ಮನೆ ಕಾನೂನು ಸಂತಾನ ಭಾಗ್ಯಕ್ಕಾಗಿ ಜೀವಾವಧಿ ಸಜೆ ಪಡೆದ ಕೈದಿಗೆ 15 ದಿನ ಪರೋಲ್

ಸಂತಾನ ಭಾಗ್ಯಕ್ಕಾಗಿ ಜೀವಾವಧಿ ಸಜೆ ಪಡೆದ ಕೈದಿಗೆ 15 ದಿನ ಪರೋಲ್

0

ಜೋಧಪುರ(Jodhpura):  ಸಂತಾನ ಭಾಗ್ಯ ಹೊಂದಲಿ ಎಂಬ ಉದ್ದೇಶಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಯೊಬ್ಬನನ್ನು 15 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡಲು ರಾಜಸ್ಥಾನದ ಜೋಧಪುರ ಹೈಕೋರ್ಟ್ ಆದೇಶಿಸಿದೆ.

ಪತಿ ನಂದ್‌ಲಾಲ್ ಬಿಡುಗಡೆ ಮಾಡುವಂತೆ ಕೋರಿ ಪತ್ನಿ ರೇಖಾ, ‘ಸಂತಾನದ ಹಕ್ಕು’ ಪ್ರತಿಪಾದಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ದೋಷಿಯ ಬಂಧನವು ಆತನ ಪತ್ನಿಯ ಭಾವನಾತ್ಮಕ ಮತ್ತು ಲೈಂಗಿಕ ಬಯಕೆಗಳ ಮೇಲೆ ಪರಿಣಾಮ ಬೀರಬಾರದು ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ‘ಕೈದಿಯ ಪತ್ನಿ ಯಾವುದೇ ಅಪರಾಧ ಮಾಡದಿರುವಾಗ ಮಕ್ಕಳನ್ನು ಹೊಂದುವ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ. ಅಪರಾಧಿ ಅಥವಾ ಕೈದಿ ತನ್ನ ಪತ್ನಿಯೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಲು ನಿರಾಕರಿಸುವುದು ಅವನ ಹೆಂಡತಿಯ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಹೇಳಿ ಪರೋಲ್ ಜಾರಿ ಮಾಡಿದೆ.