ಜಂಬೂ ದ್ವೀಪದ ಆಚೆಗೆ ಒಂದು ವಲಯಾಕಾರದಲ್ಲಿ ಲಕ್ಷ ಯೋಜನೆಗಳ ವಿಸ್ತಾರದಲ್ಲಿ ಲವಣ ಸಮುದ್ರವಿದೆ..ಆ ವಲಯದ ಹೊರಗೆ ಎರಡು ಲಕ್ಷ ಯೋಜನೆಗಳ ವಿಸ್ಕೃತದಲ್ಲಿ ಪ್ಲಕ್ಷ ದ್ವೀಪಗಳು ಏರ್ಪಟ್ಟಿದೆ ಸ್ವಾಯಂ ಭು ಮನುವು ವಂಶಿಯರಲ್ಲಿ ಅಗ್ರಗಣ್ಯನಾದ ಪ್ರಿಯತನುವ್ರತನು ತನ್ನ ಎರಡನೆ ಮಗನಾದ ಮೇಧಾ ತಿಥಿಗೆ ಈ ಪಕ್ಷ ದ್ವೀಪವನ್ನು ಧರ್ಮ ಪರಿಪಾಲನರ್ತನವಾಗಿ ಕೊಟ್ಟನು. ವೇದಾಂತಿಗೆ ಏಳು ಜನ ಗಂಡು ಮಕ್ಕಳಾದರು. ಅವರೆಲ್ಲರಿಗೂ ರಾಜ್ಯಾಧಿಕಾರವು ಸಂಪ್ರಾಪ್ತಿಸುವ ಸಮಯಕ್ಕೆ ಕ್ಷಪ್ಲದೀಪವನ್ನು ಏಳು ಭಾಗಗಳಾಗಿ ವಿಭಜಿಸಿದನು. ಆದಿತ್ಯತೇಜನರಾದ ಸುತರಿಗೆ ಆಯಾ ಖಂಡಗಳನ್ನು ಒಪ್ಪಿಸಿ ತಾನು ಚತುರ್ಥ ಆಶ್ರಮ ಸ್ವೀಕಾರ ಮಾಡಿ ತಪೋವನಕ್ಕೆ ಹೊರಟು ಹೋದನು.
ಪ್ರಿಯವ್ರತನ ಪೌತ್ರರೆಲ್ಲರೂ ಧರ್ಮಪರತಂತ್ರರಾಗಿ ಪ್ರಜಾಬಿ ರಂಜಕವಾಗಿ ಭೂಮಿಯನ್ನು ಪರಿಪಾಲಿಸಿದರು. ಪ್ಲಕ್ಷದ್ವೀಪದಲ್ಲಿನ ಸಪ್ತ ದೇಶಗಳವರು ಅವರ ನಾಮಾಕ್ಷರಗಳಿಂದ ಅಲಂಕರಿಸಿಟ್ಟು ಶಾಂತಭಯಖಂಡ, ಶಿಶಿರ ಖಂಡ, ಸುಖೋದಯ ಖಂಡ ಆನಂದಖಂಡ,ಶಿವಖಂಡ ಕ್ಷೇಮಕ ಖಂಡ, ಧೃವಖಂಡಗಳಾಗಿ ಲೋಕ ಪ್ರಸಿದ್ಧಿಯನ್ನು ಪಡೆದಿವೆ. ಪ್ಲಕ್ಷದ್ವೀಪದಲ್ಲಿ ಏಳು ಕುಲ ಪರ್ವತಗಳಿವೆ. ಅವು ರಾಜ್ಯ ಭಾಗಗಳ ಗಡಿ ಭಾಗದಲ್ಲಿದ್ದು ರಾಜ್ಯ ವಿಭಾಗ ರೇಖೆಗಳಿಗಾಗಿ ಕಾಣಿಸುವುದರಿಂದ ಇವುಗಳಿಗೆ ಕುಲ ಪರ್ವತಗಳೆಂದೂ ಸಹ ಹೆಸರಿದೆ.ಗೋಮೇಧ ಪರ್ವತ, ಚಂದ್ರ ಪರ್ವತ,ನಾರದ ದುಂಧುಬಿ ಪರ್ವತ,ಸೋಮಕ ಪರ್ವತ, ಸುಮನಃ ಪರ್ವತ,ವೈಬ್ರಾಜ ಪರ್ವತ ಈ ಸಪ್ತ ಪರ್ವತಗಳಿಂದ ಅನುತಪ್ತ, ಶಿಖಿ, ವಿಪಾಶ, ತ್ರಿದಿವ, ಕ್ರಮು, ಅಮೃತ ಸುಪ್ರಿತಾ, ನದಿಗಳು ಜನಸಿ ಸಮುದ್ರಾ ಅಭಿಮುಖವಾಗಿ ಪ್ರವೇಶಿಸುತ್ತವೆ. ಪ್ಲಕ್ಷದ್ವೀಪದಲ್ಲಿ ಶಾಶ್ವತವಾದ ವಾರ್ಣಾಶ್ರಮ ಧರ್ಮಗಳು ನೆಲೆಸಿವೆ.ಇಲ್ಲಿ ಬ್ರಾಹ್ಮಣರಿಗೂ, ಆರ್ಯಕುಲವೆಂದೂ ವ್ಯವಹರಿಸುತ್ತಾರೆ. ಕ್ಷತ್ರೀಯ ಜಾತಿಯವರನ್ನು ಕುರುಗಳೆಂದು ಕರೆಯುತ್ತಾರೆ. ವೈಶ್ಯರನ್ನು ವಿವಾಸರು ಶೂದ್ರರನ್ನು, ಭಾವಿಜನರು ಎಂದು ಸಂಬೋಧಿಸುತ್ತಾರೆ. ಕುಲ ಪರ್ವತಗಳಿಂದ ಜನಿಸಿದ ಪುಣ್ಯ ನದಿಗಳ ಧುಸ್ವಾ ಜಲವನ್ನು ಆಸ್ವಾದಿಸಿ ಇವರೆಲ್ಲರೂ ಅಪರೂಪವಾದ ಸಂತೋಷವನ್ನು ವ್ಯಾಧಿಗಳು ಹರಡದಂತಹ ಆರೋಗ್ಯ ಬಲ್ಲವನು ಸಂಪಾದಿಸಿಕೊಂಡಿದ್ದಾರೆ ಇವರು ಆಯುಷ್ಯ ಐದು ಸಾವಿರ ವರ್ಷಗಳಷ್ಟು ರ್ಘಕಾಲವಾದುದು ಜಂಬೂ ದ್ವೀಪದಲ್ಲಿ ಜಂಬೂ ವೃಕ್ಷವಿರುವಂತೆ ಈ ದ್ವೀಪದಲ್ಲಿ ಪ್ಲಕ್ಷ ವೃಕ್ಷವಿದೆ,ಇಲ್ಲಿ ಶ್ರೀಮನ್ನಾರಾಯಣ ಮೂರ್ತಿಯು ಚಂದ್ರನ ಆಕೃತಿಯಲ್ಲಿ ನೆಲೆಸಿದ್ದಾನೆ. ಭಕ್ತರಿಗೆ ಆತನು ಪ್ರಸಾದಿಸುವ ಮಾರ್ಗವೇ ದೀಪಕಾಂತಿಯಾಗಿದೆ.
ಶಾಲ್ಮಲ ದ್ವಿಪ:
ಪ್ಲಕ್ಷದ್ವಿಪವನ್ನು ಆವರಿಸಿಕೊಂಡು ವೃತ್ತಾಕಾರದಲ್ಲಿ ಎರಡು ಲಕ್ಷ ಯೋಜನೆಗಳ ಸುಮಿ ಶಾಲವಾದ ಇಕ್ಷು ಸಮುದ್ರವಿದೆ.ಅದಕ್ಕೆ ಪ್ರಕಾರವಾಗಿ ಅದಕ್ಕಿಂತಲೂ ಎರಡರಷ್ಟು ವೈಶಾಲ್ಯದಲ್ಲಿರುವ ಶಾನಲ್ಮನ ದ್ವೀಪವು ಪ್ರಿಯವ್ರತನ ಮೂರನೆಯ ಮಗ ವಪುಷ್ಮಂತನ ಆಳ್ವಿಕೆಯಲ್ಲಿ ನೆಲೆಸಿತ್ತು..
ವಪುಷ್ಮಂತನ ಮಕ್ಕಳ ಹೆಸರಿನಲ್ಲಿ ಶಾಲ್ಮಲದಲ್ಲಿ ಶ್ವೇತಖಂಡ, ಹರಿತಖಂಡ,ಜೀಮೂತ ಖಂಡ. ರೋಹಿತ ಖಂಡ, ವೈಕ್ತದ್ಯುತ ಖಂಡ,ಮಾನಸ ಖಂಡ, ಸುಪ್ರಭ ಖಂಡಗಳು ಆವತರಿಸಿವೆ. ಈ ರಾಜ್ಯಗಳ ಗಡಿಯಲ್ಲಿ ಸಪ್ತ ಮಹಾ ಪರ್ವತಗಳು ಅವುಗಳ ಶಿಖರದಿಂದ ಸಪ್ತವಾಹಿನಿಗಳು ಉದಯಿಸಿದವು.ಶಾಲ್ಮಲ ದ್ವೀಪದಲ್ಲಿನ ಸಪ್ತ ಪರ್ವತಗಳು ದುರ್ಲಭವಾದ ಮನಸ್ಥಿತಿಗಳಿಗೆ ತವರು. ಈ ಕುಲ ಪರ್ವತಗಳು ದ್ರೋಣಾಚಾರ್ಯ ಕುಮುದ ಪರ್ವತ,ಉನ್ನತ,ವಲಾಹಾಕ, ದ್ರೋಣ,ಕಂಕ ಶೈಲ, ಮಹಿಷ ಕಕುಂದ್ವತ್ವ ಇವುಗಳಲ್ಲಿ ದ್ರೋಣಾಚಲದಲ್ಲಿ ಅಂಕುರಿಸಿದ ದಿವ್ಯ ಔಷಧಿಗಳ ಪ್ರಭಾವವು ಅಮೋಘವಾದುದೆಂದು ಪ್ರಸಿದ್ಧಿಯನ್ನು ಪಡೆದಿವೆ.
ಈ ಪ್ರಾಂತದಲ್ಲಿ ಹರಿಯುವ ನದಿ ಪ್ರವಾಹಗಳು ಯೌನಿ, ತೋಯ, ವಿತೃಷ್ಣ, ಚಂದ್ರ ಶುಕ್ಲ ವಿಮೋಚನಿ ನಿವೃತ್ತಿ ಈ ನದಿಗಳಲ್ಲಿ ಪ್ರತಿನಿತ್ಯವೂ ನೈಮಿತ್ತಿಕ ಕಾಮ್ಯ ಕಾಪಿಲ ಕ್ರಿಯಾಂಗ,ಮಲಕರ್ಷಣ ಎಂಬ ಷಡ್ವಿಧವಾದ ಸ್ಥಾನಗಳನ್ನು ಆಚರಿಸಿ ಜೀವಿಗಳು ಪಾಪ ವಿಮೋಚನೆಯನ್ನು ಪಡೆಯುತ್ತಾರೆ. ಇಲ್ಲಿ ವರ್ಣಚುತುಕ್ಕೆ ಕಪಿಲರು,ಅರುಣರು,ಪೀತರು, ರೋಹಿತರು ಎಂಬ ಅಭಿದಾನಕಗಳುಂಟಾಗಿವೆ. ಈ ನೆಲದ ಮೇಲೆ ಸಾವಿರದ ನೂರು ಯೋಜನಗಳ ವೈಶಾಲ್ಯವುಳ್ಳ ಶಾಲ್ಮಲೀ ವೃಕ್ಷವು ಮಹಾಮಹಿ ಮಾನ್ವಿತವಾಗಿ ನೆಲೆಸಿದೆ. ಶಾಲ್ಮಲ ದ್ವೀಪದಲ್ಲಿ ಶ್ರೀಮಹಾವಿಷ್ಣು ಯಜ್ಞ ಹೋಮಗಳನ್ನು ವಾಯುವಿನ ರೂಪದಲ್ಲಿ ಸ್ವೀಕರಿಸಿ ಭಕ್ತರಿಗೆ ಜೀವ ಮೋಕ್ಷವನ್ನು ಅನುಗ್ರಹಿಸುತ್ತಿದ್ದಾನೆ.
ಶುಕ ದ್ವೀಪ:
ಶಾಲ್ಮಲ ದ್ವೀಪ ಹೊರೆಗೆ ವ್ಯಾಪಿಸಿದ ಸುರಾ ಸಮುದ್ರವನ್ನು ಸುತ್ತುವರಿದು 8 ಲಕ್ಷ ಯೋಜನೆಗಳ ಶುಕ ದ್ವೀಪವು ಪ್ರಿಯವರ್ತನ ಪುತ್ರನಾದ ಜ್ಯೋತಿಷ್ಯಂತನ ಆಳ್ವಿಕೆಯಲ್ಲಿತ್ತು, ಇವನಿಗೂ ಸಹ ಏಳು ಜನ ಗಂಡುಮಕ್ಕಳು ಜನಿಸಿ, ಕುಲದೀಪಕರಾಗಿ ಜೀವಿಸಿದರು. ಇವರ ಹೆಸರಿನಲ್ಲಿಯೇ ಉದ್ಬದಖಂಡ, ವೇಣುಮಾನಖಂಡ, ಸೈರಥಖಂಡ, ಲವಣಖಂಡ, ದೃತಿಖಂಡ, ಪ್ರಭಾಕರಖಂಡ,ಕಪಿಲಖಂಡಗಳು ನೆಲೆಸಿದವು ಈ ದ್ವೀಪದಲ್ಲಿನ ಚಾತುರ್ವಣ್ಯ, ದಮಿ, ಸುಷಿಮ, ಸ್ನೇಹ, ಮಂದೇಹ ಎಂಬ ನಾಮಧೇಯರು ಇವರೆಲ್ಲರೂ ವಿಶ್ವಾಸವಾಸನದ ವಾಸುದೇವನನ್ನು ಬ್ರಹ್ಮನ ಆಕೃತಿಯಲ್ಲಿ ಆರಾಧಿಸಿ ವಿಹಿತ ಧರ್ಮಾಚರಣೆ ಮಾಡುತ್ತಿದ್ದಾರೆ.ಇಲ್ಲಿ ವಿದ್ರುಮ, ಹೇಮಶೈಲ, ದ್ಯುತಿಮಂತ,ಪುಷ್ಪಮಂತ, ಖುಷಮ ಕುಶೇಶಯ,ಹರಿ, ಮಂದಾರ, ಸಂಜ್ಞೆಗಳೊಂದಿಗೆ ಮುಖ್ಯ ಕುಲ ಪರ್ವತಗಳು ಧೂತ ಪಾಪ,ಶಿವ, ಪವಿತ್ರ,ಸಮ್ಮತಿ, ವಿದ್ಯುದಂಭ, ಮಹಾವನ್ಯ, ಸರ್ವ ಪಾಪಹರ ನಾಮಗಳೊಂದಿಗೆ ಸಪ್ತ ಪ್ರವಾಹಗಳು ನೆಲೆಸಿವೆ. ಇದಲ್ಲದೆ ಶುಕ ಪ್ರಾಂತದಲ್ಲಿ ಅನೇಕ ಭೂಮಿ ಧರಗಳು, ಸ್ತೋತಸ್ವೀನಗಳೂ ಸಹ ಇವೆ.ಪವು ಈ ದ್ವೀಪವು ಶುಕಾರ್ಜುನಗಳಿಗೆ ತುಂಬಾ ಪ್ರಖ್ಯಾತಿಯಾದುದು.
ಕ್ರೌಂಚ ದ್ವೀಪ:
ಶುಕ ದ್ವೀಪವನ್ನು ಆವರಿಸಿರುವ ಘೃತ ಸಮುದ್ರಕ್ಕೆ ಬಹಿರ್ವಲಯದಲ್ಲಿ 16 ಲಕ್ಷ ಯೋಜನೆಗಳ ವಿಸ್ತಾರದೊಂದಿಗೆ ಪ್ರಮುಖ್ಯತೆ ಕ್ರೌಂಚ ದ್ವೀಪವು ಗೋಚರಿಸುತ್ತದೆ.ಪ್ರಿಯವ್ರತನ ಪುತ್ರನಾದ ದ್ವಿತಿಮಂತನು ಈ ಮಹಾ ಸಾಮ್ರಾಜ್ಯವನ್ನು ಪರಿಪಾಲಿಸಿದ ಕಾಲದಲ್ಲಿ ಪುಷ್ಕರರು,ಪುಷ್ಕಲರು, ಧನ್ಯರು, ತಿಷ್ಯರು ವರ್ಣಾಶ್ರಮ ಧರ್ಮಗಳನ್ನು ವೇದೂಕ್ತವಾಗಿ ಅನುಸ್ಥಾಪಿಸಿದರು. ಈ ಪವಿತ್ರ ಕ್ಷೇತ್ರದಲ್ಲಿ ಯಜ್ಞ ಪುರುಷನಾದ ನಾರಾಯಣನು ಶ್ರೀ ರುದ್ರ ಕೃತಿಯಲ್ಲಿ ನೆಲೆಸಿ ತನ್ನ ಭಕ್ತರನ್ನು ಕಾಪಾಡುತ್ತಿದ್ದಾನೆ. ಕೌಂಚ ದ್ವೀಪದಲ್ಲಿ ಬೃಂದಾರಕ ಬೃಂದಗಳಿಗೆ ಪರ್ವತಗಳಾದ ಕ್ರೋಕ್ಯ ವಾಮನ ಅಂಧಕಾರಕ ದೇವರು ಮಕ್ಕಳ ರಾಜ್ಯ ಭಾಗಗಳು ಗೋಚರಿಸುತ್ತವೆ ವಾಸ ಮಂದಿರಗಳಾದ ಮಹಾ ಕುಲ ಪರ್ವತಗಳಾದ ಕ್ರೌಂಚ, ವಾಮನ, ಅಂಧಕಾರಕ, ದೇವವೃತ, ಪೌಂಡರೀಕವಂತ ದುಂಧುಬಿ ಮಹಾಶೈಲಗಳಿವೆ. ಈ ಪರ್ವತದ ಪ್ರಕಾರಗಳ ಅಂತರ್ವರ್ತರಾಗಿ ದ್ವಿತೀಮಂತನ ಮಕ್ಕಳ ರಾಜ್ಯ ಭಾಗಗಳು ಗೋಚರಿಸುತ್ತವೆ. ಕುಶಲಖಂಡ ಮಖಂಡಲ್ಲ, ಉಷ್ಣ ಖಂಡ,ಪೀಪರಖಂಡ ಅಂಧಕಾರ ಖಂಡ,ಮುನಿಖಂಡ, ದುಂಧುಬಿ ಖಂಡವೆಂದು ಹೆಸರುಗಳಿವೆ, ಪರ್ವತದ ಶಿಖರಗಳಿಂದ ಗೌರಿ, ಕುಮುದ್ವತಿ, ಸಂಧ್ಯ, ರಾತ್ರಿ ಮನೋಜವ, ಕ್ಷಾಂತಿ ಪುಂಡರೀಕ ಮಹಾನದಿಗಳು ಅವಿರ್ಭವಿಸಿ ಪ್ರಜಾ ವಾಸಗಳನ್ನು ಸಸ್ಯ ಶ್ಯಾಮಲವನ್ನಾಗಿಸುವಂತೆ ಮಾಡಲು ಸಹಕರಿಸುತ್ತೇವೆ. ದ್ಮಮಮ ದ್ಯುತಿ ಮಂತನ ಮಕ್ಕಳೆಲ್ಲರೂ ಭೀಮ ಭೀಮಬಲರೇ ಆಗಿದ್ದರೂ, ಶಾಂತಚಿತ್ತರಾಗಿ ಧರ್ಮವನ್ನು ಗೌರವಿಸಿ,ಅವರೆಲ್ಲರೂ ವೈಷ್ಣವಗ್ರೇಸರರಾಗಿ ಪ್ರಸಿದ್ಧಿಯನ್ನು ಪಡೆದರು.