ಮನೆ ದೇವಸ್ಥಾನ ಪಾಂಚಜನ್ಯ ಕ್ಷೇತ್ರ ಶಂಖ

ಪಾಂಚಜನ್ಯ ಕ್ಷೇತ್ರ ಶಂಖ

0

ಬೆಂಗಳೂರು – ಚಿಕ್ಕಮಗಳೂರು ಹೆದ್ದಾರಿಯಲ್ಲಿ ಹಾಸನದಿಂದ 10 ಕಿ.ಮೀ. ದೂರದಲ್ಲಿರುವ ಅರೆಮಲೆನಾಡಿನ ಪುಟ್ಟ ಗ್ರಾಮ ಶಂಖ. ಪಾಂಚಜನ್ಯಪುರ ಎಂದೂ ಖ್ಯಾತವಾದ ಈ ಗ್ರಾಮದಲ್ಲಿರುವ ಪುಟ್ಟ ಗುಡ್ಡದ ಮೇಲೆ ನಾಲ್ಕು ಅಂಕಣದ ಪುಟ್ಟ ದೇವಾಲಯವಿದೆ. ಈ ದೇವಾಲಯದಲ್ಲಿ ಮುಖಮಂಟಪ, ಸುಖನಾಸಿ, ಗರ್ಭಗೃಹವಿದ್ದು, ಈ ದೇವಾಲಯ ಸುಮಾರು 900 ವರ್ಷಗಳಷ್ಟು ಪಾರಾತನವಾದದ್ದು ಎಂದು ತಿಳಿದುಬಂದಿದೆ.

ಗರ್ಭಗೃಹದಲ್ಲಿ 6 ಅಡಿ ಎತ್ತರದ ಹೊಯ್ಸಳ ಶೈಲಿಯ ಶ್ರೀ ಚನ್ನಕೇಶವಸ್ವಾಮಿಯ ಸುಂದರ ವಿಗ್ರಹವಿದೆ. ಕೇಶವ ತನ್ನ ಎರಡು ಕೈಗಳಲ್ಲಿ ಶಂಖ, ಚಕ್ರಗಳನ್ನೂ ಮುಂದಿನ ಎರಡು ಕೈಗಳಲ್ಲಿ ಗದೆ ಹಾಗೂ ಪದ್ಮವನ್ನೂ ಹಿಡಿದಿದ್ದಾನೆ.

ಹಿಂದಿರುವ ಪ್ರಭಾವಳಿಯಲ್ಲಿ ಸುಂದರ, ಮೋಹಕ ಕೆತ್ತನೆಗಳಿವೆ.

ಭಕ್ತರ ಬಯಕೆಗಳನ್ನು ಸದಾ ಈಡೇರಿಸುವ ಈ ಕೇಶವನ ಮಹಿಮೆಯ ಬಗ್ಗ ಹಲವಾರು ಕಥೆಗಳಿವೆ. ಬಹು ಶಿಥಿಲವಾಗಿದ್ದ ಈ ದೇವಾಲಯ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಶ್ರೀ ಚನ್ನಕೇಶವ ವೈಷ್ಣವ ಸೇವಾ ಸಮಿತಿ ರಚಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಧರ್ಮೋತ್ಥಾನ ಟ್ರಸ್ಟ್ ನೆರವಿನಿಂದ ದೇವಾಲಯಕ್ಕೆ ಕಾಯಕಲ್ಪ ನೀಡಿದ್ದಾರೆ.

ಈ ದೇವಾಲಯದ ಈಶಾನ್ಯ ಭಾಗದಲ್ಲಿ ಗುಹೆಯೊಂದಿದ್ದು, ಇಲ್ಲಿಂದ ಬೇಲೂರಿಗೆ ಹೋಗಲು ಸುರಂಗ ಮಾರ್ಗವಿದೆ ಎಂದೂ ಜನ ಹೇಳುತ್ತಾರೆ.

ದೇವಾಲಯಕ್ಕೆ ಹೊಯ್ಸಳರ ದೊರೆಗಳು ಅಪಾರವಾದ ನಗ, ನಾಣ್ಯ, ಪಂಚಲೋಹದ ವಿಗ್ರಹಗಳನ್ನು ನೀಡಿದ್ದಾರೆ. ಇಲ್ಲಿರುವ ತಟ್ಟೆ, ತಂಬಿಕೆ, ಹರಿವಾಣಗಳು ಪ್ರಾಚೀನತೆಯ ಸಂಕೇತವಾಗಿವೆ.

ಹಿಂದಿನ ಲೇಖನದೇವಸ್ಥಾನದ ಅಡುಗೆ ಮನೆಯಲ್ಲಿ ಅಗ್ನಿ ಅವಘಡ: ನಾಲ್ವರಿಗೆ ಗಾಯ
ಮುಂದಿನ ಲೇಖನಮೈಸೂರು: ಯುವತಿಯ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾದ ಫೇಸ್’ಬುಕ್ ಗೆಳೆಯ