ತುಮಕೂರು: ಖಾಸಗಿ ಬಸ್ ಗಳ ಓವರ್ ಲೋಡು ಮತ್ತು ಓವರ್ ಸ್ಪೀಡ್ ಗೆ ಬ್ರೇಕ್ ಹಾಕಲು ಬೆಳಿಗ್ಗೆಯೇ ಕೊರಟಗೆರೆ ಠಾಣೆ ಪೊಲೀಸರು ರಸ್ತೆಗಿಳಿದಿದ್ದಾರೆ.
ತುಮಕೂರು- ಗೌರಿಬಿದನೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ಗಳಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಲಾಗುತ್ತಿತ್ತು. ಹೀಗೆ ಓವರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಬಸ್’ನ್ನು ಸಬ್ ಇನ್ಸ್‌ಪೆಕ್ಟರ್ ಚೇತನ್ ಕುಮಾರ್ ತಡೆದಿದ್ದಾರೆ. ಮಾತ್ರವಲ್ಲದೇ ಬಸ್ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ಮಾಲೀಕರ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
Saval TV on YouTube