ಮನೆ ಅಂತಾರಾಷ್ಟ್ರೀಯ ನೈಜೀರಿಯಾ ತೈಲ ಸಂಸ್ಕರಣಾ ಘಟಕದಲ್ಲಿ ಸ್ಫೋಟ: 100 ಮಂದಿ ಸಾವು

ನೈಜೀರಿಯಾ ತೈಲ ಸಂಸ್ಕರಣಾ ಘಟಕದಲ್ಲಿ ಸ್ಫೋಟ: 100 ಮಂದಿ ಸಾವು

0

ಪೋರ್ಟ್ ಹಾರ್ಕೋರ್ಟ್ (Port Harcourt)ನೈಜೀರಿಯಾ (Nigeria Oil Refinery )ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿ 100 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ನೈಜೀರಿಯಾದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಈ ಸ್ಫೋಟ ಸಂಭವಿಸಿದೆ. ಇದು ನೈಜೀರಿಯಾದಲ್ಲಿ ಇತ್ತೀಚಿಗೆ ಸಂಭವಿಸಿರುವ ಅತಿ ದೊಡ್ಡ ದುರಂತವಾಗಿದೆ ಎಂದು ಹೇಳಲಾಗಿದೆ. ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿರುವ ಬಗ್ಗೆ ಪೊಲೀಸರು ಖಚಿತಪಡಿಸಿದ್ದಾರೆ. ಇದು ಆಫ್ರಿಕಾದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ಘಟಕ.

ಅಕ್ರಮ ಸಂಸ್ಕರಣಾ ಘಟಕದಲ್ಲಿ ವ್ಯಾಪಾರಕ್ಕಾಗಿ ತೈಲ ಘಟಕದ ನಿರ್ವಾಹಕರು ಮತ್ತು ಗ್ರಾಹಕರು ಒಟ್ಟುಗೂಡಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅಕ್ರಮ ಕಚ್ಚಾ ತೈಲ ಸಂಸ್ಕರಣೆಯು ದಕ್ಷಿಣ ನೈಜೀರಿಯಾದಲ್ಲಿ ಸಾಮಾನ್ಯ. ದೇಶದ ತೈಲ ಸಂಪನ್ಮೂಲಗಳನ್ನು ಕದಿಯುವುದನ್ನು ತಡೆಯುವ ಕ್ರಮಗಳ ಭಾಗವಾಗಿ ನೈಜೀರಿಯಾ ಸರ್ಕಾರವು ಅಕ್ರಮ ಸಂಸ್ಕರಣಾಗಾರಗಳ ಮೇಲೆ ದಾಳಿ ಮಾಡಲು ಮತ್ತು ನಾಶಮಾಡಲು ಮಿಲಿಟರಿಯನ್ನು ನಿಯೋಜಿಸಿದೆ. ಅದಾಗ್ಯೂ ಅಕ್ರಮವಾಗಿ ತೈಲ ಸಂಸ್ಕರಣೆ ಎಗ್ಗಿಲದೇ ನಡೆಯುತ್ತಿದೆ.