ಚಾಮರಾಜನಗರ(Chamarajanagar): ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ. ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಿಳಿಸಿದರು.
ಬಿಜೆಪಿ ಸರ್ಕಾರ ಬಂದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಕಟುವಾಗಿ ಪ್ರತಿಕ್ರಿಯಿಸಿದರು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಶಾಸ್ತ್ರ ಹೇಳುತ್ತಾರಾ? ಕುಮಾರಸ್ವಾಮಿಯವರು ಬಿಜೆಪಿಯ ಹೈಕಮಾಂಡಾ? ನಮ್ಮ ಪಕ್ಷದ ಅಧ್ಯಕ್ಷರಾ? ಬಿಜೆಪಿ ಮುಖ್ಯಮಂತ್ರಿಯವರನ್ನು ಅವರು ಆಯ್ಕೆ ಮಾಡುತ್ತಾರಾ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಪ್ರಶ್ನಿಸಿದರು.