ರಾಯಚೂರು: ತಾಲೂಕಿನ ಸಗಮಕುಂಟಾ ಗ್ರಾಮದ ಬಳಿ ಸ್ಟೇರಿಂಗ್ ಕಟ್ ಆಗಿ ಸಾರಿಗೆ ಬಸ್ ಪಕ್ಕದ ಜಮೀನಿಗೆ ಉರುಳಿದ್ದು, 30 ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ತಾಲೂಕಿನ ಕೊರ್ವಿಹಾಳ ಗ್ರಾಮದಿಂದ ರಾಯಚೂರಿಗೆ ಆಗಮಿಸುತಿದ್ದ ಬಸ್ ನಲ್ಲಿ ಶಾಲಾ ಮಕ್ಕಳೆ ಹೆಚ್ಚಾಗಿದ್ದರು. ದ್ವಿಚಕ್ರ ವಾಹನಕ್ಕೆ ಸೈಡ್ ಕೊಡಲು ಹೋದಾಗ ಸ್ಟೇರಿಂಗ್ ಕಟ್ಟಾಗಿ ನಿಯಂತ್ರಣ ತಪ್ಪಿ ಅನಹುತ ಸಂಭವಿಸಿದೆ.
ಘಟನೆಯಲ್ಲಿ ಕೊರ್ವಿಹಾಳ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ಸಂಗೀತಾಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
Saval TV on YouTube