ಹಿರಿಯರು V/s ಮಕ್ಕಳು :
ಮಕ್ಕಳ ಬಗ್ಗೆ ನಮಗಿರುವ ಸಲಹೆ ಮತ್ತು ಪ್ರೇಮ ಪ್ರೀತಿಗಳಿಂದಾಗಿ ನಮಗರಿವಿಲ್ಲದೇ ಸ್ವಲ್ಪ ಕಠಿಣವಾಗಿ ವ್ಯವಹರಿಸುವುದು ಅವರಿಗೆ ನೋಡುವಂತಹ ಮಾತುಗಳನ್ನು ಪ್ರಯೋಗಿಸ ಲಾಗುತ್ತದೆ. ಇದರಿಂದಾಗಿ ಸಂಬಂಧಗಳು ಹದಗೆಡುವುದು, ಕೊನೆಗೆ ಹೆತ್ತವರು ಜನರೆದರು ತಲೆ ಎತ್ತದೆ ಓಡಾಡುವ ಪರಿಸ್ಥಿತಿ ಏರ್ಪಡಬಹುದು ಈ ಕಾಲದ ಅಪ್ಪ-ಅಮ್ಮಂದಿರು ಮಕ್ಕಳೊಂದಿಗೆ ಮಾತನಾಡುವಾಗ ಅಳೆದು ಸುರಿದೂ ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ. ಅಗತ್ಯಬಿದ್ದರೆ ಅದಕ್ಕಾಗಿ ರಿಹರ್ಸಲ್ ಕೊಡಾ ಮಾಡಿಕೊಳ್ಳಬೇಕು ಈ ತಲೆಮಾರಿನ ಹೆತ್ತವರ ದುರಾದೃಷ್ಟ ವೇನೋ ಗೊತ್ತಿಲ್ಲ. ಇವರುಗಳು ಬಾಲ್ಯದಲ್ಲಿ ತಮ್ಮ ತಾಯಿ-ತಂದೆಯರೊಂದಿಗೆ ಮಾತನಾಡು ವಾಗ ಭಯ-ಭಕ್ತಿಯಿಂದ ಮಾತನಾಡುತ್ತಿದ್ದರು ಆದರೆ ಇಂದಿನ ತಾಯಿ-ತಂದೆಯರು ತಮ್ಮ ಮಕ್ಕಳೊಂದಿಗೆ ಭಯ ಸಂಕೋಚದಿಂದ ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ
ಸೈಕಲ್ ಕೊಡಿಸಬೇಕೆಂದು ಕೇಳಿದರೆ ತನ್ನ ತಂದೆ ಬೈಕ್ ಕೊಡಿಸಿದರೆಂದು ಒಬ್ಬ ಹುಡುಗ, ಡ್ಯಾಡಿ ವೆನ್ಸಿಲ್ ಕೊಡಿಸೆಂದು ಕೇಳಿದರೆ ‘ಜೇಬಲ್ಲಿ ಹತ್ತು ಪೈಸೆಯಿಲ್ಲ ಹೋಗೋ’ ಎಂದರೆಂದು ಮತ್ತೊಬ್ಬ ಹುಡುಗ, ತನ್ನನ್ನು ಕರೆದುಕೊಂಡು ಹೋಗದೆ, ನನಗಿಷ್ಟವಿಲ್ಲದ, ಅವರಿಗಿಷ್ಟವಾದ ಬಟ್ಟೆಗಳನ್ನು ಕೊಂಡುತಂದಿದ್ದಾರೆಂದು ಇನ್ನೊಬ್ಬ ಹುಡುಗ. ಈ ರೀತಿಯಾಗಿ ಪ್ರತಿ ವಿಷಯಕ್ಕೂ ಮಕ್ಕಳು ತಮ್ಮ ತಾಯಿ ತಂದೆಯರನ್ನೇ ‘ಟಾರ್ಗೆಟ್’ ಮಾಡಿ, ಸಮಾಜದಲ್ಲಿ ಅಪರಾಧಿಗಳಾಗಿ ನಿಲ್ಲಿಸುತ್ತಿದ್ದಾರೆ. ಅಂತಹ ವಿಷಯಾಧಾರಿತವಾಗಿ ಬರುವ ಕಥೆಗಳು, ಧಾರಾವಾಹಿಗಳು ಹಾಗೂ ಸಿನಿಮಾಗಳು ಕೂಡಾ ಬಾಕ್ಸಾಫಿಸಿನಲ್ಲಿ ಹಿಟ್ ಆಗುತ್ತಿವೆಯೆಂದರೆ ಸಂಬಂಧಗಳು ಹೇಗೆ ರೂಪ ಬದಲಾಯಿಸಿಕೊಳ್ಳುತ್ತಿವೆಯೋ ಗ್ರಹಿಸಬೇಕಾದ ಅಗತ್ಯವಿದೆ.
ಮಕ್ಕಳ ಈ ನಡವಳಿಕೆಗೆ ಯಾರು ಕಾರಣ? ಎಂಬ ಚರ್ಚೆಗಳು ಹಾಗೂ ವಾದ. ವಿವಾದಗಳಿಗಿಂತ ತಾಯಿ ತಂದೆಯರು ತಮ್ಮ ಪ್ರವರ್ತನೆಯಲ್ಲಿ ಸೂಕ್ತ ಬದಲಾವಣೆಗಳು ಹಾಗೂ ಭಾಷೆಯಲ್ಲೂ ಕೂಡಾ ಬದಲಾವಣೆ ಮಾಡಿಕೊಳ್ಳುವುದೊಳ್ಳೆಯದು ಮುಖ್ಯವಾಗಿ ಹಿರಿಯರು ಈ ಮುಂದೆ ವ್ಯವಹರಿಸಿದ ಪದತಿಗಳು ಸದ್ಯ ಪ್ರಸ್ತುತವಲ್ಲ. ಸಹಜವಾಗಿಯೇ ತಾಯಿ. ಹಿರಿಯರು ಪ್ರಯೋಗಿಸುವ ಪದತಿಗಳು ಈ ರೀತಿಯಾಗಿರುತ್ತವೆ. ಇವು ಅಭ್ಯಂತರ ವಾದವುಗಳೆಂದು ಮಾನಸಿಕ ತಜ್ಞರು ಭಾವಿಸುತ್ತಾರೆ.
★* ವ್ಯಂಗ್ಯವಾಗಿ ಮಾತನಾಡುವುದು.
★* ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದು.
★* ಪ್ರತಿಬಾರಿ ಕೋಪದಿಂದ ಮಾತನಾಡುವುದು, ನಡೆದುಕೊಳ್ಳುವುದು.
★* ಬೆದರಿಸುತ್ತಿರುವ ಹಾಗೆ ಹೇಳುವುದು.
★* ಜೋರಾಗಿ ಕಿರುಚಾಡುವುದು, ಹೊಡೆಯುವುದು, ಬೈಯ್ಯುವುದು
★* ಸಣ್ಣ-ಪುಟ್ಟ ವಿಷಯಗಳಿಗೆಲ್ಲಾ ಅನುಮಾನಪಡುವುದು.
★* ಮಕ್ಕಳೊಂದಿಗೆ ಮಾತನಾಡುವುದನ್ನು ಬಿಡುವುದು.
★* ಹಣವಿದ್ದರೂ ತೀರಾ ಅವಶ್ಯಕತೆಯೆನಿಸಿದರೂ ಕೊಡದಿರುವುದು.
★* ಕೈಗೆ ಕೊಟ್ಟ ಬಟ್ಟೆಗಳನ್ನು ಕೋಪದಿಂದ ಹರಿದುಹಾಕುವುದು.
★* ಮಕ್ಕಳಿಗಾಗಿ ಖರೀದಿಸಿದ ವಸ್ತುಗಳನ್ನು ಕೋಪದಿಂದ ಬೇರೊಬ್ಬರಿಗೆ ಕೊಟ್ಟು ಬಿಡುವುದು.
★* ಹೇಳಿದ್ದನ್ನೇ ಪದೇಪದೇ ಹೇಳುತ್ತಿರುವುದು.
★* ಯಾವಾಗ ನೋಡಿದರೂ “ಓಡ್ಕೊಳೋ ಓದೊಳೋ….” ಎನ್ನುವುದು.
★* ಕೋಪದಿಂದ ಮನೆ ಬಿಟ್ಟು ಹೋಗುವುದು.
★* ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುವುದು.
★* ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುವುದು
★* ಕಲ್ಪನೆಯ ಅಥವಾ ಊಹಾಪೋಹ ಕತೆಗಳನ್ನು ಹೇಳಿ ಬೆದರಿಸುವುದು.
★* ಇಲ್ಲ ಸಲ್ಲದ ಕೆಲಸಗಳನ್ನು ಮಾಡು ಎಂದೇಳುವುದು.
★* ಹೆಣ್ಣು ಮಕ್ಕಳಾಗಿದ್ದರೆ ಶೀಲವನ್ನು ಶಂಕಿಸುವುದು
★* ಮಾಡದ ತಪ್ಪನ್ನು ಮಾಡಿದ್ದೀಯೆಂದು ವಾದಿಸುವುದು.
★* ಬೇಕೆಂತಲೇ ವಿಮರ್ಶಿಸುವುದು ಲೈಂಗಿಕವಾಗಿ ಪೀಡಿಸುವುದು.
★* ಮನೆಯಲ್ಲಿ ಯಾರೂ ಮಾತನಾಡದಿರುವುದು.
★* ವ್ಯಂಗ್ಯವಾಗಿ ಇಟ್ಟು ಮಾತನಾಡುವುದು
★* ಎದುರುತ್ತರ ನೀಡಿದರೆ ಮನೆಯಿಂದ ಹೊರಟುಹೋಗೆನ್ನುವುದು.
★* ಮಕ್ಕಳು ಹೇಳಿದ್ದನ್ನು ಕೇಳದಿರುವುದು.
★* ಮಕ್ಕಳೊಂದಿಗೆ ಸಮಯ ಕಳೆಯದಿರುವಿಕೆ.
★* ಬೇರೆ ಮಕ್ಕಳನ್ನು ಪದೇ ಪದೇ ಹೊಗಳುವುದು.
★* ಅಳುತ್ತಾ ಕೂರುವುದು ದುರಾಭ್ಯಾಸಗಳಿಗೆ ಗುಲಾಮರಾಗುವುದು.
★* ತಾಯಿ-ತಂದೆಯರು ಮಕ್ಕಳ ಮುಂದೆಯೇ ಜಗಳವಾಡುವುದು.
……ಈ ರೀತಿಯಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಬಹುದು ತಿಳಿದೋ ತಿಳಿಯದೇಯೋ ಮಾಡುವ ಈ ಕೆಲಸಗಳು ಬಹಳಷ್ಟು ಕುಟುಂಬಗಳಲ್ಲಿ ಕಂಡುಬರುತ್ತವೆ. ಅವಿದ್ಯಾವಂತರೇ ಅಲ್ಲ. ವಿದ್ಯಾವಂತ ತಾಯಿ-ತಂದೆಯರು ಕೂಡಾ ಕೆಲವೊಮ್ಮೆ ಈ ರೀತಿಯಾಗಿ ಪ್ರವರ್ತಿಸಬಹುದು. ಯಾವ ಮಗುವೇ ಆದರೂ ಹುಟ್ಟಿದ ನಂತರ ತಾಯಿ-ತಂದೆಯರಿಂದ ಬುದಿ ಕಲಿಯುತ್ತಾರೆ. ತಂದೆ-ತಾಯಿಯರೇ ಹೀಗೆ ಪ್ರವರ್ತಿಸಿದರೆ ಮಕ್ಕಳ ನಡವಳಿಕೆಯಲ್ಲಿ ಎಂತಹ ಬದಲಾವಣೆ ಗಳಾಗುತ್ತವೆಯೋ ಸ್ವಲ್ಪ ನೋಡಿ.
★* ಅತಿಯಾಗಿ ಸುಳ್ಳುಗಳನ್ನು ಹೇಳುವುದು.
★* ಭಯಭಯದಿಂದ ಅಂಜುಬುರುಕರಂತಿರುವುದು.
★* ಸ್ವತಃ ಯಾವುದೇ ಕೆಲಸಗಳನ್ನು ಮಾಡಲಾಗದಿರುವುದು.
★* ಕೀಳರಿಮೆಗೊಳಗಾಗುವುದು ತನಗೇನೂ ಬರುವುದಿಲ್ಲ ಎಂದುಕೊಳ್ಳುವುದು.
★* ಹೊಸಬರೊಂದಿಗೆ ಮಾತನಾಡದಿರುವುದು, ಮಾತುಗಳಲ್ಲಿ ಬಿಕ್ಕಲು ಬರುವುದು.
★* ರಾತ್ರಿ ವೇಳೆಗಳಲ್ಲಿ ಹಾಸಿಗೆ ಒದ್ದೆ ಮಾಡುವುದು.
★* ತನ್ನ ಗುರಿಯೇನೆಂಬುದು ತನಗೇ ತಿಳಿಯದಿರುವುದು ಹೆತ್ತವರ ವಿರುದ ತಿರುಗಿ ಬೀಳುವುದು.
★* ಹಿಂಸಾತ್ಮಕ ಧೋರಣೆಯನ್ನು ಅಳವಡಿಸಿಕೊಳ್ಳುವುದು.
★* ಮನೆಯಲ್ಲಿನ ಕೋಪವನ್ನು ಹೊರಗಿನವರ ಮೇಲೆ ತೋರುವುದು.
★* ದುರಾಭ್ಯಾಸಗಳನ್ನು ಅಭ್ಯಾಸಮಾಡಿಕೊಳ್ಳುವುದು.
★* ಸಣ್ಣಪುಟ್ಟ ಕಳ್ಳತನಗಳನ್ನು ಮಾಡುವುದು.
★* ಪೇರೆಂಟ್ಸ್ ಫ್ರೆಂಡ್ಸ್ ಬಳಿ ಸಾಲ ಮಾಡುವುದು.
★* ಹಗೆ ತೀರಿಸಿಕೊಳ್ಳಬೇಕೆಂಬ ದ್ವೇಷವನ್ನು ಬೆಳೆಸಿಕೊಳ್ಳುವುದು.
★* ಕಾಲೇಜಿಗೆ ಚಕ್ಕರ್ ಹೊಡೆಯುವುದು ಅಥವಾ ಓದಿಗೆ ವಿರಾಮ ಹೇಳುವುದು.
★* ರಾತ್ರಿ ವೇಳೆಗಳಲ್ಲಿ ಏಳಂಬವಾಗಿ ಮನೆಗೆ ಬರುವುದು.
★* ಗಂಟೆಗಟ್ಟಲೇ ಫೋನ್ ಗಳಲ್ಲಿ ಮಾತನಾಡುವುದು
★* ಎದುರುತ್ತರಗಳನ್ನು ನೀಡುವುದು.
★* ಮನೆಬಿಟ್ಟು ಓಡಿಹೋಗುವುದು
★* ಪ್ರೀತಿ, ಪ್ರೇಮಗಳಿಗಾಗಿ ಹುಡುಗಿಯರ ಹಿಂದೆ ಅಲೆದಾಡುವುದು.
★* ಅಭಿಮಾನಿಸುವವರೊಂದಿಗೆ ಹಿರಿಯರಿಗೆ ಇಷ್ಟವಿಲ್ಲದಿದ್ದರೂ ಓಡಿಹೋಗುವುದು.
★* ಹಠಮಾರಿಯಾಗಿ ಪ್ರವರ್ತಿಸುವುದು ಖಿನ್ನತೆಗೊಳಗಾಗುವುದು
★* ಯಾವುದೇ ಕೆಲಸ ಕಾರ್ಯಗಳನ್ನು ಶ್ರದೆಯಿಟ್ಟು ಮಾಡದಿರುವುದು.
★* ನನಗೇನೂ ಬರುವುದಿಲ್ಲ ಎಂದುಕೊಳ್ಳುತ್ತಾ ಕಾಲ ದೂಡುವುದು
★* ಗಂಟೆಗಟ್ಟಲೇ ಟಿ.ವಿ ಮುಂದೆ ಕುಳಿತುಕೊಳ್ಳುವುದು
★* ಏಕಾಂಗಿಯಾಗಿರಬೇಕೆಂದು ಬಯಸುವುದು, ಆತ್ಮಹತ್ಯೆ ಮಾಡಿಕೊಳ್ಳ ಬೇಕೆಂದೆನಿಸು ವುದು
★* ತನ್ನ ನೋವು, ಬಾಧೆಗಳನ್ನು ಕೇಳುವವರಿಗೆ ಗುಲಾಮರಾಗಿಬಿಡುವುದು.
★* ಯಾವಾಗಲೂ ಅಳುತ್ತಿರುವುದು, ಒಳ್ಳೆಯ ಉಡುಪುಗಳಿದ್ದರೂ ಧರಿಸದಿರುವುದು
★* ತನ್ನ ಕರ್ಮ, ಹಣೆಬರಹವೆಂದು ನಿಂದಿಸುತ್ತ ಕುಳಿತುಕೊಳ್ಳುವುದು
★* ತನ್ನನ್ನು ತಾನು ಬ್ಲೇಡಿನಿಂದ ಕುಯ್ದುಕೊಳ್ಳುವುದು
★* ಊಟ, ತಿಂಡಿ ಮಾಡುವುದನ್ನು ಬಿಟ್ಟುಬಿಡುವುದು
★* ಸ್ವಾಭಿಮಾನ ಇಲ್ಲದಿರುವುದು, ಆತ್ಮವಿಶ್ವಾಸದ ಕೊರತೆ
★* ಕಮ್ಯೂನಿಕೇಷನ್ಸ್‌ನಲ್ಲಿ ವ್ಯತ್ಯಾಸಗಳು
★* ಅಸ್ಸೆರ್ಟಿಲ್ಲಾಗಿ ಪ್ರವರ್ತಿಸದಿರುವುದು
★* ಹೆತ್ತವರಿಗೆ ಇಷ್ಟವಾಗದವರೊಂದಿಗೆ ಕೈಜೋಡಿಸುವುದು.
★* ಹೆತ್ತವರನ್ನು ಆಘಾತಕ್ಕೊಳಪಡಿಸುವ ರೀತಿಯಲ್ಲಿ ಪ್ರವರ್ತಿಸುವುದು.
★* ದಿನೇದಿನೇ ದೈಹಿಕವಾಗಿ ಕುಗ್ಗಿ ಹೋಗುವುದು
★* ಡ್ರಗ್ಸ್‌ನ್ನು ಅಭ್ಯಾಸ ಮಾಡಿಕೊಳ್ಳುವುದು.
★* ಒಳ್ಳೆಯ ಪೇರೆಂಟ್ಸ್ ಇರುವ ಸ್ನೇಹಿತರೊಂದಿಗೆ ಅಸೂಯೆ, ಈರ್ಷ್ಯ
★* ಪ್ರತಿಯೊಂದಕ್ಕೂ ಆತಂಕಪಡುವುದು.
★* ಬದುಕಿಗೊಂದು ಗುರಿಯೆಂಬುದೇ ಇಲ್ಲದಿರುವುದು
★* ಎಲ್ಲದಕ್ಕೂ ತಾಯಿ, ತಂದೆಯರ ಮೇಲೆ ಅವಲಂಬಿಸುವುದು
★* ಕ್ರಿಮಿನಲ್ ಆಲೋಚನೆಗಳು ಇತ್ಯಾದಿ
ದುರಾಭ್ಯಾಸಗಳಿಂದ ದೂರ….
ಇತ್ತೀಚಿನ ದಿನಗಳಲ್ಲಿ ಕೆಲವು ತಾಯಿ-ತಂದೆಯರ ಪ್ರವರ್ತನೆ ಗಾಬರಿ ಹುಟ್ಟಿಸುತ್ತದೆ ಮಕ್ಕಳ ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಹೊಡೆದಾಡುವುದು ತಂದೆಯಾದವನು ಪರಸ್ತ್ರೀಯೊಂದಿಗೆ ಓಡಾಡುವುದು ಕುಡಿದು ಬಂದು ಮನೆಯಲ್ಲಿ ಹೆಣ್ಣು ಮಕ್ಕಳನ್ನು ಹೊಡೆಯುವುದು, ಬೈಯುವುದು ನಡೆಯುತ್ತಿರುತ್ತವೆ ಅಂತಹವರನ್ನು ಸರಿಪಡಿಸಬೇಕೆಂದು ಮಕ್ಕಳು ನಿಶ್ಚಯಿಸುತ್ತಾರೆ ಅಂದರೆ ಇಲ್ಲಿ ಆಚಾರವೆಂಬುದು ಮರೆಯಾಗಿದೆ
ಇತ್ತೀಚೆಗೆ ಒಬ್ಬ ಹುಡುಗ ನನ್ನನ್ನು ಭೇಟಿ ಮಾಡಿ ”ನಮ್ಮಪ್ಪ ಕುಡಿತಕ್ಕೆ ಗುಲಾಮರಾಗಿ ಪ್ರತಿದಿನ ನಮಗೆ ನರಕವನ್ನು ತೋರಿಸುತ್ತಿದ್ದಾರೆ ಪ್ರತಿಯೊಬ್ಬರಿಗೂ ತನ್ನ ಬೈಗುಳದಿಂದ ಬೇಸರ ಮೂಡಿಸುತ್ತಾರೆ ಮನೆಯಲ್ಲಿ ನಾವೆಲ್ಲರೂ ಅದೆಷ್ಟೇ ಒಳ್ಳೆಯವರಾಗಿ ವ್ಯವಹರಿಸಿದರೂ ನಮ್ಮಪ್ಪ ತನ್ನ ಪ್ರತಾಪವನ್ನು ಹೆಚ್ಚಿಸುತ್ತಿದ್ದಾನೆಯೇ ಹೊರತು, ಕಡಿಮೆ ಮಾಡುತ್ತಿಲ್ಲ ದಯವಿಟ್ಟು ನಮ್ಮ ತಂದೆಯ ಕೈಯಲ್ಲಿ ನಾನು ಕುಡಿತವನ್ನು ನಿಲ್ಲಿಸುವುದು ಹೇಗೆ? ಅವರ ಮಾನಸಿಕ ಸ್ಥಿತಿಯನ್ನು ನಿಯಂತ್ರಣಕ್ಕೆ ತರಬಲ್ಲನೇ? ನಾವು ಮಧ್ಯಮ ವರ್ಗದವರು, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಕೌನ್ಸೆಲಿಂಗ್ ಕೊಡಿಸುವ ಸಾಮರ್ಥ್ಯ ನನಗಿಲ್ಲ. ಇಡೀ ದೇಶವನ್ನೇ ಕಾಡಿಸುತ್ತಿರುವ ಈ ಸಮಸ್ಯೆ ಕುರಿತಂತೆ ಏನಾದರೂ ಮಾಡಲು ಸಾಧ್ಯವೇ ಅಂಕಲ್ ?” ಎಂದು ಕೇಳಿದ. ಅದಕ್ಕೆ ನಾನು ಈ ರೀತಿ ಸಮಾಧಾನ ಹೇಳಿದೆ.
ನಿಮ್ಮ ತಂದೆ ಕುಡಿತ ನಿಲ್ಲಿಸಬೇಕೆಂದರೆ ನಿಲ್ಲಿಸಬಹುದು ನಾನು ಮಾಡುವುದಿಲ್ಲ, ಮಾಡಲಾಗುವುದಿಲ್ಲ ಎನ್ನುವವರಿಗೆ ಈಗ ಸೈಕಿಯಾಟ್ರಿಯಲ್ಲಿ ಬಹಳಷ್ಟು ಔಷಧಿಗಳು ಬಂದಿವೆ. ನಾನು ಮೆಡಿಕಲ್ ಡಾಕ್ಟರ್ ಅಲ್ಲವಾದ್ದರಿಂದ ಅವುಗಳನ್ನಿಲ್ಲಿ ಬರೆಯಲಾರೆ. ವೈದ್ಯರು ಕೂಡಾ ಪತ್ರಿಕೆಗಳಲ್ಲಿ ಬರೆಯುವುದಿಲ್ಲವೆಂದರೆ ನೀವು ಯಾವುದಾದರೂ ‘ಡ್ರಗ್ ಅಡಿಕ್ಷನ್’ ಸೆಂಟರ್‌ಗೆ ಕರೆದೊಯ್ದಿರಿ ದೊಡ್ಡ ದೊಡ್ಡ ನಗರಗಳಲ್ಲಿ ಆಲ್ಕೋಹಾಲಿಕ್ ಅನಾನಿಮಸ್ ಸಂಸ್ಥೆಗಳಿರುತ್ತವೆ. ಅವರು ಕೂಡಾ ಕುಡಿತವನ್ನು ನಿಲ್ಲಿಸಬಹುದು
ಕುಡಿತವನ್ನು ನಿಲ್ಲಿಸುವುದು ಸಾಧ್ಯ.
“……..ಈ ರೀತಿ ಬರೆಯುತ್ತಾ ಹೋದರೆ ಪುಟಗಳು ಸಾಕಾಗಲಾರವೇನೋ ಎಲ್ಲಾ ಮಕ್ಕಳೂ ಇದೇ ರೀತಿಯಾಗಿ ಆಗುತ್ತಾರೆಂದಲ್ಲ. ಇವುಗಳ ಪೈಕಿ ಒಂದೆರಡು ಲಕ್ಷಣಗಳಿರಬಹುದು. ಅಥವಾ ಇಲ್ಲದಿರಲೂಬಹುದು. ಆದರೆ ಪ್ರಸ್ತುತ ಸಮಾಜ. ಸಿನಿಮಾಗಳು, ಅದೆಷ್ಟೇ ಒಳ್ಳೆಯ ಮಕ್ಕಳನ್ನಾದರೂ ವಿಭಿನ್ನವಾಗಿ ಆಲೋಚಿಸುವಂತೆ ಮಾಡುತ್ತದೆ. ಕಣ್ಣಿನ ರೆಪ್ಪೆಯಂತೆ ಬೆಳೆಸಿದ ಮಗಳು, ತನಗಿಷ್ಟವಾದ ಹುಡುಗನನ್ನು ಹೇಳದೆ ಕೇಳದೆ ಮದುವೆ ಮಾಡಿಕೊಂಡು, ಆನಂತರ ತಾಯಿ-ತಂದೆಯರಿಂದ ತಮಗೆ ರಕ್ಷಣೆಬೇಕೆಂದು ಪೊಲೀಸರ ಆಶ್ರಯ ಪಡೆದವರಿದ್ದಾರೆ.
ನೀನೇಕೆ ಹಾಗೆ ಮಾಡಿದೆಯೆಂದು ಕೇಳಿದರೆ ಕಣ್ಣಿನ ರೆಪ್ಪೆಯ ಹಾಗೆ ನೋಡಿ ಕೊಂಡಿದ್ದ ರಿಂದ ಹೊರಗಿನ ಪ್ರಪಂಚ ಗೊತ್ತಾಗದ ಹಾಗೆ ಬೆಳೆದೆ. ಆದ್ದರಿಂದಲೇ ಈ ವಿಶಾಲ ಪ್ರಪಂಚ ದೊಳಕ್ಕೆ ಓಡಿಬಂದುಬಿಟ್ಟೆ…” ಎನ್ನುವ ಪ್ರಬುದ ಹೆಣ್ಣು ಮಕ್ಕಳಿದ್ದಾರೆ. ಆದ್ದರಿಂದಲೇ ಮಕ್ಕ ಳೊಂದಿಗೆ ಹೆತ್ತವರು ಸ್ವಲ್ಪ ಜಾಗ್ರತೆ ವಹಿಸಬೇಕಾದ ಕಾಲಬಂದಿದೆ.