ಮುಂಬೈ(Mumbai): ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಪ್ರಯಾಣಿಕ ರೈಲು ಹಳಿ ತಪ್ಪಿದ್ದು, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಗೊಂದಿಯಾದಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ 2.30ರ ವೇಳೆಗೆ ಘಟನೆ ಸಂಭವಿಸಿದ್ದು, ಒಟ್ಟು ಮೂರು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕ ರೈಲು ಛತ್ತೀಸಗಢದ ಬಿಸಾಲ್ಪುರದಿಂದ ರಾಜಸ್ಥಾನಕ್ಕೆ ಜೋಧಪುರಕ್ಕೆ ಸಂಚರಿಸುತ್ತಿತ್ತು. ಮೂಲಗಳ ಪ್ರಕಾರ, ಸಿಗ್ನಲ್ ಸಮಸ್ಯೆಯಿಂದ ಅವಘಡ ಸಂಭವಿಸಿದೆ. ಪ್ರಯಾಣಿಕ ರೈಲಿನ ಚಾಲಕ ತುರ್ತು ಬ್ರೇಕ್ ಹಾಕಲು ಶ್ರಮಿಸಿದರೂ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು.














