ಪಾದದ ‘ಅಂಗುಷ್ಠ’ ಬೆರಳುಗಳ ಸಹಾಯದಿಂದ ಮಾಡುವ ಈ ಆಸನಕ್ಕೆ ಪಾದಾಂಗಗುಷ್ಠಾಸನ ಎಂಬ ಹೆಸರು ಅನ್ವರ್ಥವಾಗಿದೆ..
ಮಾಡುವ ಕ್ರಮ
ಎರಡು ಕಾಲನ್ನೂ ಮುಂದೆ ಚಾಚಿ ಕುಳಿತುಕೊಳ್ಳಬೇಕು.
ಅನಂತರ ಯಾವುದಾದರೂ ಒಂದು ಕಾಲನ್ನು( ಉದಾ: ಎಡಗಾಲನ್ನು) ಮಡಿಸಿ ತುದಿಗಾಲು ಮತ್ತು ಬೆರಳುಗಳ ಮೇಲೆ ಭಾರ ಹಾಕಿ ಹಿಮ್ಮಡಿ ಗುದದ್ವಾರಕ್ಕೆ ಸ್ಪರ್ಶಿಸುವಂತೆ ಇಟ್ಟುಕೊಳ್ಳಬೇಕು.
ಅನಂತರ ಇನ್ನೊಂದು ಕಾಲನ್ನು ಮಡಿಸಿ ಎಡಗಾಲಿನ ಮಂಡಿಯ ಮೇಲೆ ಬಲಗಾಲಿನ ಗಂಟು ಬರುವಂತೆ ಇಡಬೇಕು. ಅನಂತರ ಇಡೀ ಶರೀರದ ಭಾರವನ್ನು ಕಾಲಿನ ಬೆರಳುಗಳ ಮೇಲೆ ಹೇರಿ ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ಜೋಡಿಸುವುದರೊಂದಿಗೆ ಬೆನ್ನನ್ನು ನೇರಮಾಡಿ ಎದೆಯನ್ನು ಎತ್ತಿ ಕುಳಿತುಕೊಳ್ಳಬೇಕು. ಪ್ರಾರಂಭದಲ್ಲಿ ಈ ಆಸನವನ್ನು ಗೋಡೆಯ ಪಕ್ಕದಲ್ಲಿ ಮಾಡುವುದು ಉತ್ತಮ. ಇಲ್ಲದಿದ್ದರೆ ಮುಗ್ಗರಿಸುವ ಸಾಧ್ಯತೆಗಳುಂಟು. ಒಂದರಿಂದ ಎರಡು – ಎರಡೂವರೆ ನಿಮಿಷಗಳವರೆಗೆ ನಮಸ್ಕಾರ ಮುದ್ರೆಯಲ್ಲಿ ಕುಳಿತಿದ್ದು, ಅನಂತರ ಕಾಲುಗಳನ್ನು ಬದಲಾಯಿಸಬಹುದು.
ಲಾಭಗಳು
ಪಾದಾಂಗುಷ್ಠಾಸನವು ಮೂಳೆರೋಗಕ್ಕೆ ಸಹಾಯಕಾರಿ. ಈ ಆಸನದ ಆಭ್ಯಾಸದಿಂದ ವೀರ್ಯ ದೋಷ ದೂರವಾಗುತ್ತದೆ. ಸ್ಮರಣಶಕ್ತಿ ಹೆಚ್ಚುತ್ತದೆ. ಕಾಲುಗಳಿಗೆ ಹೆಚ್ಚು ಶಕ್ತಿ ಬರುತ್ತದೆ.