.. ‘ಪಾರ್ಶ್ವೆ ‘ದರೆ ಪಕ್ಕ ‘ಏಕಪಾದ ಸರ್ವಾಂಗಸನ’ದಲ್ಲಿ ಕೆಳಗಿಟ್ಟ ಕಾಲು ತಲೆಯ ಹಿಂಬದಿಯಲ್ಲಿದ್ದರೆ, ಇದರಲ್ಲಿ ಅದು ಮುಂಡಭಾಗದ ಒಂದು ಪಕ್ಕದಲ್ಲಿದ್ದು, ಅದಕ್ಕೆ ಸಮ ಮಟ್ಟದಲ್ಲಿಡಬೇಕಾಗಿದೆ.
ಅಭ್ಯಾಸ ಕ್ರಮ
1. ಈ ಹಿಂದೆ ವಿವರಿಸಿದಂತೆ ‘ಏಕಪಾದ ಸರ್ವಾಂಗಸನ’ವನ್ನು ಎರಡು ಪಕ್ಕಗಳಲ್ಲಿ ನೆರವೇರಿಸಿ ಮತ್ತೆ ‘ಸರ್ವಾಂಗಸನ’ಕ್ಕೆ ಬರಬೇಕು.
2. ಉಸಿರನ್ನುಹೊರಬಿಟ್ಟು, ಬಲಗಾಲನ್ನು ಸರಿಸಿ,ಪಕ್ಕಕ್ಕೆ ನೆಲದಮೇಲಿರಿಸಿ, ಅದನ್ನು ಮುಂಡದ ಸಮರೇಖೆಗೆ ತರಬೇಕು. ಈ ಕಾಲನ್ನು ನೇರವಾಗಿ ಬಿಗಿಯಾಗಿ ಹಿಗ್ಗಿಸಿಡುವುದರಲ್ಲಿ ಮಂಡಿಯನ್ನು ಬಗ್ಗಿಸಬಾರದು.
3. ಬಳಿಕ, ಮೇಲೆತ್ತಿ ನೆಟ್ಟಗೆ ನಿಲ್ಲಿಸಿದ ಎಡಗಾಲನ್ನು ಬಿಸಿಯಾಗಿ ಹಿಗ್ಗಿಸಡಬೇಕೇ ವಿನಾ ಅದನ್ನು ಬಲಗಡೆಗೆ ತಿರುಗಿಸಬಾರದು ಎದೆಯನ್ನು ಚೆನ್ನಾಗಿ ವಿಶಾಲಗೊಳಿಸುವ ಸಲುವಾಗಿ ಅಂಗೈಗಳಿಂದ ಪಕ್ಕೆಲುವುಗಳನ್ನು ಮೇಲೆತ್ತಬೇಕು.
4. ಈ ಬಂಗಿಯಲ್ಲಿ ಸಾಮಾನ್ಯವಾಗಿ ಉಸಿರಾಟದಿಂದ ಸುಮಾರಿ 20 ಸೆಕೆಂಡುಗಳ ಕಾಲ ನೆಲೆಸಿ ಉಸಿರನ್ನು ಹೊರಬಿಟ್ಟು ಮತ್ತೆ ಸರ್ವಾಂಗಾಸನಕ್ಕೆ ಹಿಂತಿರುಗಬೇಕು. ಇನ್ನೊಂದು ಕಾಲಿನಲ್ಲಿಯೂ ಇದೇ ವಿಧವಾದ ಭಂಗಿಯನ್ನಭ್ಯಸಿಸಿ, ಅಷ್ಟೇ ಕಾಲ ಅದರಲ್ಲಿ, ನೆಲೆಸಿ, ಮತ್ತೆ ಸರ್ವಾಂಗಾಸನಕ್ಕೆ ಹಿಂದಿರುಗಬೇಕು.
ಪರಿಣಾಮಗಳು
ಈ ಆಸನವು ಮಲಬದ್ಧತೆಯನ್ನು ಹೋಗಲಾಡಿಸಿ,ಮೂತ್ರಪಿಂಡಗಳ ಕಾರ್ಯವನ್ನು ಕ್ರಮ ಪಡಿಸುತ್ತದೆ.