ಕಾರವಾರ(Karawara): ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಮೂಲದ ಗಣಪತಿ ವಿ.ಭಟ್ ಎಂಬ ವ್ಯಕ್ತಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಬಂಧಿತ ಗಣಪತಿ ಭಟ್ ಗೃಹ ಇಲಾಖೆ ನೌಕರನಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತ ಆರೋಪಿ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಟ್ರಾನ್ಸ್‌ಫರ್ ಹಾಗೂ ಇತರ ಡೀಲಿಂಗ್‌ಗಳಲ್ಲಿ ಸಕ್ರಿಯವಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಗಣಪತಿ ವಿ.ಭಟ್ ಅಕ್ರಮ ಚಟುವಟಿಕೆಯಿಂದ ಆಸ್ತಿ ಸಂಪಾದಿಸಿದ್ದ, ನಿನ್ನೆ ಬೆಂಗಳೂರಿನಿಂದ ಸಿದ್ಧಾಪುರದ ಹೇಗೂರಿಗೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ಅರೋಪಿ ಗಣಪತಿಯನ್ನು ಬಂಧಿಸಿ ವಶಕ್ಕೆ ಪಡೆದಿರುವುದಲ್ಲದೇ ರಾತ್ರಿಯೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಗಣಪತಿ ವಿ.ಭಟ್ ವಿಚಾರಣೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಗಣಪತಿ ವಿ ಭಟ್ ಎಂಬ ವ್ಯಕ್ತಿಗೂ ಗೃಹ ಇಲಾಖೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಶಿರಸಿ ಮೂಲದ ವ್ಯಕ್ತಿ ಗಣಪತಿ ಭಟ್‌ರನ್ನು ಎಲ್ಲಾ ಹಂತದಲ್ಲಿ ತನಿಖೆ ಮಾಡಲಾಗುತ್ತಿದೆ. ಹೆಸರಿನ ವಿಚಾರದಲ್ಲಿ ಕೆಲ ಗೊಂದಲ ಆಗಿತ್ತು. ನನ್ನ ಕಚೇರಿಯಲ್ಲೂ ಗಣಪತಿ ಭಟ್ ಅಂತ ಇದ್ದಾರೆ. ಹೀಗಾಗಿ ಗೊಂದಲ ಆಗಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಅಕ್ರಮದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ: 545 ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಬಗ್ಗೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದೆ. ನಗರದ ಸ್ಥಾನಜೋತಿ ಇಂಗ್ಲಿಷ್ ಶಾಲೆಯಲ್ಲಿನ ಅಕ್ರಮಕ್ಕೆ ಸಂಬಂಧ 34 ಅರೋಪಿಗಳ ವಿರುದ್ಧ 5 ದಿನದ ಹಿಂದೆ ಕಲಬುರಗಿ 3ನೇ ಜೆಎಂಎಫ್ ಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಅನೇಕ ಶಾಕಿಂಗ್ ಸಂಗತಿಗಳು ಉಲ್ಲೇಖಿಸಲಾಗಿದ್ದು, ಶಾಸಕ ವೈ.ಎಂ.ಪಾಟೀಲ್ ನಂತ್ರ ಅರುಣ್ ಕುಮಾರ್, ಶಾಸಕರ ಸಹೋದರ ಎನ್.ವೈ.ಪಾಟೀಲ್ ಹೆಸರನ್ನು ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಪ್ರಸ್ತಾಪ ಮಾಡಿದರು. ಶಾಸಕರ ಗನ್ ಮ್ಯಾನ್ ಶಯ್ಯಾಗಿ ದೇಸಾಯಿ ಪರ ಡೀಲ್ ಮಾಡಿದ್ದು, ಅರುಣ್ ಕುಮಾರ್ ಪಾಟೀಲ್ ತನಗೆ ಕರೆ ಮಾಡಿದ್ದರು. ದೇನಾಯಿಗೆ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಹೇಳಿದರು. ಎಸ್.ವೈ.ಪಾಟೀಲ್ ಜೊತೆ ಮಾತನಾಡಿ 30 ಲಕ್ಷಕ್ಕೆ ಡೀಲ್ ಮಾಡಲಾಗಿದೆ ಎಂದು ಜಾರ್ಜ್ ಶೀಟ್‌ನಲ್ಲಿನ ಸ್ವಖುಷಿ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.