ಮನೆ ರಾಜ್ಯ ಬೆಂಕಿಗೆ ಭತ್ತದ ಹುಲ್ಲು, ತೆಂಗಿನ ಸಸಿಗಳು ಆಹುತಿ

ಬೆಂಕಿಗೆ ಭತ್ತದ ಹುಲ್ಲು, ತೆಂಗಿನ ಸಸಿಗಳು ಆಹುತಿ

0

ಕೆ.ಆರ್.ಪೇಟೆ:ತಾಲೂಕಿನ ಶೀಳನೆರೆ ಹೋಬಳಿಯ ಊಚನಹಳ್ಳಿ ಗ್ರಾಮದ ಕುಮಾರ ಬಿನ್ ಲೇಟ್ ಶಿವನಂಜಯ್ಯ ಎಂಬುವವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಬೆಳೆದು ಮೆದೆ ಹಾಕಿದ್ದ ಭತ್ತದ ಬಣವೆಗೆ ಆಕಸ್ಮಿಕವಾಗಿ ಬೆಂಕಿಯಾಗಿದ್ದು ಸುಮಾರು ಎರಡು ಟ್ಯಾಕ್ಟರ್ ಹುಲ್ಲು ಬೆಂಕಿಗೆ ಆಹುತಿಯಾಗಿರುತ್ತದೆ.

ಹೊನ್ನೇನಹಳ್ಳಿ ಗ್ರಾಮದ ಶಿವೇಗೌಡ ಬಿನ್ ಲೇಟ್ ಮಾಸ್ತಿಗೌಡ ಎಂಬುವವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಹುಲ್ಲು ಮತ್ತು ೫೦ ತೆಂಗಿನ ಸಸಿಗಳು ಬೆಂಕಿಗೆ ಆಹುತಿಯಾಗಿವೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ ಹಾಗೂ ಸಿಬ್ಬಂದಿಯವರು ಧಾವಿಸಿ ಆಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿರುತ್ತಾರೆ. ನಾವುಗಳು ಬಡ ರೈತಾಪಿ ವರ್ಗದವರಾಗಿದ್ದು ಬಹಳ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದೇವೆ.ಈ ಬಾರಿ ಪ್ರತಿ ಎಕರೆ ಹುಲ್ಲಿಗೆ ೩೦೦೦೦-೪೦೦೦೦ ರೂಪಾಯಿಗಳ ಬೆಲೆಯಿದ್ದು ಕೊಂಡುಕೊಳ್ಳಲು ನಮ್ಮ ಬಳಿ ಹಣವಿಲ್ಲ.ನಮ್ಮ ಜಾನುವಾರು ಗಳನ್ನು ದೇವರೇ ಕಾಪಾಡಬೇಕು. ತೆಂಗಿನ ಸಸಿಗಳು ಸುಟ್ಟಿದ್ದು ತಾಲ್ಲೂಕು ಆಡಳಿತ ಕೂಡಲೇ ಇದನ್ನು ಪರಿಶೀಲನೆ ಮಾಡಿ ನಮಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರುಗಳು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.