ಪಾಂಡವಪುರ: ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಸ್ಕೂಟರ್ ಡಿಕ್ಕಿಯಲ್ಲಿರಿಸಿದ್ದ ₹ 5 ಲಕ್ಷ ನಗದನ್ನು ಕಳ್ಳರು ಕದ್ದೊಯ್ದಿರುವ ಘಟನೆ ಪಟ್ಟಣದ ಪ್ರಕಾಶ್ ಗ್ಯಾಸ್ ಏಜೆನ್ಸಿ ಅಂಗಡಿ ಬಳಿ ನಡೆದಿದೆ.
ಪಟ್ಟಣದ ಆಲೆಮನೆ ಬಲರಾಂ ಅವರ ಸಹೋದರ ಶಿವಕುಮಾರ್ ಅವರೇ ಹಣ ಕಳೆದಕೊಂಡವರು.
ಶಿವಕುಮಾರ್ ಅವರು ಇತ್ತೀಚಿಗೆ ಸೈಟ್ ಮಾರಾಟ ಹಣವನ್ನು ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ಜಮೆ ಮಾಡಿದ್ದರು. ಈಚೆಗೆ ಬ್ಯಾಂಕ್‌ಗೆ ತೆರಳಿದ್ದ ಶಿವಕುಮಾರ್ ₹ 10 ಲಕ್ಷ ಡ್ರಾ ಮಾಡಲು ಮುಂದಾಗಿದ್ದರು. ಆದರೆ ಬ್ಯಾಂಕಿನ ಸಿಬ್ಬಂದಿ ಗ್ರಾಹಕರ ದಟ್ಟಣೆ ಇದೆ ಎಂಬ ಕಾರಣ ಹೇಳಿದಾಗ ₹ 5 ಲಕ್ಷ ಡ್ರಾ ಮಾಡಿಕೊಂಡು ಟಿವಿಎಸ್ ಜುಪಿಟರ್ ಸ್ಕೂಟರ್ ಡಿಕ್ಕಿಯಲ್ಲಿ ಇರಿಸಿ ಪ್ರಕಾಶ್ ಗ್ಯಾಸ್ ಏಜೆನ್ಸಿ ಅಂಗಡಿ ಬಳಿಯ ಮಂಜುನಾಥ್ ಸ್ಟೋರ್‌ಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಕಳ್ಳರು ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.