ಮನೆ ರಾಜ್ಯ ‘ಪಾಕಿಸ್ತಾನ ಖಾಲಿ ಡಬ್ಬಾ’, ಬೇಕಾದರೆ ನಾನು ಸೂಸೈಡ್ ಮಿಷನ್‌ಗೆ ಸಿದ್ಧ : ಸಚಿವ ಜಮೀರ್ ಅಹ್ಮದ್...

‘ಪಾಕಿಸ್ತಾನ ಖಾಲಿ ಡಬ್ಬಾ’, ಬೇಕಾದರೆ ನಾನು ಸೂಸೈಡ್ ಮಿಷನ್‌ಗೆ ಸಿದ್ಧ : ಸಚಿವ ಜಮೀರ್ ಅಹ್ಮದ್ ಖಾನ್!

0

ಕಲಬುರಗಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದು ಈಗಾಗಲೇ ಭಾರತ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ಮೂಲಕ ತಿರುಗೇಟು ನೀಡಿದೆ. ಅಲ್ಲದೆ ಈಗಾಗಲೇ ನೂರಕ್ಕೂ ಹೆಚ್ಚು ಉಗ್ರರು ಸಾವನಪ್ಪಿದ್ದು ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಸಹ ಆಪರೇಷನ್ ಸಿಂಧೂರ ದಾಳಿಯಲ್ಲಿ ಭಾರತೀಯ ಸೇನೆ ಹತ್ಯೆಗೈದಿದೆ. ಪಾಕಿಸ್ತಾನ ಒಂದು ಖಾಲಿ ಡಬ್ಬಾ ಇದ್ದಂತೆ. ಪಾಕಿಸ್ತಾನ ಒಂದು ಠುಸ್ ಪಟಾಕಿಯಂತಿದೆ. ಇನ್ನು ನರೇಂದ್ರ ಮೋದಿ ಹೇಳಿದರೆ ಪಾಕಿಸ್ತಾನಕ್ಕೆ ಸುಯಿಸೈಡ್ ಬಾಂಬ್ ಹಾಕೊಂಡು ಹೋಗಲು ಸಿದ್ದ ಎಂದು ಸಚಿವ ಜಮೀರ್ ಅಹ್ಮದ್ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಯಶಸ್ವಿಯಾಗಲಿ ಎಂದು ಶುಕ್ರವಾರ ನಾವು ಪ್ರಾರ್ಥನೆ ಮಾಡಿದ್ದೇವೆ. ಪಾಕಿಸ್ತಾನ ಬಳಿ ಏನೇನೂ ಇಲ್ಲ, ಕೇಂದ್ರ ಸರ್ಕಾರ ಉತ್ತಮ ನಿಧಾರ ಕೈಗೊಂಡಿದೆ ಎಂದರು.

ನಾವು ಮನಸ್ಸು ಮಾಡಿದರೆ ಎರಡೇ ದಿನಕ್ಕೆ ಪಾಕಿಸ್ತಾನ ನಿರ್ನಾಮ ಮಾಡಬಹುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಪ್ರಧಾನಮಂತ್ರಿ ಹೇಳಿದರೆ ನಾನು ಸೂಸೈಡ್ ಬಾಂಬ್ ಹಾಕಿಕೊಂಡು ಪಾಕಿಸ್ತಾನಕ್ಕೆ ಹೋಗಲು ಸಿದ್ಧ. ಪಾಕಿಸ್ತಾನ ಒಂದು ಖಾಲಿ ಡಬ್ಬಾ ಇದ್ದಂತೆ. ಪಾಕಿಸ್ತಾನ ಒಂದು ಠುಸ್ ಪಟಾಕಿಯಂತಿದೆ. ನಮ್ಮ ದೇಶಕ್ಕಾಗಿ ನಾನು ಏನು ಮಾಡಲು ಸಹ ಸಿದ್ಧ ಎಂದು ಹೇಳಿದರು.