ಮನೆ ಉದ್ಯೋಗ ಮಂಡ್ಯ: ಅರೆಕಾಲಿಕ ಶಿಕ್ಷಕರಿಗೆ ಅರ್ಜಿ ಆಹ್ವಾನ

ಮಂಡ್ಯ: ಅರೆಕಾಲಿಕ ಶಿಕ್ಷಕರಿಗೆ ಅರ್ಜಿ ಆಹ್ವಾನ

0

ಮಂಡ್ಯ:-ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಪೋಷಣೆ ಮತ್ತು ರಕ್ಷಣೆಯನ್ನು ಪಡೆಯು ತ್ತಿರುವ ಮಕ್ಕಳಿಗೆ ಹೆಚ್ಚುವರಿ ವಿದ್ಯಾಭ್ಯಾಸ ಒದಗಿಸಲು ಅರೆಕಾಲಿಕ ಶಿಕ್ಷಕರ ಅವಶ್ಯಕತೆಯಿದ್ದು,ಕನಿಷ್ಠ ವಿದ್ಯಾರ್ಹತೆ ಪಿಯುಸಿ,ಡಿ.ಇಡಿ, ಡಿ.ಇಎಲ್.ಇಡಿ ಶೈಕ್ಷಣಿಕ ಪದವಿ ಹೊಂದಿರುವ ದೈಹಿಕ/ಯೋಗ, ಸಂಗೀತ/ಕ್ರಾಫ್ಟ್ ಶಿಕ್ಷಕರು ಬೇಕಾಗಿದ್ದಾರೆ.

Join Our Whatsapp Group


ಪಾಠ ಹೇಳುವ ಅರೆಕಾಲಿಕ ಶಿಕ್ಷಕರ ಅವಶ್ಯಕತೆ ಇದ್ದು,ಸಾಮಾನ್ಯ ಪದವಿಯೊಂದಿಗೆ ಬಿ.ಇಡಿ ಶೈಕ್ಷಣಿಕ ಪದವಿಯನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರ ಗಳೊಂದಿಗೆ ಫೆಬ್ರವರಿ 28 ರೊಳಗೆ ಸರ್ಕಾರಿ ಬಾಲಕರ ಬಾಲಮಂದಿರ ಅಧೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ ದೂ.ಸಂ 08232-200743 ಸಂಪರ್ಕಿಸಲು ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.