಿಸುತ್ತದೆ ಬದಲು ಮಕ್ಕಳ ಒಡನಾಟದಲ್ಲಿರುವ ಶಿಕ್ಷಕರು,ತಾಯಿ- ತಂದೆ, ಅಜ್ಜ- ಅಜ್ಜಿ ಊರಿನ ಹಿರಿಯರು ಇಂಥವರಲ್ಲಿರುವ ಒಂದೊಂದು ಒಳ್ಳೆಯ ಗುಣಗಳನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಆಗ ಅನುಸರಿಸಲು ಸಾಧ್ಯವಾಗುತ್ತದೆ.