ಹಸ್ತ ನಕ್ಷತ್ರದಲ್ಲಿ ಪುಷ್ಪವತಿಯಾದವಳು ಒಳ್ಳೆಯ ಚಾರಿತ್ಯವಂತಳೂ, ಧನ ಧನ್ಯ ಪುತ್ರ ಸಂಪತ್ತನ್ನು ಹೊಂದಿದಾಕೆಯು, ದಾನ ಧರ್ಮ ಪರೋಪಕಾರ ಕಾರ್ಯದಲ್ಲಿ ಮನಸ್ಸುಳಾಕೆಯು, ಧೈರ್ಯವಂತಳೂ ಸಂತಾನೋತ್ಯೋಗಿಯೂ ಆಗುತ್ತಾಳೆ. ಸಂತೃಪ್ತಿ ಜೀವನಕ್ಕೆ ವಿಶೇಷ ಸಂಬಂಧಿಸಿದವಳು.
ಚಿತ್ತಾ ನಕ್ಷತ್ರ ಪತಿಯಿಂದ ಸಂತೃಪ್ತಿ ಜೀವನ ಸಾಗಿಸುವವಳು, ಪತಿಭಕ್ತಿ ಪಾರಾಯಣಳೂ ಆಗುತ್ತಾಳೆ. ಪತಿಯ ಉದ್ಯೋಗದಲ್ಲಿ ಸಹಾಯಕಳೂ,ನಿರ್ಣಾಯಕಳೂ ಆಗುತ್ತಾಳೆ, ಬುದ್ಧಿವಂತೆಯಾದ ಈಕೆ ದಾನ ಧರ್ಮ ಪರೋಪಕಾರ ಬುದ್ಧಿಯಲ್ಲಿಯೂ ನಿರಂತಳು ಈಕೆ ಆರೋಗ್ಯ ಭಾಗ್ಯ ಬುದ್ಧಿ. ಮತ್ತೆಯುಳ್ಳ ಮಕ್ಕಳನ್ನು ಹೊಂದುವಾಕೆಯು.
ಸ್ವಾತಿ ನಕ್ಷತ್ರ ಈ ನಕ್ಷತ್ರದಲ್ಲಿ ಋತುಮತಿಯಾದವಳು ತನ್ನ ಹುಟ್ಟಿದ ಮನೆಗೆ ಕೊಟ್ಟ ಮನೆಗೂ ಕೀರ್ತಿಯನ್ನು ತರುವಾಕೆಯು. ಜ್ಞಾನವಂತಳು, ಗುರುಹಿರಿಯಲಿ ಅದರಾಭಿಮಾನವುಳ್ಳವಳು, ಪತಿಯ ನೆರಳಲ್ಲಿ ಸದಾಕಾಲ ಇದ್ದು ಸುಖಜೀವನ ನಡೆಸುವವಳೂ ಆಗುತ್ತಾಳೆ .ಪುತ್ರವತಿ ಹಾಗೂ ಪತಿವ್ರತೆಯಾಗಿ ಇರುವಳು.
ವಿಶಾಖ ನಕ್ಷತ್ರ ಪತಿಗೆ ಕಷ್ಟ ನಷ್ಟಗಳುನ್ನುಂಟು ಮಾಡುವವಳೂ, ಆಸೆ ಬುರುಕಳೂ ನೆರೆಹರೆಯವರಲ್ಲಿ ಬಂಧು ಬಳಗದಲ್ಲಿರುವಲ್ಲಿ ಅಸೂಯೆಯುಳ್ಳಾಕೆಯು ಪುತ್ರ ಹೀನಳು ಸದಾ, ಕೋಪಿಷ್ಟಳಾಗಿ ಕುಟುಂಬದ ವಾತಾವರಣವನ್ನು ಕಲಿಸಿತಗೊಳಿಸುವವಳೂ. ಆಗುತ್ತಾಳೆ.
*ಅನುರಾಧ ನಕ್ಷತ್ರ ಪುಷ್ಪವತಿ ಯಾದವಳು ಸುಪುತ್ರರನ್ನು ಹೆತ್ತು ಗಂಡನ ಮನೆಗೆ ಸುಖ ಸಮೃದ್ಧಿಯನ್ನು ತಂದುಕೊಡುವಾಕೆಯು ಸಮಾಧಾನ ಚಿತ್ತಳಾದ ಈಕೆಯಿಂದ ಪತಿಗೆ ಉತ್ಸಾಹ ಪ್ರೇಮ ಸಂತೃಪ್ತಿ ಜೀವನ ಒದಗುವುದು. ಸೌಭಾಗ್ಯವತಿಯಾಗಿ ಪತಿಗೆ ಅನುಕೊಲೆಯಾದ ಸತಿಯಾಗಿದ್ದು ಅತ್ತೆ ಮಾವಂದಿರ ಗೌರವಕ್ಕೆ ಪಾತ್ರಳಾಗುವುದು.
ಜೇಷ್ಠ ನಕ್ಷತ್ರ ದಲ್ಲಿ ಪುಷ್ಪವತಿಯಾದವಳು ಪತಿಗೆ ಅನಿಷ್ಟ ಬಯಸುವವಳು ಶೀಘ್ರ ಕೋಪವುಳ್ಳಾಕೆಯು ಬಂಧು ಬಳಗದವರನ್ನು ಆನಾದರಿಂದ ನೋಡುವಳು, ದಾರಿದ್ರಳು, ಸೋಮಾರಿಯಾಗಿರುವವಳು ಆಗಿದ್ದು ಅನಿಷ್ಟ ಸಂತಾನವುಳ್ಳವಳೂ ಆಗುತ್ತಾಳೆ.
ಮೂಲ ನಕ್ಷತ್ರದಲ್ಲಿ ಪುಷ್ಪತ್ತಿಯಾದವರು ಸಕಲ ಸುಖ ಸಂಪದಭಿವೃತ್ತಿಯನ್ನು ಕಾಣುವಳು ಸದ್ಗುಣಿಯಾದ ಮಕ್ಕಳನ್ನು. ಅನುಕೂಲಕರವಾಗಿರುವ ಪತಿಯನ್ನು ಹೊಂದುವಳು. ತನ್ನ ಕರ್ತವ್ಯದಲ್ಲಿ ನಿರಾತಾಳಾಗಿದ್ದು ಸದಾ ತನ್ನ ವಂಶದ ಕೀರ್ತಿಯನ್ನೇ ಆಶಿಸುವವಳೂ ಆಗುತ್ತಾಳೆ.