ಭಾರತೀಯ ಪುರಾಣದಲ್ಲಿ ಪಾರಿಜಾತ ದೇವಲೋಕದ ಪುಷ್ಪ ಎಂದೇ ಪ್ರಸಿದ್ಧಿ ಹೊಂದಿದೆ. ಇಂದ್ರನ ಲಾಂಛನ ವಾಗಿದ್ದ ಇದು ರುಕ್ಕಿಣಿ, ಸತ್ಯಭಾಮೆಯರ ಕಲಹಕ್ಕೆ ಕಾರಣವಾಗಿತ್ತಂತೆ. ಅವರಿಬ್ಬರ ಜಗಳ ಬಗೆಹರಿಸಲು ಕೃಷ್ಣ ಸುರಲೋಕದಿಂದ ಕಾದಾಡಿ ಈ ಮರವನ್ನು ತಂದು ನೆಟ್ಟನಂತೆ.
ಒಬ್ಬರ ಅಂಗಳದಲ್ಲಿ ನೆಟ್ಟ ಮರವು ಮತ್ತೊಬ್ಬರ ಅಂಗಳಕ್ಕೆ ಹೂವನ್ನು ಸುರಿಸು ತಿತ್ತಂತೆ. ವಿಷ್ಣು ಪುರಾಣದ ಪ್ರಕಾರ ರಾಜಪುತ್ರಿಯೊಬ್ಬಳ ಹೆಸರು ಪಾರಿಜಾತಕ, ಸೂರ್ಯ ದೇವನೊಡನೆ ಪ್ರೀತಿಸಿ ಮದುವೆಯಾದ ಆಕೆಯನ್ನು ಸೂರ್ಯ ನಂತರ ತಿರಸ್ಕರಿಸಿದನಂತೆ. ಪಾರಿಜಾತಕಳು ವಿರಹದಿಂದ ಅಗ್ನಿಗೆ ಆತ್ಮಸಮರ್ಪಣೆ ಮಾಡಿಕೊಂಡಳಂತೆ. ಆ ಬೂದಿಯಿಂದ ಹುಟ್ಟಿದ ಮರವೆ ಪಾರಿಜಾತವಂತೆ ದುರಂತದ ಕಥೆಯುಳ್ಳ ಈ ಮರವೂ ದುಃಖತಪ್ತ ಮರವೆಂದೇ ಹೆಸರಾಯಿತು. ರಾತ್ರಿ ಹೊತ್ತು ಸುವಾಸನೆ ಬೀರುವ ಕ್ಷೀರವರ್ಣದ ದಳಗಳುಳ್ಳ ಹೂವಿನಲ್ಲಿ ಕೇಸರಿ ವರ್ಣದ ತೊಟ್ಟು ಇರುವ ಈ ಹೂವು ಅತ್ಯಂತ ಕೋಮಲ ಸ್ವಲ್ಪ ಸೋಕಿದರೂ ನಲಗುವ ಈ ಹೂ ದೂರಕ್ಕೂ ಪರಿಮಳ ಹರಡುತ್ತದೆ.
ಸುರಲೋಕದ ಮರ ಪಾರಿಜಾತವು ಜಾನಪದ, ಪುರಾಣ ಪ್ರಸಿದ್ದ ಮರ, ಹಿಮಾಲಯ ತಪ್ಪಲಿನ ಕಾಡು ಮರ, ನೆಟ್ಟು ಬೆಳೆಸುವ ನಾಡು ಮರ, ಅಂದದ, ಸುಗಂಧದ ಹೂ ಸುಕೋಮಲ.
ಗ್ರೀಕ್ ಭಾಷೆಯಲ್ಲಿ ನಿಕ್ಸ್ ಎಂದರೆ ರಾತ್ರಿ ಮತ್ತು ಆ್ಯಂತೋಸ್ ಎಂದರೆ ಹೂ ಲ್ಯಾಟಿನ್ ಭಾಷೆಯಲ್ಲಿ ಆರ್ಬಾರ್ – ಟ್ರಸ್ಟಿನ್ ಎಂದರೆ ‘ಸ್ಯಾಡ್ ಟ್ರಿ’, ರಾತ್ರಿ ಅರಳಿ ಬೆಳಗ್ಗೆ ಉದುರಿ ನೆಲದ ಮೇಲೆ ಬೀಳುವ ಕಾರಣದಿಂದಾಗಿ ಈ uಹೆಸರು ಬಂದಿರಬಹುದು ಪ್ರಾಚೀನ ಶಸ್ತ್ರವೈದ್ಯ ಸುಶ್ರುತನು ಪಾರಿಜಾತದ ದೊರಗೆಲೆಯನ್ನು ಶಸ್ತ್ರಚಿಕಿತ್ಸೆಗೆ ಬಳಸುತ್ತಿದ್ದನೆಂದು ತಿಳಿದುಬರುತ್ತದೆ. ವೈದ್ಯ ಸುಶ್ರುತನ ಪ್ರಕಾರ ಪ್ರಧಾನಶಸ್ತ್ರದ ಅಭಾವದಲ್ಲಿ ಅದಕ್ಕೆ ಬದಲಾಗಿ ಬಲಿತ ಎಲೆಯನ್ನು ಉಪಶಸ್ತ್ರವಾಗಿ ಬಳಸಬಹುದು.
ಉಪಯುಕ್ತ ಭಾಗಗಳು
ತೊಗಟೆ, ಎಲೆ, ಹೂವು ಮತ್ತು ಬೀಜ.
ಔಷಧೀಯ ಗುಣಗಳು
★ ಪಾರಿಜಾತ ಎಲೆಯು ಪಿತ್ತಶಾಮಕ ಮತ್ತು ಕಫಹರವಾಗಿದೆ.
★ಸಂಧಿವಾತದಿಂದ ಬಳಲುವವರು ಪಾರಿಜಾತದ ಎಲೆಗಳ ಕಷಾಯ ಕುಡಿಯಬೇಕು.
★ಮೂತ್ರಕಾರಕ : ಪಾರಿಜಾತ ಎಲೆಯ ರಸದ ಸೇವನೆ ಮೂತ್ರಸ್ರಾವವನ್ನು ಹೆಚ್ಚಿಸುವು ದಲ್ಲದೇ ಭೇದಿಯನ್ನುಂಟುಮಾಡುತ್ತದೆ.
★ ವಿಷಮಶೀತಜ್ವರದಲ್ಲಿ ಪಾರಿಜಾತ ತೊಗಟೆಯ ಕಷಾಯ ಇಲ್ಲವೇ ಎಲೆಯ ಕಷಾಯ ಉತ್ತಮವಾದುದು. ಮಲೇರಿಯಾದಲ್ಲಿಯೂ ಇದು ಅತ್ಯುತ್ತಮ ಔಷಧಿ.
★ತಲೆಹೊಟ್ಟು : ತಲೆಹೊಟ್ಟಿನಿಂದ ಬಳಲುವವರು ತೊಗಟೆಯ ಕಷಾಯ ತಯಾರಿಸಿ ತಲೆತೊಳೆದುಕೊಳ್ಳಬೇಕು
.
ಟೆಯ ಕಷಾಯದಿಂದ ಗಾಯಗಳನ್ನು ತೊಳೆಯುವುದರಿಂದ ಬೇಗನೆ ವಾಸಿಯಾಗುತ್ತದೆ. ಇದು ಕ್ರಿಮಿನಾಶಕವಾಗಿ ಕೆಲಸ ಮಾಡುತ್ತದೆ.
ಜಂತುಹುಳು : ಮಕ್ಕಳಿಗೆ ಹೊಟ್ಟೆಯಲ್ಲಿ ಜಂತು ನಿವಾರಣೆಗೆ ಪಾರಿಜಾತ ಎಲೆಯ ರಸ ಮತ್ತು ಒಂದು ಚಿಟಿಕೆ ಹಿಂಗು ಬೆರೆಸಿ ಕುಡಿಸಬೇಕು.
★ ಯಕೃತ್ತಿನ (ಲಿವರ್) ಉರಿಯೂತದಿಂದ ಬಳಲುವವರಿಗೆ ಎಲೆಯ ರಸ ಸೇವನೆ ಉತ್ಪನ್ನ ಫಲಿತಾಂಶ ನೀಡುತ್ತದೆ.
★ ಕೆಮ್ಮು ಮತ್ತು ದಮ್ಮಿನಿಂದ ಬಳಲುವವರು ಪಾರಿಜಾತದ ತೊಗಟೆಯ ಪುಡಿಯನ್ನು ವೀಳ್ಯದೆಲೆಯಲ್ಲಿಟ್ಟು ತಿನ್ನಬೇಕು.
★ ತಲೆಯಲ್ಲಿ ನಾಣ್ಯದಗಲ ಕೂದಲು ಉದುರುತ್ತಿದ್ದಲ್ಲಿ ಪಾರಿಜಾತ ಬೀಜದ ತಿರುಳನ್ನು ತೇಯ್ದು ಲೇಪಿಸಬೇಕು.
★ ದೀರ್ಘಕಾಲದ ಜ್ವರ ಬಾಧಿಸುತ್ತಿದ್ದಲ್ಲಿ ಪಾರಿಜಾತದ ಎಲೆಯ ರಸ ಮತ್ತು ಶುಂಠಿ ರಸ ಬೆರೆಸಿ ಸೇವನೆ ಮಾಡಬೇಕು.
★ ಬಾಯಿಹುಣ್ಣಿನಿಂದ ಬಳಲುವವರು ತೊಗಟೆಯನ್ನು ಹಾಲಿನಲ್ಲಿ ತೇಯ್ದು ಲೇಪಿಸಬೇಕು.
•★ರಕ್ತಹೀನತೆಯಿಂದ ಬಳಲುವವರು ಎಲೆಯ ರಸವನ್ನು ಲೋಹಭಸ್ಮದೊಂದಿಗೆ ಸೇವಿಸಬೇಕು.
ಇತರೆ
ಪಾರಿಜಾತದಿಂದ ಸುಗಂಧ ದ್ರವ್ಯವನ್ನು ತಯಾರಿಸುವರು. ಕೇಸರಿ ಬಣ್ಣದ ಹೂ ತೊಟ್ಟಿನಲ್ಲಿ ಇಕ್ಷೆಂಥಿನ್ ಎಂಬ ಬಣ್ಣ ಕೊಡುವ ಅಂಶ ಇರುತ್ತದೆ. ಇದು ಕೇಸರಿ ಬಣ್ಣಕ್ಕೆ ಸಮನಾದುದು. ಹಿಂದಿನ ಕಾಲದಲ್ಲಿ ಬಟ್ಟೆಗೆ ಬಣ್ಣ ಹಾಕಲು ಇದನ್ನು ಬಳಸಲಾಗುತ್ತಿತ್ತು. ಬೀಜದ ಬಿಳಿ ತಿರುಳಿನಿಂದ ಎಣ್ಣೆ ತೆಗೆಯುವರು. ಚರ್ಮ ಹದಗೊಳಿಸುವ ಕೈಗಾರಿಕೆಯಲ್ಲಿಯೂ ಪಾರಿಜಾತದ ತೊಗಟೆ ಉಪಯೋಗವಾಗುತ್ತದೆ.