ಮನೆ ಅಂತಾರಾಷ್ಟ್ರೀಯ ಲ್ಯಾಂಡಿಂಗ್ ಟೆಸ್ಟ್ ವೇಳೆ ಪಾಕ್‌ನ ಸರ್ಕಾರಿ ಹೆಲಿಕಾಪ್ಟರ್ ಪತನ..!

ಲ್ಯಾಂಡಿಂಗ್ ಟೆಸ್ಟ್ ವೇಳೆ ಪಾಕ್‌ನ ಸರ್ಕಾರಿ ಹೆಲಿಕಾಪ್ಟರ್ ಪತನ..!

0

ಇಸ್ಲಾಮಾಬಾದ್ : ಹೊಸದಾಗಿ ನಿರ್ಮಾಣವಾಗಿದ್ದ, ಹೆಲಿಪ್ಯಾಡ್ ಮೇಲೆ ಲ್ಯಾಂಡಿಂಗ್ ಟೆಸ್ಟ್ ನಡೆಸುತ್ತಿದ್ದಾಗ ಪಾಕಿಸ್ತಾನದ ಸರ್ಕಾರಿ ಹೆಲಿಕಾಪ್ಟರ್ ಪತನಗೊಂಡು ಐವರು ಸಾವನ್ನಪ್ಪಿರುವ ಘಟನೆ ಗಿಲ್ಗಿಟ್ – ಬಾಲ್ಟಿಸ್ತಾನ್‌ನಲ್ಲಿ ನಡೆದಿದೆ.

ಇಂದು (ಸೋಮವಾರ) ಗಿಲ್ಗಿಟ್ – ಬಾಲ್ಟಿಸ್ತಾನ್‌ನ ಡೈಮರ್ ಜಿಲ್ಲೆಯ ಚಿಲಾಸ್‌ನ ಥೋರ್ ಪ್ರದೇಶದ ಬಳಿ ಈ ಅವಘಡ ಸಂಭವಿಸಿದೆ. ಪರಿಣಾಮ ಇಬ್ಬರು ಪೈಲಟ್ ಸೇರಿ ಮೂವರು ತಂತ್ರಜ್ಞರು ಸಾವನ್ನಪ್ಪಿದ್ದಾರೆ.

ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಹೊಸದಾಗಿ ನಿರ್ಮಾಣವಾಗಿದ್ದ, ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಪರೀಕ್ಷೆ ನಡೆಸುತ್ತಿದ್ದಾಗ Mi-17 ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಐದು ಜನರೂ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ MI-17 ಸರ್ಕಾರಿ ಹೆಲಿಕಾಪ್ಟರ್ ಪತನಗೊಂಡಿತ್ತು. ಅದಾದ ಕೆಲವು ದಿನಗಳ ನಂತರ ಇದೀಗ ಮತ್ತೊಂದು ಹೆಲಿಕಾಪ್ಟರ್ ಪತನಗೊಂಡಿದೆ.