ಮನೆ ಸುದ್ದಿ ಜಾಲ ಬೆಂಜಮಿನ್ ನೆತನ್ಯಾಹು ಅಪಹರಿಸಿ – ಅಮೆರಿಕ, ಟರ್ಕಿಗೆ ಪಾಕ್ ಒತ್ತಾಯ..!

ಬೆಂಜಮಿನ್ ನೆತನ್ಯಾಹು ಅಪಹರಿಸಿ – ಅಮೆರಿಕ, ಟರ್ಕಿಗೆ ಪಾಕ್ ಒತ್ತಾಯ..!

0

ಇಸ್ಲಾಮಾಬಾದ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಅಪಹರಿಸಬೇಕು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಅಮೆರಿಕ ಹಾಗೂ ಟರ್ಕಿಗೆ ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಖವಾಜಾ ಆಸಿಫ್, ಅಮೆರಿಕ ವೆನೆಜುವೆಲಾ ಅಧ್ಯಕ್ಷರನ್ನು ಅಪಹರಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನೂ ಅಪಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಬೆಂಜಮಿನ್ ನೆತನ್ಯಾಹು ಮಾನವೀಯತೆಯ ಅಪರಾಧಿಯಾಗಿದ್ದು, ಗಾಜಾ ಪಟ್ಟಿಯಲ್ಲಿ ಆತ ಮಾಡಿರುವ ನರಮೇಧಕ್ಕೆ ಕ್ಷಮೆಯೇ ಇಲ್ಲ. ಅಮೆರಿಕಕ್ಕೆ ಮಾನವೀಯತೆ ಮೇಲೆ ಗೌರವವಿದ್ದರೆ, ಈ ಕೂಡಲೇ ಇಸ್ರೇಲ್ ಪ್ರಧಾನಿಯನ್ನು ಅಪಹರಿಸಬೇಕು. ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಇದನ್ನು ನಿರೀಕ್ಷಿಸುತ್ತೇನೆ ಎಂದು ಖವಾಜಾ ಆಸಿಫ್ ಆಗ್ರಹಿಸಿದ್ದಾರೆ.

ಇಷ್ಟೇ ಅಲ್ಲದೇ ಟರ್ಕಿ ಕೂಡ ಬೆಂಜಮಿನ್ ನೆತನ್ಯಾಹು ಅವರನ್ನು ಅಪಹರಿಸಬಹುದು. ಪ್ರತಿಯೊಬ್ಬ ಪಾಕಿಸ್ತಾನಿ ಅದಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾನೆ. ಇಸ್ರೇಲ್ ಪ್ರಧಾನಿ ಪ್ಯಾಲೆಸ್ತೀನಿಯರ ಮೇಲೆ ನಡೆಸಿದ ದೌರ್ಜನ್ಯಕ್ಕೆ, ಮಾನವ ನಾಗರಿಕ ಇತಿಹಾಸದಲ್ಲಿ ಬೇರೆ ಉದಾಹರಣೆ ಸಿಗುವುದಿಲ್ಲ ಎಂದು ಖವಾಜಾ ಆಸಿಫ್ ವಾಗ್ದಾಳಿ ನಡೆಸಿದ್ದಾರೆ.