ಮನೆ ಯೋಗಾಸನ ಪರ್ಯಂಕಾಸನ

ಪರ್ಯಂಕಾಸನ

0

‘ಪರ್ಯಂಕ’ ಎಂದರೆ ಮಂಚ ಇಲ್ಲವೇ ಅದರ ಮೇಲಿನ ಹಾಸಿಗೆ ಅಥವಾ ‘ಸೋಫ’. ಈ ಆಸನವು ಸಪ್ತವೀರಾಸನದಿಂದ ಮುಂದುವರಿದದ್ದು ಈ ಭಂಗಿಯ ಮಂಚದ ಮೇಲೆ ಹಾಸಿದ ಹಾಸಿಗೆಯನ್ನು ಹೋಲುವುದರಿಂದ ಈ ಹೆಸರು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ‘ವೀರಾಸನ’ದಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕು.

2. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು,ಬೆನ್ನನ್ನು ಹಿಂದಕ್ಕೆ ಒರಗಿಸಬೇಕು. ಆಮೇಲೆ ಬೆನ್ನನ್ನು ಮೇಲೆತ್ತಿ.ಬಿಲ್ಲಿನಂತೆ ಬಗ್ಗಿಸಿ, ನೆಲದಮೇಲೆ ನಡುನೆತ್ತಿ ಯನ್ನೂರಿ, ಅದನ್ನೇ ಆಧಾರ ಮಾಡಿಕೊಂಡು ಕತ್ತನ್ನೂ ಎದೆಯನ್ನೂ ಮೇಲೆತ್ತಿ ಮುಂಡದ ಯಾವ ಭಾಗವನ್ನು ನೆಲಕಂಟ್ಟಿದಂತಿರಬೇಕು.

3. ಇದಾದಮೇಲೆ, ತೋಳುಗಳನ್ನು ಮೊಣಕೈಯಲ್ಲಿ ಭಾಗಿಸಿ, ಬಲಗೈಯಿಂದ ಎಡದ ಮೇಲ್ದೋಳನ್ನೂ, ಎಡಗೈಯಿಂದ ಬಲದ ಮೇಲ್ದೋಳನ್ನೂ ಮೊಣ ಕೈಗಳ  ಬಳಿ  ಗಟ್ಟಿಯಾಗಿ ಹಿಡಿದು. ಈ ಬಗ್ಗಿಸಿದ ತೋಳ್ಬೆಲೆಯನ್ನು ತಲೆಯ ಹಿಂಬದಿಗೆ ತಂದು ನೆಲದ ಮೇಲೆ ಊರಿಡಬೇಕು.

4. ಸಾಮಾನ್ಯ ಉಸಿರಾಟದಿಂದಲೇ ಈ ಭಂಗಿಯಲ್ಲಿ ಸುಮಾರು ಒಂದು ನಿಮಿಷ ನೆನೆಸಬೇಕು.

5. ಅನಂತರ ಉಸಿರನ್ನು ಒಳಕ್ಕೆಳೆದು ಮುಂಡವನ್ನೂ ಕತ್ತನ್ನೂ ಮೆಲ್ಲಕೆ ನೆಲಮಟ್ಟಕ್ಕೆ ತಂದು ತೋಳ್ಬಿಗಿತವನ್ನು ಸಡಿಲಿಸಿ, ವೀರಾಸನದಲ್ಲಿ ಮತ್ತೆ ಕುಳಿತುಕೊಳ್ಳಬೇಕು.6.    ಅನಂತರ ಕಾಲುಗಳನ್ನು ಒಂದಾದ ಮೇಲೊಂದರಂತೆ ಸಡಿಲಿಸಿ, ನೆಲದ ಮೇಲೆ ಬೆನ್ನನ್ನೂ ರಗಿಸಿ ಮಲಗಿ ಮಿಶ್ರಮಿಸಿ ಕೊಳ್ಳಬೇಕು.

ಪರಿಣಾಮಗಳು    

‘ಮತ್ಸಾೄಸನ ’ದಲ್ಲಿರುವಂತೆ ಪರ್ಯಾ ಕಾಸನದಲ್ಲಿಯೂ ಬೆನ್ನೆಲುವಿನ ಭಾಗ ಚೆನ್ನಾಗಿ ಹಿಗ್ಗುವುದರಿಂದ ಶ್ವಾಸಕೋಶಗಳೂ ಕೂಡ ಹೆಚ್ಚು ವಿಕಾಸವನ್ನು ಪಡೆಯುವವು. ಕತ್ತಿನ ಮಾಂಸಖಂಡಗಳು ಜಗ್ಗಾಟಕ್ಕೊಳಗಾಗುವುದರಿಂದ ಥೈರಾಯಿಡ್ ಎಂಬ ಗೋಮಾಳದ ಅಥವಾ ಕಂಠಮಣಿಯ ಹಿಂಭಾಗದ ಗ್ರಂಥಿಗಳು(Thyroid glands)ಮತ್ತು ಅವಕ್ಕೆ ಸಂಬಂಧಿಸಿದ  ಪ್ಯಾರಾ ಥೈರಾಯಿಡ್ (para Thyroid Glands)ಗ್ರಂಥಿಗಳು ತಮ್ಮ ತಮ್ಮ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಈ ಆಸನವು ತುಂಬಾ ಉಪಯುಕ್ತವಾಗಿದೆ.‘ಮತ್ಸಾೄಸನ’ವನ್ನು ಅಭ್ಯಸಿಸಲಾಗದವರು ಈ ಆಸನಾಭ್ಯಾಸದಿಂದ  ಹೆಚ್ಚು ಲಾಭವನ್ನು ಪಡೆಯಬಹುದು.