ಪವನಮುಕ್ತಾಸನಕ್ಕೆ ಪೃಷ್ಠಾಸನ, ದ್ವಿಪಾದ ಪವನಮುಕ್ತಾಸನವೆಂಬ ಹೆಸರುಗಳೂ ಇವೆ.
ಮಾಡುವ ಕ್ರಮ: 1) ನೆಲದ ಮೇಲೆ ಯೋಗಾಭ್ಯಾಸಿಯು ಅಂಗಾಂತನಾಗಿ, ನೇರವಾಗಿ ಮಲಗಬೇಕು, 2) ಉಸಿರನ್ನು ನಿಧಾನವಾಗಿ ಒಳಕ್ಕೆ ತೆಗೆದುಕೊಳ್ಳತ್ತ ಎರಡೂ ಕಾಲನ್ನು ಮಡಿಸಿ ಮಂಡಿಗಳು ಎದೆಯ ಮೇಲೆ ಬರುವಂತೆ ಬಗ್ಗಿಸಬೇಕು. 3)ಉಸಿರನ್ನು ಹೊರಕ್ಕೆ ಬಿಡುತ್ತಾ ಚಿತ್ರದಲ್ಲಿ ತೋರಿಸಿರುವಂತೆ ಕತ್ತನ್ನು ಮುಂದಕ್ಕೆ ಬಗ್ಗಿಸಿ, ಮೂಗು ಮಂಡಿಗೆ ಮುಟ್ಟಿಸಲು ಪ್ರಯತ್ನಿಸಬೇಕು. 4) ಕಾಲುಗಳನ್ನು ಎರಡೂ ಕೈಗಳಿಂದ ಸುತ್ತಿ ಪರಸ್ಪರ ಹಿಡಿದುಕೊಳ್ಳಬೇಕು. ಇದೇ ಸ್ಥಿತಿಯಲ್ಲಿ ಶರೀರವನ್ನು ಹಿಂದಕ್ಕೂ ಮುಂದಕ್ಕೂ (ಮಕ್ಕಳ ಆಟದ ಕುದುರೆಯಂತೆ) ತೂಗಾಡಿಸಬೇಕು. ಹೀಗೆ ತೂಗಾಡುವುದನ್ನು ‘ಪವನಯುಕ್ತಾಸನ ಕ್ರಿಯಾ’ ಎನ್ನುತ್ತಾರೆ. ಈ ಕ್ರಿಯೆಯನ್ನು ಎರಡು ಪಕ್ಕದಲ್ಲೂ ಮಾಡಬಹುದು. ಇದರಿಂದ ಯೋಗಾಭ್ಯಾಸಿಯ ಬೆನ್ನೆಲುಬು ಆತನ ಅಧೀನವಾಗುವುದು. ಈ ಆಸನ ಮತ್ತು ಕ್ರಿಯೆಯನ್ನು ಐದು – ಹತ್ತು ನಿಮಿಷಗಳ ಕಾಲ ಸುಲಭವಾಗಿ ಮಾಡಬಹುದು.
ಲಾಭಗಳು: ಏಕಪಾದ ಪವನ ಮುಕ್ತಾಸನದ ಎಲ್ಲ ಲಾಭಗಳನ್ನೂ ಈ ಆಸನ ಅಭ್ಯಾಸದಿಂದ ಯೋಗಾಭ್ಯಾಸಿಯು ಪಡೆಯುತ್ತಾನೆ. ಈ ಆಸನದ ಸತತ ಅಭ್ಯಾಸವು ಜಠರದ ಅನೇಕ ವಿಕಾರಗಳನ್ನು ನಾಶಮಾಡುವುದು.